ಧಾರವಾಡ08: ಧಾರವಾಡದಂತ ಸಾಂಸ್ಕೃತಿಕ ನೆಲೆಯಲ್ಲಿ ಸಕ್ರೀಯವಾಗಿ ಸಾಹಿತ್ಯ,ಕಲೆಗಳಲ್ಲಿ ತೊಡಗಿಕೊಳ್ಳುವುದರಿಂದ ಉತ್ಕೃಷ್ಟವಾದ ಉತ್ಪಾದನೆ ಬರುತ್ತದೆ. ಎಕೆಂದರೆ ಇಲ್ಲಿನ ಮಿಮರ್ಶಕರ ಶಿಲುಭೆಯಲ್ಲಿ ಸಿಕ್ಕು, ಜೊಳ್ಳು ಎಲ್ಲ ಹೊರಹೋಗಿ ಗಟ್ಟಿಯಾದ ಮತ್ತು ಪ್ರಭುದ್ದವಾದ ಕಲೆ, ಸಾಹಿತ್ಯ ಹೊರಬರುತ್ತದೆ. ಹಾಗಾಗಿ ಧಾರವಾಡದ ಮಣ್ಣಿನ ಸತ್ವವೇ ಎಲ್ಲವನ್ನು ಪಳಗಿಸುತ್ತದೆ. ಅದರಲ್ಲೂ ರಂಗಭೂಮಿಯು ಸಾಹಿತ್ಯದಲ್ಲಿನ ಕಥೆ,ಭಾಷೆ, ವಿಷಯವಸ್ತು ನಿರೂಪಣೆಯ ಶೈಲಿ ಹೀಗೆ ಎಲ್ಲ ಪ್ರಕಾರಗಳನ್ನು, ಕಲೆಗಳಾದ ಸಂಗೀತ, ಅಭಿನಯ, ವಾದ್ಯ ಪ್ರಕಾರಗಳು, ರಂಗಸಜ್ಜಿಕೆಯ ಬಳಕೆ, ನೆಪಥ್ಯದ ಕಾರ್ಯ ಇತ್ಯಾದಿಗಳನ್ನು ಸಮಗ್ರವಾಗಿ ನಾಟಕದಲ್ಲಿ ಅಳವಡಿಕೆಯಾಗುವುದರಿಂದ ರಂಗಭೂಮಿಯಲ್ಲಿ ಒಗ್ಗೂಡಿಸುವಿಕೆ ತುಂಬಾ ಕಷ್ಟದಾಯಕವಾದ ಕಾರ್ಯ. ಈ ರಂಗಭೂಮಿಯಲ್ಲಿ ತೊಡಗಿಕೊಂಡವರಿಗೆ ಪ್ರತಿಯೊಬ್ಬ ಕಲಾಸಕ್ತರು ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕಿ ಮಂಜುಳಾ ಯಲಿಗಾರ ಹೇಳಿದರು.
ಅವರು ರಂಗಸಂಗ ಸಂಸ್ಥೆ ಅರ್ಪಿ ಸುವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ದಿ. ರಶ್ಮಿ ಮಂಜುನಾಥ ನಾಯಕ ಇವರ ನೆನಪಿನಲ್ಲಿ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಂಡ ರಂಗೋತ್ಸವ-2019ನ್ನು ಉದ್ಘಾಟಿಸಿ ಮಾತನಾಡುತ್ತಾ ರಂಗಸಂಗ ಸಂಸ್ಥೆ ಮತ್ತು ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನವು ಬಹಳ ಉತ್ತಮವಾದ ಸಂಘಟನೆಯೊಂದಿಗೆ ಮನರಂಜನೆಯನ್ನು ನೀಡುವದರ ಜತೆಯಲ್ಲಿ ಮರೆಯಾಗುತ್ತಿರುವ ಕಲೆಗಳನ್ನು ಯುವ ಜನತೆಯಲ್ಲಿ ಅದರ ಬೀಜವನ್ನು ಬಿತ್ತುವ ಕೆಲಸ ಮಾಡುತ್ತಾ ಆ ಕಲೆಗಳನ್ನು ಉಳಿಸುವ, ಬೆಳೆಸುವ ಕಾರ್ಯ ಮಾಡುತ್ತಿರುವುದು ಸಂತಷದ ವಿಷಯ. ಕಲಾವಿದರಿಗೆ ಮತ್ತು ಕಲೆಗಳಲ್ಲಿ ತೊಡಗಿಕೊಂಡ ಸಂಸ್ಥೆಗಳಿಗೆ ಸಹಕಾರದಿಂದ ಪ್ರೋತ್ಸಾಹವನ್ನು ಎಲ್ಲರು ನೀಡಬೇಕೆಂದು ಹೇಳಿದರು.
ಕಲೆಗಳಲ್ಲಿ ತೊಡಗಿಕೊಂಡಾಗ ಮನಸ್ಸು ನೆಮ್ಮದಿಯಿಂದ ಹೊಸಹೊಸ ಯೋಚನೆಯಿಂದ ಉಲ್ಲಾಸ ಜೀವನ ಸಾಗಿಸಲು ಸಹಾಯಕವಾಗಲಿದೆ. ಇಲ್ಲವಾದರೆ ಸಮಾಜಘಾತುಕ ಕಾರ್ಯದಲ್ಲಿ ಯುವ ಸಮುದಾಯ ಇರುವುದು ಬೇಸರದ ಸಂಗತಿ ಎಂದು ಪ್ರೀಯಾಂಕ ರೆಡ್ಡಿ ಸಾವಿನಂತಹ ಹೇಯ ಕೃತ್ಯವನ್ನು ಖಂಡಿಸುತ್ತಾ ಪೋಲಿಸ ಇಲಾಖೆಯ ಕಾರ್ಯಕ್ಕೆ ಅಭಿನಂದನೆಗಳನ್ನು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಕೆ.ಎಚ್.ನಾಯಕ ಮಾತನಾಡಿ ಕಲೆಗಳು ಸದಾ ಜೀವಂತವಾಗಿರಬೇಕಾದರೆ ಅವುಗಳ ಪ್ರದರ್ಶನ ನಿರಂತರವಾಗಿ ನಡಿತಾ ಇರಬೇಕು, ಆ ಕಲೆಗಳ ಕುರಿತು ಯುವ ಸಮುದಾಯದ ಜೊತೆ ಚಚರ್ೆಯಾಗಬೇಕು. ಅಂದಾಗ ಮಾತ್ರ ಆ ಕಲೆಗಳು ಸದಾ ಎಲ್ಲರ ಮನಸ್ಸಿನಲ್ಲಿ ಉಳಿದು ಅವುಗಳು ನಿರಂತರವಾಗಿ ಸಮಾಜದಲ್ಲಿ ಹಸಿರಾಗಿರಲು ಸಾಧ್ಯ ಎಂದು ಹೇಳಿದರು.
ರಂಗಕರ್ಮಿ ಗಳಾದ ಗೋಪಾಲ ಉಣಕಲ ವೇದಿಕೆಯಲ್ಲಿದ್ದು ಮಾತನಾಡಿದರು.
ಮುಖ್ಯ ಅತಿಥಿಗಳಾದ ಮೇರು ಐಎಎಸ್ & ಕೆಎಎಸ್ ಸ್ಟಡಿ ಸೆಂಟರಿನ ನಿದರ್ೇಶಕರಾದ ಡಾ. ರುದ್ರೇಶ ಮೇಟಿ ಮಾತನಾಡಿ ಇಲಾಖೆಯಿಂದ ಕಲಾವಿದರ ಪ್ರೋತ್ಸಾಹಕ್ಕೆ ಮತ್ತು ಅಳಿವಿನಂಚಿನಲ್ಲಿರುವ ಕಲೆಗಳ ಉಳಿವಿಗಾಗಿ ಸಾಂಸ್ಕೃತಿಕ ಸೌರಭದ ಮೂಲಕ ಗ್ರಾಮೀಣ ಭಾಗಕ್ಕೆ ನಾವೇ ಹೋಗಿ ಅವರ ಕಲಾ ಪ್ರದರ್ಶನಕ್ಕೆ ಅವಕಾಶ ನೀಡುತ್ತಿದ್ದೇವೆ. ಎಲ್ಲ ಕಲಾ ಪ್ರಕಾರದ ಕಲಾವಿದರು ಸಕ್ರೀಯವಾಗಿ ತೋಡಗಿಕೊಳ್ಳುವುದೆ ಈ ಕಾರ್ಯದ ಉದ್ದೇಶವಾಗಿದೆ ಎಂದು ಹೇಳಿದರು.
ನಾಟಕೋತ್ಸವದ ಸಂಚಾಲಕರು, ಸಾಹಿತಿಗಳಾದ ಮಾತರ್ಾಂಡಪ್ಪ ಎಮ್.ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೇಮಾನಂದ ಶಿಂಧೆ ಪ್ರಾರ್ಥಸಿದರು. ಸಂಪನ್ಮೂಲ ವ್ಯಕ್ತಿಯಾದ ಬಸವರಾಜ ದೇಸೂರ ನಿರೂಪಿಸಿದರು. ಪವನ ಆದಿ ಸ್ವಾಗತಿಸಿದರು. ರಾಜ್ ಕವಡೆನವರ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಆಡಿ.ತಚಿಟಿಚಿಟಿಜ ಜಣಣಜಡಿ, ತತಜಞ ಞಚಿಣಚಿಡಿಞ, ಗಾಯಕರಾದ ಶಿವಾನಂದ ಹೂಗಾರ, ಕೇಶವ ಬಡಿಗೇರ, ಮುಂತಾದವರು ಇದ್ದರು.
ಕಾರ್ಯಕ್ರಮದ ನಂತರ "ಶ್ರದ್ಧಾ" ನಾಟಕ ಪ್ರಧರ್ಶನಗೊಂಡಿತು.
ನಾಟಕದ ಕುರಿತು : ಶ್ರದ್ಧಾ
ಶ್ರದ್ಧಾ ಒಂದು ಬಾಲ್ಯಕಾಲದ ಚಿತ್ರಣ 'ಮನಸುಖರಾಯನ ಮನಸು' ಎಂಬ ಸಂಕಲನದಲ್ಲಿ ಬರುವ ಒಂದು ಪ್ರಬಂಧವಿದು. ನಿರೂಪಕನು ತನ್ನ ತಂದೆಯ ಶ್ರಾದ್ಧದ ದಿನದಂದು ತನ್ನ ತಂದೆಯನ್ನು ನೆನಪಿಸಿಕೊಳ್ಳುತ್ತ, ಬಾಲ್ಯದಿಂದಲೂ ತನ್ನ ತಂದೆಯೊಡಗಿದ್ದ ಒಡನಾಟವನ್ನು ಈ ಪ್ರಬಂಧ ಹೇಳುತ್ತಾ ಹೋಗುತ್ತದೆ. ವೈದ್ಯರೇ ಹೇಳಿದಂತೆ ನಿರೂಪಣೆ ಶೈಲಿಯಲ್ಲಿ ಯಾವುದೇ ಕಟ್ಟು ಕಟ್ಟಲೇಗಳಿಲ್ಲದೆ, ಲಂಗು ಲಗಾಮಿಲ್ಲದೆ ಮನ ಬಂದಂತೆ ಹಬ್ಬಿದ ಕಥೆಯಿದು, ಆ ಕಾರಣದಿಂದಲೇ ಇಲ್ಲಿ ಕಥಾನಾಯಕನ ಮನಸ್ಸುಗಳು ರಂಗದ ಮೇಲೆ ಪಾತ್ರಗಳಾಗಿ ಬಂದು ಕಥೆಯನ್ನು ನಿರೂಪಿಸುತ್ತವೆ. ಸ್ವಾತಂತ್ರ್ಯ ಬಂದ ಆಸುಪಾಸಿನ ಕಾಲಮಾನದ ಧಾರವಾಡದ ಬ್ರಾಹ್ಮಣ ಕುಟುಂಬವೊಂದರ ಕಥೆಯಿದು ಆ ಕಾಲದ ತಂದೆಯರು ಮಕ್ಕಳೊಂದಿಗೆ ಸ್ವಲ್ಪ ನಿಷ್ಠುರವಾಗಿ ,ಕಠೋರವಾಗಿ ನಡೆದುಕೊಳ್ಳುತ್ತಿದ್ದರು. ಹಾಗೆಂದು ಅವರ ಮನದಲ್ಲಿ ಪ್ರೀತಿ ವಾತ್ಸಲ್ಯಗಳು ಇಲ್ಲ ಎಂದಲ್ಲ ಅವು ವ್ಯಕ್ತವಾಗುತ್ತಿದ್ದ ರೀತಿ ಭಿನ್ನವಾಗಿರುತ್ತದೆ. ಬಾಲ್ಯದಿಂದಲೂ ತಂದೆಯ ಕಠೋರ - ನಿಷ್ಠುರ ವ್ಯಕ್ತಿತ್ವವನ್ನು ನೋಡುತ್ತಾ ಬೆಳೆದ ಕಥಾನಾಯಕನಿಗೆ ವೃತ್ತಿ ಜೀವನಕ್ಕೆ ಕಾಲಿಟ್ಟು ಮುಂಬೈಗೆ ಹೊರಟಾಗ ಭಾವುಕರಾದ ತಂದೆ ಚಿತ್ರಣ ಅವರು ತೀರಿ ಹೋಗಿ ಎಷ್ಟು ವರ್ಷಗಳಾದರೂ ಕಣ್ಮುಂದೆ ಬರುತ್ತಿರುತ್ತದೆ ಆ ನೆನಪುಗಳ ಕುಣಿಕೆಯೇ ಶ್ರದ್ಧಾ.
ಈ ನಾಟಕವನ್ನು ಕೃತಿ ಆಕೃತಿ ಕಲಾಟ್ರಸ್ಟ, ಬೆಂಗಳೂರು ಇವರ ಪ್ರಸ್ತುತಿಯ ಶ್ರೀನಿವಾಸ ವೈದ್ಯ ರಚನೆಯ, ನಿರಜಂನ ಕಾಲಿಕೊಡ ನಿದರ್ೇಶನದ ಶ್ರದ್ದಾ ನಾಟಕವನ್ನು ಕಲಾವಿದರಾದ ಮನಸ್ಸು ಪಾತ್ರದಲ್ಲಿ ಪವನ ದೇಶಪಾಂಡೆ, ನಿರಜಂನ ಕಾಲಿಕೊಡ, ಶಿನು ಪಾತ್ರದಲ್ಲಿ ಧನುಷ್ನಾಗ್, ಶಿನು ತಂದೆಯ ಪಾತ್ರದಲ್ಲಿ ರಾಕೇಶ ದಳವಾಯಿ, ಗಾಯಕವಾಡ ದಾಧಾ ಪಾತ್ರದಲ್ಲಿ ಪ್ರಥಾಪ್ರಾಜ್, ಶಿನು ತಾಯಿಯ ಪಾತ್ರದಲ್ಲಿ ಶಿಲ್ಪ.ಕೆ.ಪಿ, ವಷರ್ಾ ದು ಪುಂಜಗ, ಮನೋಜ್ಞ ಅಭಿನಯದಲ್ಲಿ, ಪ್ರಸಾಧನ ಮತ್ತು ಸಂಗೀತ ನಿರ್ವಹಣೆಯಲ್ಲಿ ಸೋಮು ಕಾರಿಗನೂರು ಅವರ ಮನೋಜ್ಞವಾದ ಪರಿಕರ ಮತ್ತು ವೇದಿಕೆಯ ನಿರ್ವಹಣೆಯಲ್ಲಿ ಪ್ರದರ್ಶನಗೊಂಡಿತು.