ರಂಗಭೂಮಿ ಮತ್ತು ಜಾನಪದ ಕಲೆ ನಿತ್ಯ ನೂತನವಾಗಿದೆ : ಶಿವಪುತ್ರ ಪರಮಾನಟ್ಟಿ
Theater and folk art are always new: Shivaputra Paramanatti
ರಂಗಭೂಮಿ ಮತ್ತು ಜಾನಪದ ಕಲೆ ನಿತ್ಯ ನೂತನವಾಗಿದೆ : ಶಿವಪುತ್ರ ಪರಮಾನಟ್ಟಿ
ಬೆಟಗೇರಿ 04; ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಮಾತ್ರ ರಂಗಭೂಮಿ ಮತ್ತು ಬೈಲಾಟದ ಕಲೆಗಳನ್ನು ಕಾಣಬಹುದಾಗಿದೆ. ಜಾನಪದ ನಮ್ಮ ಸಂಸ್ಕೃತಿಯ ಅಸ್ಮೀತೆ, ಜಾನಪದ ಕಲೆ ನಿತ್ಯ ನೂತವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಯುವ ಸಾಹಿತಿ, ರಂಗಭೂಮಿ ಕಲಾವಿದ ಶಿವಪುತ್ರ ಪರಮಾನಟ್ಟಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ-ಬಗರನಾಳ ಗ್ರಾಮದ ಗಡಿಭಾಗದಲ್ಲಿರುವ ಜಗನ್ಮಾತೆ ಬಾಕುಬಾಯಿ ಜಾತ್ರಾ ಮಹೋತ್ಸವ ಪ್ರಯುಕ್ತ ಫೆ.1 ರಂದು ನಡೆದ ಸತ್ಯವಾನ ಸಾವಿತ್ರಿ ಸಣ್ಣಾಟ ಪ್ರದರ್ಶನ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸ್ಥಳೀಯ ಹಿರಿಯ ಸಾಹಿತಿ, ರಂಗಭೂಮಿ ಕಲಾವಿದ ಈಶ್ವರಚಂದ್ರ ಬೆಟಗೇರಿ ಸೇರಿದಂತೆ ಈ ಭಾಗದ ಹಿರಿಯ ಕಲಾವಿದರು ರಂಗಭೂಮಿ ಮತ್ತು ಬೈಲಾಟದ ಕಲೆಗಳನ್ನು ಉಳಿಸಿ ಬೆಳಸಿಕೊಂಡು ಬಂದಿದ್ದು, ಇಲ್ಲಿಯ ಯುವ ಸಾಹಿತಿ, ಕಲಾವಿದರಿಗೆ ಆದರ್ಶಪ್ರಾಯ ಮತ್ತು ಸ್ಪೂರ್ತಿಯಾಗಿದ್ದಾರೆ ಎಂದರು.
ಶಾಸಕ ಬಾಲಚಂದ್ರ ಜಾರಕಿಹೊಳಿ, ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಅವರು ಕರದಂಟೂರು ಗೋಕಾವಿ ನಾಡಿನಲ್ಲಿ ನಮ್ಮ ಕಲೆ, ಸಂಸ್ಕೃತಿ, ಸಂಪ್ರದಾಯ, ಜಾನಪದ ಕಲೆಗಳಿಗೆ ಉಳಿಸಿ, ಬೆಳೆಸುತ್ತಿರುವದು ಅಲ್ಲದೇ ಯುವ ಮತ್ತು ಹಿರಿಯ ಕಲಾವಿದರಿಗೆ ನೀಡುತ್ತಿರುವ ಸಹಾಯ, ಸಹಕಾರ ಅಮೂಲ್ಯವಾಗಿದೆ ಎಂದು ರಂಗಭೂಮಿ ಕಲಾವಿದ ಶಿವಪುತ್ರ ಪರಮಾನಟ್ಟಿ ಅಭಿಪ್ರಾಯಿಸಿದರು.
ಗೋಕಾಕ ಶ್ರೀಸರ್ವೇಶ್ವರ ಪ್ರಸಾದಿತ ಶಿವ ಕಾಳಿಕಾಂಬಾ ಸಾಂಸ್ಕೃತಿಕ ಕಲಾ ಸಂಸ್ಥೆಯ ಹಿರಿಯ ಕಲಾವಿದರು ಸತ್ಯವಾನ ಸಾವಿತ್ರಿ ಸಣ್ಣಾಟದಲ್ಲಿ ಸತ್ಯವಾನನಾಗಿ ತುಕಾರಾಮ ಮುತ್ನಾಳ, ಸಾವಿತ್ರಿಯಾಗಿ ಈಶ್ವರಚಂದ್ರ ಬೆಟಗೇರಿ, ಯಮಧರ್ಮನಾಗಿ ಸುರೇಶ ಹರಗೊಲಿ, ನಾರದನಾಗಿ ಲಕ್ಕಪ್ಪ ಪೂಜೇರಿ, ಅಶ್ವಪತಿ ಮಹಾರಾಜನಾಗಿ ಲಕ್ಷ್ಮಣ ಪೂಜೇರಿ, ಭಾಗವತರಾಗಿ ಶಿವಾಜಿ ಕಲ್ಲೋಳ್ಳಿ, ಈಶ್ವರ ಗಡಕರಿ, ಶಿವಾನಂದ ಗುರವ ವಿವಿಧ ಪಾತ್ರಧಾರಿಗಳಾಗಿ ಅಭಿನಯಿಸಿ ಪ್ರೇಕ್ಷಕರ ಮನರಂಜಿದರು.
ಹಾರ್ಮೋನಿಯಂ ವಾದಕರಾಗಿ ದುರದುಂಡಿ ಬಸವರಾಜ ಬಡಿಗೇರ, ತಬಲಾ ವಾದಕರಾಗಿ ಉದಗಟ್ಟಿ ಭೀಮಶೆಪ್ಪ ಹುಲೆಣ್ಣವರ ಸಾಥ್ ನೀಡಿದರು. ಈ ವೇಳೆ ಸತ್ಯವಾನ ಸಾವಿತ್ರಿ ಸಣ್ಣಾಟ ಪ್ರದರ್ಶನ ಮಾಡಿದ ಕಲಾವಿದರನ್ನು ಇಲ್ಲಿಯ ಜಗನ್ಮಾತೆ ಬಾಕುಬಾಯಿ ಜಾತ್ರಾ ಕಮೀಟಿ ಹಿರಿಯ ನಾಗರಿಕರು ಸತ್ಕರಿಸಿದರು.
ಇಲ್ಲಿಯ ಜಗನ್ಮಾತೆ ಬಾಕುಬಾಯಿ ಜಾತ್ರಾ ಕಮೀಟಿ ಹಿರಿಯ ನಾಗರಿಕರ ಶಿವಲಿಂಗಪ್ಪ ಕೋಣಿ, ವಿಠಲ ಮೆಳ್ಳಿಕೇರಿ, ಉದ್ದಪ್ಪ ಮೆಳ್ಳಿಕೇರಿ, ಪ್ರಕಾಶ ಹಳಬರ, ಬೀರ್ಪ ಬಾಣಸಿ, ದೇವಪ್ಪ ಮೆಳ್ಳಿಕೇರಿ, ಅಣ್ಣಪ್ಪ ಗೋಡೇರ, ಶ್ರೇಶೈಲ ಪರಮಾನಟ್ಟಿ, ಪುನೀತ ಪರಮಾನಟ್ಟಿ, ಉಭಯ ಹಳ್ಳಿಗಳ ಹಿರಿಯ ನಾಗರಿಕರು, ಗಣ್ಯರು, ಕಲಾಭಿಮಾನಿಗಳು, ಮತ್ತೀತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 