ಸಮಾಜದ ಪರಿವರ್ತನೆ ಮತ್ತು ಸುದಾರಣೆಗಾಗಿ ಯುವಸಮುದಾಯ ಶ್ರಮಿಸಬೇಕು - ಚಿಂತಕರಾದ ಡಾ ಶಶೀಧರ ನರೇಂದ್ರ

ಸಮಾಜದ ಪರಿವರ್ತನೆ ಮತ್ತು ಸುದಾರಣೆಗಾಗಿ ಯುವಸಮುದಾಯ ಶ್ರಮಿಸಬೇಕು - ಚಿಂತಕರಾದ ಡಾ ಶಶೀಧರ ನರೇಂದ್ರ The youth community should work towards the transformation and improvement of society - Thinker Dr.

ಸಮಾಜದ ಪರಿವರ್ತನೆ ಮತ್ತು ಸುದಾರಣೆಗಾಗಿ ಯುವಸಮುದಾಯ ಶ್ರಮಿಸಬೇಕು - ಚಿಂತಕರಾದ ಡಾ ಶಶೀಧರ ನರೇಂದ್ರ  

ಧಾರವಾಡ 15: ಸಮಾಜದ ಪರಿವರ್ತನೆ ಮತ್ತು ಸುದಾರಣೆಗಾಗಿ ಯುವಸಮುದಾಯ ಶ್ರಮಿಸಬೇಕು - ಚಿಂತಕರಾದ ಡಾ ಶಶೀಧರ ನರೇಂದ್ರ ಯುವ ಸಮುದಾಯಗಳು ಈ ದೇಶದ ಬೆನ್ನೆಲುಬು. ಸಮಾಜದ ಪರಿವರ್ತನೆ ಮತ್ತು ಸುಧಾರಣೆಗಳಿಗೆ ಅವರು ಶ್ರಮಿಸಬೇಕು. ಅಂತಹ ಕಾರ್ಯವನ್ನು ಕಲಾ ಪ್ರತಿಷ್ಠಾನವು ಯುವ ಚಿಂತನಾ ಸಮಾವೇಶದ ಮೂಲಕ ಮಾಡುತಿರುವುದು ಶ್ಲಾಘನೀಯ ಕಾರ್ಯ ಎಂದು ಡಾ .ಶಶೀಧರ ನರೇಂದ್ರ ಹೇಳಿದರು.ಅವರು ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಧಾರವಾಡದ ವತಿಯಿಂದ ರಾಣಿಚೆನ್ನಮ್ಮನಗರದ13ನೇ ಕ್ರಾಸನಲ್ಲಿ ಬಾಗೇವಾಡಿ ನಿವಾಸದಲ್ಲಿ  ಹಮ್ಮಿಕೊಂಡ ಯುವಚಿಂತನಾ ಸಮಾವೇಶ-2 ಕ್ಕೆ ಸರ್ವಾಧ್ಯಕ್ಷರಾಗಿ ಅಯ್ಕೆಯಾದ ಇಂ. ಶ್ರೀ ಸುನೀಲ್ ಬಾಗೇವಾಡಿ ಅವರನ್ನು ಅಧಿಕೃತವಾಗಿ ಆಮಂತ್ರಣ ನೀಡುವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಚಿಂತನೆ, ಮನಸ್ಸುಗಳಿಗೆ ಬಡತನ ಅಥವಾ ಮುಪ್ಪು ಇಲ್ಲ. ಆದ್ದರಿಂದ ಯುವ ಜನತೆಯು ನಾಯಕರಾಗಿ ಬೆಳೆಯ ಬೇಕು. ದೇಶದ ಅಭಿವೃದ್ದಿಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡುತ್ತ ಹೆಜ್ಜೆ ಹಾಕಬೇಕು ಎಂದು ಹೇಳಿದರು.ನಂತರ ಯುವ ಚಿಂತನಾ  

ಸಮಾವೇಶ -2ಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ ಇಂ.ಸುನೀಲ ಬಾಗೇವಾಡಿ ಅವರಿಗೆ ಆಹ್ವಾನ ನೀಡಿ, ಗೌರವಿಸಿ ಮಾತನಾಡಿದ ಕಸಾಪ ಜಿಲ್ಲಾ ಅಧ್ಯಕ್ಷರಾದ ಡಾ ಲಿಂಗರಾಜ ಅಂಗಡಿ ಎಲ್ಲದಕ್ಕೂ ಜಾತಿ, ದುಡ್ಡಿನ ಬಲ ಬೇಕಿಲ್ಲ. ಪರರೊಂದಿಗೆ ನಮ್ಮನ್ನು ಹೋಲಿಕೆ ಮಾಡಿಕೊಳ್ಳುವುದನ್ನು ಬಿಟ್ಟು ಹೊರ ಬಂದಾಗ ಮಾತ್ರ ನಮ್ಮ ಅಭಿವೃದ್ಧಿ ಹಾಗೂ ನಮ್ಮ ನಾಯಕತ್ವ ಗುಣ ಗಳು ಬೆಳಕಿಗೆ ಬರುತ್ತವೆ. ಅಂತಹ ಕಾರ್ಯವನ್ನು ಸುನೀಲ ಬಾಗೇವಾಡಿ ಮಾಡಿದ್ದಾರೆ ಮತ್ತು ಪ್ರತಿಷ್ಠಾನ ಮಾಡುತ್ತಿದೆ ಎಂದರು.ಈ ಕಾರ್ಯಕ್ರಮದಲ್ಲಿ ಐಐಐಟಿಯ ಡೀನ ಡಾ ಗೋಪಿನಾಥ, ವಿನಾಯ ಜೋಶಿ, ಪ್ರತಿಷ್ಠಾನದ ಅಧ್ಯಕ್ಷ ಎಮ್ ಎಸ್ ಫರಾಸ್, ಉಪಾಧ್ಯಕ್ಷ ಸುರೇಶ ಬೆಟಗೇರಿ, ಎಮ್ ಎನ್ ಪಾಟೀಲ, ಪತ್ರಕರ್ತ ಬಸವರಾಜ ಆನೇಗುಂದಿ, ವಿಜಯಲಕ್ಷ್ಮಿ ಕಲ್ಯಾಣಶೆಟ್ಟರ, ಕಸಾಪ ತಾಲೂಕಾ ಅಧ್ಯಕ್ಷ ಮಹಾಂತೇಶ ನರೇಗಲ್ಲ, ಇಂ ಸಂಜಯ ಕಬ್ಬೂರ, ಸಿದ್ದು ಕಲ್ಯಾಣಶೆಟ್ಟರ, ಎನ್‌.ಎಮ್ ದ್ಯಾಪೂರ, ಕೃಷ್ಣಮೂರ್ತಿ ಗೊಲ್ಲರ, ನಿವೃತ್ತ ಬ್ಯಾಂಕ ಅಧಿಕಾರಿ ಧಾರವಾಡಕರ, ಇಂ ದಯಾನಂದ ಮಾಸೂರ ಮಾತನಾಡಿದರು.ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಸುನೀಲ ಬಾಗೇವಾಡಿ ಮಾತನಾಡಿ ಈ ಜವಾಬ್ದಾರಿಯನ್ನು ಪ್ರತಿಷ್ಠಾನದ ಗುರಿ, ಉದ್ದೇಶ ಹಾಗೂ ಸಮಾವೇಶದ ಧ್ಯೇಯದಂತೆ ಕಾರ್ಯಮಾಡಲು ಶ್ರಮೀಸುವೆ. ಪ್ರತಿಷ್ಠಾನದ ಆಯ್ಕೆ ಸಮಿತಿಗೆ ಮತ್ತು ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಪ್ರಾಸ್ತಾವಿಕ ಮಾತನಾಡಿ, ನಿರೂಪಿಸಿದರು. ಸುರೇಶ ಬೆಟಗೇರಿ ಸ್ವಾಗತಿಸಿದರು. ಸರಸ್ವತಿ ಮಹಿಳಾಮಂಡಳದ ಅಧ್ಯಕ್ಷೆ ಶ್ರೀಮತಿ ನೇಹಾ ಬುದ್ನಿ ಪ್ರಾರ್ಥಿಸಿದರು. ರವಿ ಬಾಗೇವಾಡಿ ವಂದಿಸಿದರು.ಶ್ರೀಮತಿ ಸರೋಜಾ ನರೇಂದ್ರ, ನೀಹಾಲ ಮಾಸೂರ, ಪ್ರತಿಷ್ಠಾನದ ಪದಾಧಿಕಾರಿಗಳು, ಬಾಗೇವಾಡಿ ಕುಟುಂಬದ ಸದಸ್ಯರು, ಹಾಗೂ ಮಹಿಳಾ ಮಂಡಳದ ಪದಾಧಿಕಾರಿಗಳು ಇದ್ದರು.ಮಾರ್ತಾಂಡಪ್ಪ ಎಮ್ ಕತ್ತಿಶ್ರೀವಿಜಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು ಧಾರವಾಡ