ಡಾ.ರಾಜನ್ ದೇಶಪಾಂಡೆರವರು ಬರೆದ ನಾಲ್ಕು ಪುಸ್ತಕಗಳ ಲೋಕಾರೆ್ಣ
The world of four books written by Dr. Rajan Deshpande
ಲೋಕದರ್ಶನ ವರದಿ
ಧಾರವಾಡ 02 : ವೈದ್ಯಕೀಯ ಕ್ಷೇತ್ರಕ್ಕೆ ಸೀಮಿತವಾಗದೆ. ಸಾಹಿತ್ಯ ಮತ್ತು ಸಾಮಾಜಿಕ ಸೇವೆಯ ಮೂಲಕ ಡಾ. ರಾಜನ್ ದೇಶಪಾಂಡೆ ಅವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅಪಾರ ಎಂದು ಭಾಷಾತಜ್ಞ ಹಾಗೂ ಪದ್ಮಶ್ರೀ ಡಾ.ಗಣೇಶ ದೇವಿ ತಿಳಿಸಿದರು. ಧಾರವಾಡ ಆಲೂರು ವೆಂಕಟರಾವ ಸಭಾಭವನದಲ್ಲಿ ಮಕ್ಕಳ ಅಕಾಡೆಮಿ, ಆರ್. ಕೆ ಫೌಂಡೇಶನ್ ಧಾರವಾಡ ವತಿಯಿಂದ ಡಾ.ರಾಜನ್ ದೇಶಪಾಂಡೆ ಅವರು ಬರೆದ ನಾಲ್ಕು ಪುಸ್ತಕಗಳ ಲೋಕಾರೆ್ಣ ಸಮಾರಂಭದಲ್ಲಿ ಮಾತನಾಡಿದ ಅವರು, ಒತ್ತಡದ ಮಧ್ಯೆ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಡಾ. ರಾಜನ್ ದೇಶಪಾಂಡೆ ಅವರು ವೈದ್ಯಕೀಯ ವೃತ್ತಿಯ ಅನುಭವಗಳ ಜೊತೆಗೆ ಬದುಕು ಮತ್ತು ಸಮಾಜದ ಕುರಿತಾಗಿ ಅನೇಕ ಪ್ರೇರಣಾದಾಯಿ ಪುಸ್ತಕಗಳನ್ನು ಬರೆದಿದ್ದಾರೆ. ಯುವ ಲೇಖಕರಿಗೆ ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದರು. ಹಿರಿಯ ಸಾಹಿತಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಮಕ್ಕಳ ಕಲ್ಯಾಣಕ್ಕಾಗಿ ಮಕ್ಕಳ ಅಕಾಡೆಮಿ ಮತ್ತು ಆರ್.ಕೆ. ಫೌಂಡೇಶನ್ ಟ್ರಸ್ಟ್ ಆರಂಭಿಸಿದ ಡಾ. ರಾಜನ್ ದೇಶಪಾಂಡೆ ಅವರು ವೈದ್ಯಕೀಯ ಹಾಗೂ ಶೈಕ್ಷಣಿಕ ಸೇವೆಗಳನ್ನುನೀಡುತ್ತಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ. ರಾಘವೇಂದ್ರ ಪಾಟೀಲ, ಹಿರಿಯ ಲೇಖಕಿ ಡಾ.ಜಯಾ ಕುರೇಕರ್, ಹುಬ್ಬಳ್ಳಿ ಸಾಹಿತ್ಯ ಪ್ರಕಾಶನದ ಸುಬ್ರಹ್ಮಣ್ಯ ಎಂ.ಕೆ ಅವರು ಮಾತನಾಡಿ, ಡಾ.ರಾಜನ್ ದೇಶಪಾಂಡೆ ಅವರ ವೈದ್ಯಕೀಯ ಮತ್ತು ಸಾಮಾಜಿಕ ಕೊಡುಗೆಗಳನ್ನು ಈ ಕಾರ್ಯಕ್ರಮದಲ್ಲಿ ಡಾ. ಗಣೇಶ ದೇವಿ ಅವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ ಎಂದರು. ಡಾ ಪಲ್ಲವಿ ದೇಶಪಾಂಡೆ ಮತ್ತು ಡಾ ಸ್ನೇಹ ಜೋಶಿ ನಿರೂಪಿಸಿದರು. ಚಂದನಾ ಶಿಂದೆ ಪ್ರಾರ್ಥಿಸಿದರು, ಕವಿತಾ ದೇಶಪಾಂಡೆ ಸ್ವಾಗತಿಸಿದರು. ಮಕ್ಕಳ ಅಕಾಡೆಮಿ ಕಾರ್ಯದರ್ಶಿ ಡಾ.ಎಮ್.ವಾಯ್.ಸಾವಂತ ವಂದಿಸಿದರು. ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಡಾ ಜೆ ಎಚ್ ಕುಲಕರ್ಣಿ, ಡಾ ಎಮ್. ಏಸ್. ಸುಭಾಷ್ , ನಿವೃತ್ ನ್ಯಾಯಾಧೀಶರಾದ ಬಳ್ಳೊಳ್ಳಿ, ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಅಧ್ಯಕ್ಷರಾದ ಡಾ ರವಿಶಂಕರ್ ಡಾ ಕೃಷ್ಣೇಗೌಡ, ಚಿಕ್ಕಮಂಗಳೂರು, ಸಾಹಿತಿಗಳು ಹಾಗೂ ಮಕ್ಕಳ ಅಕಾಡೆಮಿ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 