ವಿಶ್ವ ತಾಯಂದಿರ ಮಡಿಲು ಸಂಸ್ಕೃತಿಯ ತೊಟ್ಟಿಲು
The world's mothers' lap is the cradle of culture
ಬೈಲಹೊಂಗಲ 27: ಮನುಕುಲದ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಹಿರಿದು. ತಾಯಿ ಹೃದಯವಾದರೆ ತಂದೆ ಮೆದುಳು ಇವೆರಡರ ಸಮಸಮ ಜವಾಬ್ದಾರಿ ಬಾಂಧವ್ಯದಲ್ಲಿ ಮಗು ಉತ್ತಮ ನಾಗರಿಕನಾಗಿ ರೂಪ ಗೊಳ್ಳುತ್ತಾನೆ. ಮನೆಯ ಆಧಾರ ಸ್ತಂಭ ತಾಯಿ ಕುಟುಂಬದ ನಿರ್ವಹಣೆ ಜೊತೆಗೆ ಮಗುವಿನ ಲಾಲನೆ ಪಾಲನೆ ಆಕೆಯ ಆಧ್ಯ ಕರ್ತವ್ಯ ಹಾಗೂ ಬಹುಪಾಲು. ಭಾರತೀಯ ತಾಯಂದಿರು ಅನೇಕ ದಾರ್ಶನಿಕರಿಗೆ ಜನ್ಮ ನೀಡಿ ಮಾರ್ಗದರ್ಶಕರಾಗಿದ್ದಾರೆ ಆಧುನಿಕ ಜೀವನ ಶೈಲಿ, ಶಿಕ್ಷಣ, ವಿಶ್ವವ್ಯಾಪಿ ವೈಟ್ ಕಾಲರ್ ಉದ್ಯೋಗದಿಂದ ತಾಯಿ ಮಕ್ಕಳ ಬಾಂಧವ್ಯ, ಸಂಸ್ಕೃತಿ ಕ್ಷೀಣಿಸಿ,ವೃದ್ಧಾಶ್ರಮಗಳ ಸೃಷ್ಟಿ ವಿಷಾಧನೀಯ ಎಂದು ಖಾನಾಪುರ್ ತಾಲೂಕ ಕದಳಿ ಮಹಿಳಾ ಘಟಕದ ಅಧ್ಯಕ್ಷೆ ಶರಣೆ ಅನ್ನಪೂರ್ಣ ಗಣಾಚಾರಿ ನುಡಿದರು. ಸ್ಥಳೀಯ ಪತ್ರಿ ಬಸವೇಶ್ವರ ನಗರ ಅಭಿವೃದ್ಧಿ ಸಂಘ ಏರಿ್ಡಸಿದ 30ನೇ ಮಾಸಿಕ ಅನುಭಾವ ಗೊಷ್ಟಿಯಲ್ಲಿ ಅವರು ಉಪನ್ಯಾಸ ನೀಡಿದರು.
ಇದೆ ಸಂದರ್ಭದಲ್ಲಿ ವಿಶ್ವ ವಿಖ್ಯಾತ ಭೂಕರ್ ಪ್ರಶಸ್ತಿ ವಿಜೇತರಾದ ಭಾನು ಮಸ್ತಾಕ್ ಹಾಗೂ ದೀಪಾ ಬಸ್ತಿ ಅವರಿಗೆ ಅಭಿನಂದನೆ ಸಲ್ಲಿಸಿ ದಾಸೋಹ ನೆರವೇರಿತು. ಕಾಡಪ್ಪ ರಾಮಗುಂಡಿ ರಾಮಲಿಂಗ ಕಾಡನ್ನವರ್ ಪತ್ರಯ್ಯ ಕುಲಕರ್ಣಿ ಅಶೋಕ್ ಸಾಲಿ ವೀರ್ಪ ಹವಳಪ್ಪನವರ್ ನಾಗನಗೌಡ ಪಾಟೀಲ್ ಶ್ರೀಶೈಲ ಶರಣಪ್ಪನವರ್ ಗೀತಾ ಅರಳಿಕಟ್ಟಿ ಮಹಾದೇವಿ ಗಣಾಚಾರಿ ಗೀತಾ ಮುದುಕನ ಗೌಡರ ಗೀತಾ ಬೇವಿನಗಿಡದ ರಾಜೇಶ್ವರಿ ದ್ಯಾಮನಗೌಡರ ಪಟ್ಟಣದ ನೂರಾರು ಮಕ್ಕಳು ಶರಣರು ಉಪಸ್ಥಿತರಿದ್ದರು ದುಂಡಯ್ಯ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು . ಸುಹಾಸಿನಿ ಸಿಳ್ಳಿ ಪ್ರಸ್ತಾವಿಕ ನುಡಿದರು. ಕಲಾವತಿ ಕಡಕೋಳ ಸ್ವಾಗತಿಸಿದರು ಸಂತೋಷ್ ಕೊಳವಿ ವಂದಿಸಿದರು ಸುವರ್ಣ ಬಿಜುಗುಪ್ಪಿ ನಿರೂಪಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 