ಗಡಿ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ: ಡಾ. ವ್ಹಿ.ಎಸ್‌. ಮಾಳಿ

ಗಡಿ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ: ಡಾ. ವ್ಹಿ.ಎಸ್‌. ಮಾಳಿ The work of the institution providing education to students from the border area is commendable: Dr.

              ಕಾಗವಾಡ 02 : ಶಿಕ್ಷಣ ಸಂಸ್ಥೆಗಳನ್ನು ಕಟ್ಟುವದಕ್ಕಿಂತ ಅವುಗಳನ್ನು ನಡಿಸಿಕೊಂಡು ಹೋಗುವುದು ಬಹಳ ಕಷ್ಟದ ಕೆಲಸವಾಗಿದ್ದು, ದಾನಿಗಳ ಸಹಕಾರದೊಂದಿಗೆ ಆಚಾರ್ಯ ವಿದ್ಯಾಸಾಗರ ಟ್ರಸ್ಟ್‌ ನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು 25 ವರ್ಷಗಳಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ಬೆಳ್ಳಿಹಬ್ಬ ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಡಾ. ವ್ಹಿ.ಎಸ್‌.ಮಾಳಿ ಹೇಳಿದರು. ಅವರು ಶುಕ್ರವಾರ ದಿ. 02 ರಂದು ಪಟ್ಟಣದ ಆಚಾರ್ಯ ಶ್ರೀ 108 ವಿದ್ಯಾಸಾಗರ ಟ್ರಸ್ಟ್‌ ನ ಕನ್ನಡ ಮಾಧ್ಯಮ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಡ ಶಾಲೆಯ ರಜತ ಮಹೋತ್ಸವ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡುತ್ತಿದ್ದರು. ಇಂದಿನ ಈ ಕಾರ್ಯಕ್ರಮ ದಾನಿಗಳು, ಜ್ಞಾನಿಗಳು ಮತ್ತು ಜ್ಞಾನಾರ್ಜನಾರ್ಥಿಗಳ ತ್ರಿವೇಣಿ ಸಂಗಮದಂತಾಗಿದೆ.

                  ಜಿನ ಸೇವೆಯೊಂದಿಗೆ ಆತ್ಮಕಲ್ಯಾಣ ಮಾಡಿಕೋಳ್ಳಬೇಕಾದರೆ ಜೀನಾಲಯಕ್ಕೆ ಹೋಗಬೇಕು. ಜೀವ ಕಲ್ಯಾಣದೊಂದಿಗೆ ಆತ್ಮ ಕಲ್ಯಾಣ ಮಾಡಿಕೊಳ್ಳಬೇಕಾದರೆ ವಿದ್ಯಾಲಯಕ್ಕೆ ಹೋಗಬೇಕು ಎಂಬಂತೆ ಇಲ್ಲಿಯ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ನೀಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನೇರವಾಗುತ್ತಿದ್ದಾರೆ ಎಂದರು.ದಿವ್ಯ ಸಾನಿಧ್ಯ ವಹಿಸಿದ್ದ ಸೊಂದಾ ಜೈನ ಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿ ಮಾತನಾಡಿ, ರಾಜ್ಯದ ಕಟ್ಟಕಡೆಯ ಮಹಾರಾಷ್ಟ್ರ ಗಡಿ ಭಾಗದ ಕನ್ನಡ ಶಾಲೆ ಇದಾಗಿದ್ದು, ವಿದ್ಯಾಸಾಗರ ಮುನಿಗಳ ಆರ್ಶಿವಾದೊಂದಿಗೆ ಅನೇಕ ಸಂತ-ಮಹಾತ್ಮರ ಪಾದ ಸ್ಪರ್ಷದಿಂದ ಪಾವನವಾಗಿ ಬೆಳ್ಳಿಹಬ್ಬ ಆಚರಿಕೊಳ್ಳುತ್ತಿರುವ ಈ ಶಾಲೆಯು ವಿದ್ಯಾರ್ಥಿಗಳಿಗೆ ಜ್ಞಾನ ಸುಧೆಯನ್ನು ಉಣಬಡಿಸುತ್ತಾ ಸುವರ್ಣ ಮಹೋತ್ಸವ ಆಚರಿಸಿಕೊಳ್ಳಲಿ ಎಂದು ಹಾರೈಸಿದರು.ಅಧ್ಯಕ್ಷತೆಯನ್ನು ಚಿಂಚಲಿ ಗ್ರಾಮದ ಗಣ್ಯರಾದ ಪ್ರವೀಣ ಹುಕ್ಕೇರಿ ವಹಿಸಿ, ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲೆಗೆ ದೇಣಿಗೆ ನೀಡದ ದಾನಿಗಳನ್ನು ಸನ್ಮಾನಿಸಲಾಯಿತು.

               ಈ ಸಮಯದಲ್ಲಿ ಧನ್ಯಕುಮಾರ ಶೆಟ್ಟಿ, ಮಾಹವೀರ ಪಡನಾಡ, ದಾದಾ ಮಾನಗಾಂವೆ , ಡಾ.ವಿಕ್ರಮ ಮಗದುಮ್ಮ, ಸಂಸ್ಥೆಯ ಉಪಾಧ್ಯಕ್ಷ ರಾಜು ಗೋಬಾಜೆ, ಕಾರ್ಯದರ್ಶಿ ಪದ್ಮಾಕರ ಕರವ, ಖಜಾಂಚಿ ಎ.ಎಸ್‌. ಮಗದುಮ್ಮ, ಸದಸ್ಯರಾದ ವ್ಹಿ.ಎಸ್‌. ಕರೋಲೆ, ವ್ಹಿ.ಡಿ. ಮಾನಗಾಂವೆ, ಎಸ್‌.ಬಿ. ಗೋಬಾಜೆ, ಕೆ.ಆರ್‌. ಕುನ್ನೆ, ಡಿ.ವ್ಹಿ. ಶೆಟ್ಟಿ, ಎ.ಎಸ್‌. ಪಿರುಜೈನ, ಜಿ.ಎಸ್‌. ಮಗದುಮ್ಮ, ಎಸ್‌.ಎಸ್‌. ಕದ್ದು, ವ್ಹಿ.ಡಿ. ಚೌಗಲೆ, ಎಸ್‌.ಎಸ್‌. ಕಠಾರೆ, ಎ.ಎ. ಪಾಟೀಲ ಸೇರಿದಂತೆ ಶಾಲೆಯ ಭೋದಕ- ಭೋದಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು. ಜೆ.ಜೆ. ನೇಮನ್ನವರ ಸ್ವಾಗತಿಸಿದರು. ಎಸ್‌.ಎಸ್‌. ಜಮಖಂಡಿ ವಂದಿಸಿದರು.ಫೋಟೋ ಶೀರ್ಷಿಕೆ : ಕಾಗವಾಡ ಪಟ್ಟಣದ ಆಚಾರ್ಯ ವಿದ್ಯಾಸಾಗರ ಟ್ರಸ್ಟ್‌ ನ ರಜತ ಮಹೋತ್ಸವ, ವಾರ್ಷಿಕ ಸ್ನೇಹ ಸಮ್ಮೇಳನವನ್ನು ದೀಪ ಬೆಳಗಿಸಿ ಚಾಲನೆ ನೀಡುತ್ತಿರುವ ಶ್ರೀಗಳು ಮತ್ತು ಗಣ್ಯರ ಚಿತ್ರ