ಲಯನ್ಸ್ ಕ್ಲಬ್ ಕಾರ್ಯ ಶ್ಲಾಘನೀಯ
The work of the Lions Club is commendable.
ವಿಜಯಪುರ 02 : ಲಯನ್ಸ್ ಕ್ಲಬ್ ಕಾರ್ಯ ಶ್ಲಾಘನೀಯವಾದದ್ದು ಎಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ ಹೇಳಿದರು. ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಲಯನ್ಸ್ ಕ್ಲಬ್ ಆಫ್ ಬಿಜಾಪುರ ಪರಿವಾರವತಿಯಿಂದ ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಬಿಜಾಪುರದಲ್ಲಿ ತನ್ನದೆ ಆದ ಹೆಸರನ್ನು ಲಯನ್ಸ್ ಕ್ಲಬ್ ಪರಿವಾರ ಮಾಡಿದೆ. ಬಡವರಿಗೆ ಸೂಕ್ತ ಸಮಯದಲ್ಲಿ ಅಗತ್ಯತೆಗಳನ್ನು ಪೂರೈಸುವಲ್ಲಿ ಸಾಕಷ್ಟು ಸೇವೆ ಸಲ್ಲಿಸಿದೆ. ಲಯನ್ಸ್ ಪರಿವಾರ ಹಗಲಿರುಳು ಜನಸಾಮಾನ್ಯರ ಹಾಗೂ ವಿಜಯಪುರ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದೆ ಎಂದರು. ಎಲ್ಲ ಸಂಘ ಸಂಸ್ಥೆಯವರು ಲಯನ್ಸ್ ಪರಿವಾರದ ಜೊತೆ ಕೈಜೋಡಿಸಿ ಅಭಿವೃದ್ಧಿ ಮುನ್ನುಡಿ ಬರೆಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಚಿದಾನಂದ ನಿಂಬಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಕಾರ್ಯದರ್ಶಿಗಳಾದ ಶ್ರೀಮತಿ ವಿದ್ಯಾ ಕೋಟೆಣ್ಣನವರ, ಖಚಾಂಚಿಗಳಾದ ಪುಷ್ಪಾ ಮಹಾಂತಮಠ ಇದ್ದರು. ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಎಸ್.ಎಸ್.ರಾಜಮಾನೆ, ಶ್ರೀಮತಿ ಎಸ್.ಎಸ್.ರಾಜಮಾನೆ, ಶ್ರೀಶೈಲ ಗಂಗನಳ್ಳಿ, ರಜನಿ ಸಂಬಣ್ಣಿ, ಮಾಜಿ ಅಧ್ಯಕ್ಷರಾದ ಫಯಾಜ ಕಲಾದಗಿ, ನಿರ್ದೇಶಕರಾದ ಎಸ್.ಆರ್.ಕಟ್ಟಿ, ವಾಲು ಚವ್ಹಾಣ, ಶ್ರೇಯಶ್ ಮಹೇಂದ್ರಕರ, ಶೈಲಾ ಬಸವಪ್ರಭು, ಅನುಷಾ ನಿಂಬರಗಿ, ಇಂದುಮತಿ ಕನ್ನೂರ, ಅನಿತಾ ಕುಮಷಿ, ಪ್ರಕಾಶ ದರ್ಬಾರ, ಡಾ.ರಶ್ಮಿ ಚಿತ್ತವಾಡಗಿ, ಭಾರತಿ ತೆಗ್ಗಿಹಳ್ಳಿಮಠ, ಸುಜಾತಾ ಹತ್ತಿ, ಪೂಜಾ ಗುಬ್ಬಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಡಾ. ಅಶೋಕಕುಮಾರ ಜಾಧವ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 