ಮಕ್ಕಳ ಭವಿಷ್ಯದ ಕನಸಿಗೆ ರೆಕ್ಕೆ ಕಟ್ಟುವ ಕೆಲಸ ಶುರುವಾಗಿದೆ : ಪಟೇಲ್

ಮಕ್ಕಳ ಭವಿಷ್ಯದ ಕನಸಿಗೆ ರೆಕ್ಕೆ ಕಟ್ಟುವ ಕೆಲಸ ಶುರುವಾಗಿದೆ : ಪಟೇಲ್ The work of giving wings to the future dreams of children has begun: Patel

ಕೊಪ್ಪಳ 28: ನಮ್ಮ ಕೊಪ್ಪಳ ನಗರದ ಮಕ್ಕಳ ಭವಿಷ್ಯದ ಕನಸಿಗೆ ರೆಕ್ಕೆ ಕಟ್ಟುವ ಕೆಲಸ ಶುರುವಾಗಿದೆ ಎಂದು ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡ ಅಮ್ಜದ್ ಪಟೇಲ್ ಅಭಿಪ್ರಾಯ ಪಟ್ಟರು,ಅವರು ನಗರದ ಹೊರವಲಯ ಪ್ರದೇಶದಲ್ಲಿ ಇಸ್ಮಾಯಿಲ್ ಅರಗಂಜಿ ಮತ್ತು ಅವರ ಸ್ನೇಹಿತರ  ಸೇರಿ ಮಕ್ಕಳಿಗಾಗಿ ಏರಿ​‍್ಡಸಿದ ಕ್ರಿಕೆಟ್ ಕೋಚಿಂಗ್ ಕ್ಲಾಸ್ ಆರಂಭಿಸಿರುವ ಬೇಸಿಗೆ ಶಿಬಿರದ ಕಾರ್ಯಕ್ರಮದ ಪ್ರಾರಂಭೋತ್ಸವ ನೆರವೇರಿಸಿ ಚಾಲನೆ ನೀಡಿ ಸಂಘಟಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು, ಮುಂದುವರಿದು ಮಾತನಾಡಿ ಇಂದು ಈ ಸುಂದರ ಶಿಬಿರ ಮಕ್ಕಳ ದೈಹಿಕ ಮತ್ತು ಮಾನಸಿಕ ಹಾಗೂ ಕ್ರೀಡಾಸಕ್ತಿ ಬೆಳೆಸುವ ಕೇಂದ್ರ ಇದಾಗಿದೆ. ಮಕ್ಕಳ ಕಣ್ಣಲ್ಲಿ ಕಂಡ ಕ್ರಿಕೆಟ್ನ ಉತ್ಸಾಹ, ಕೋಚ್ಗಳ ಬದ್ಧತೆ ನೋಡಿ ಮನಸ್ಸು ತುಂಬಿ ಬಂತು.

ನೆಟ್ಸ್ನಲ್ಲಿ ಫ್ಲಡ್ಲೈಟ್ನಡಿ ಅಭ್ಯಾಸ ಮಾಡ್ತಿದ್ದ ಪುಟಾಣಿಗಳ ಸಂಭ್ರಮ ನೋಡಬೇಕು ಇದು ಒಳ್ಳೆಯ ರೋಮಾಂಚನ ಮಕ್ಕಳ ದೈಹಿಕ ಬೆಳವಣಿಗೆಗೆ ಈ ಕೇಂದ್ರ ಅತ್ಯಂತ ಸಹಕಾರಿಯಾಗಿದೆ ಇದರಿಂದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯ ಮಕ್ಕಳಲ್ಲಿ ಇದರ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ ಹುಟ್ಟುತ್ತದೆ ಎಂದು ವಿವರಿಸಿದರುಇಸ್ಮಾಯಿಲ್ ಅರಗಂಜಿ ಮತ್ತು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆ ಮಕ್ಕಳ ಪಾಲಕರ ಪರವಾಗಿ ತಿಳಿಸಿದ ಅವರು ಕೊಪ್ಪಳದಿಂದ ಮುಂದಿನ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಹುಟ್ಟಿ ಬರಲಿ ಎಂಬುದೇ ನಮ್ಮ ಆಶಯ ಎಂದು ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡ ಅಮ್ಜದ್ ಪಟೇಲ್ ಅಭಿಪ್ರಾಯ ಪಟ್ಟರು,ಸಮಾರಂಭದಲ್ಲಿ ಅನೇಕ ಜನ ಗಣ್ಯರು ಜನ ಪ್ರತಿನಿಧಿಗಳು ಕ್ರೀಡಾ ಕ್ರಿಕೆಟ್ ತರಬೇತಿದಾರರು ಕಾರ್ಯಕರ್ತರು ಕ್ರೀಡಾಪಟು ವಿದ್ಯಾರ್ಥಿ ಮಕ್ಕಳು ಮತ್ತು ಅವರ ಪಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು,