ಅನ್ನದಾನೀಶ್ವರ ಮಠದ ಕಾರ್ಯ ಶ್ಲಾಘನೀಯ: ತಿಮ್ಮಣ್ಣ ಚವಡಿ

ಅನ್ನದಾನೀಶ್ವರ ಮಠದ ಕಾರ್ಯ ಶ್ಲಾಘನೀಯ: ತಿಮ್ಮಣ್ಣ ಚವಡಿ  The work of Annadanishwara Mutt is commendable: Thimmanna Chavadi

ಲೋಕದರ್ಶನ ವರದಿ 

ಕುಕನೂರ ನ 14: ವೀರಶೈವ ಲಿಂಗಾಯತ  ಮಠಗಳು ಸರ್ವ ಸಮಾಜದ ಕಲ್ಯಾಣಕ್ಕೆ ಅಪಾರ ಕೊಡುಗೆಯನ್ನ ನೀಡಿವೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸದಸ್ಯರಾದ ತಿಮ್ಮಣ್ಣ ಚವಡಿ ಹೇಳಿದರು.  

ಅವರು ಕುಕನೂರ ತಾಲೂಕಿನ ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ನಡೆಯುತ್ತೀರುವ ಕಲ್ಬುರ್ಗಿ ಶರಣಬಸವೇಶ್ವರ ಪುರಾಣದಲ್ಲಿ ಸನ್ಮಾನಿತರಾಗಿ ಮಾತನಾಡುತ್ತ ಮುಂಡರಗಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಮಠವು ಶೈಕ್ಷಣಿಕವಾಗಿ 100ವರ್ಷದ ಇತಿಹಾಸ ಹೊಂದಿದೆ, ಧಾರ್ಮಿಕವಾಗಿ ಹಲವಾರು ಶತಮಾನಗಳ ಇತಿಹಾಸ ಹೊಂದಿದೆ ಇಂತಹ ಶ್ರೀಮಠದ ಫೂಜ್ಯ ಜಗದ್ಗುರುಗಳು ನಮ್ಮ ನಾಡಿನ ಆರಾಧ್ಯ ಗುರುಗಳಾಗಿದ್ದಾರೆ ಅವರು ಸಾಹಿತ್ಯ ಕೃಷಿಗೆ ನೀಡದ ಕೊಡುಗೆ ಅಪಾರ, ಮಠಗಳು ಶರಣರ ಸಂದೇಶಗಳನ್ನು ಸಾರುತ್ತೀವೆ, ನಾವುಗಳು ಕೂಡ ಮಠಗಳ ಅಭಿವೃದ್ಧಿಗೆ ತನು ಮನ ಧನದಿಂದ ಸೇವೆ ಮಾಡಬೇಕು ಎಂದರು.  ತಳಕಲ್ ಗ್ರಾ ಪಂ ಪಿ ಡಿ ಓ ವೀರನಗೌಡ್ರ ಮಾತನಾಡಿ ತಳಕಲ್ ಜನರು ಹೃದಯವಂತರು, ಗ್ರಾಮದ ಜನರು ಕಾಯಕಯೋಗಿಗಳು, ದುಡಿದು ಉಣ್ಣುವ ಸಂಸ್ಕೃತಿಯನ್ನ ಅಳವಡಿಸಿಕೊಂಡವರು, ಹಿರಿಯರ ಮಾರ್ಗದರ್ಶನ ಕಿರಿಯರ ಕ್ರೀಯಶೀಲತೆಯಿಂದ ತಳಕಲ್ ಗ್ರಾಮವು ಧಾರ್ಮಿಕ ಕ್ಷೇತ್ರದಲ್ಲಿ ಶ್ರೀಮಂತಗೊಂಡಿದೆ ಎಂದರು.   ಬಾನಪೂರ ಮಾಜಿ ಗ್ರಾ ಪಂ ಅಧ್ಯಕ್ಷ ಬೀಮಣ್ಣ ಕೊಮಾಲಾಪುರ ಮಾತನಾಡಿ ಶರಣರ ಪುರಾಣಗಳನ್ನ ಕೇಳವುದರಿಂದ ಮಾನಸಿಕ ನೆಮ್ಮದಿ ಸಾಧ್ಯ, ಶರಣರ ಬದುಕು ತೆರೆದ ಪುಸ್ತಕವಿದ್ದಂತೆ, ಬಸವಣ್ಣನವರ ವಿಚಾರದಾರೆಗಳು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ, ಕುಕನೂರ ಶ್ರೀಗಳು ಕ್ರೀಯಶೀಲತೆಯ ಸಾಕಾರಮೂರ್ತಿ ಅವರ ಮಾರ್ಗದರ್ಶನವೇ ನಮ್ಮ ಬದುಕಿಗೆ ಪ್ರೇರಣೆ ಎಂದರು.  

ಈ ಸಂದರ್ಭದಲ್ಲಿ ಕುಕನೂರ ತಳಕಲ್ ಶ್ರೀಮಠದ  ಪೂಜ್ಯ ಮಹಾದೇವ ಸ್ವಾಮೀಜಿ, ಕಂಪಸಾಗರದ ನಾಗಭೂಷಣ ದೇಶಿಕರು, ಬೀಮಣ್ಣ ಹೆಳವಾರ,ಮಲ್ಲಣ್ಣ ಮಲ್ಲಾಪೂರ, ಶ್ರೀಕಾಂತ್, ಸಂಗಯ್ಯ, ಗ್ರಾ ಪಂ ಸದಸ್ಯ ಉಮೇಶ ಪಾಟೀಲ, ಶಿವರುದ್ರಯ್ಯ ಕೊಮಲಾಪುರ, ವೀರಯ್ಯ ಲಕಮಾಪೂರ, ಮಾಜಿ ಗ್ರಾ ಪಂ ಅಧ್ಯಕ್ಷ  ತಂಬೂಲಿ ಸಾಹೇಬರು, ವೀರಯ್ಯ ಜಡಿಮಠ ಮತ್ತು ಇತರರು ಇದ್ದರು.  ಪೋಟೋ ಪೈಲ್ : ಕುಕನೂರ ತಾಲೂಕಿನ ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ನಡೆಯುತ್ತೀರುವ ಕಲ್ಬುರ್ಗಿ ಶರಣಬಸವೇಶ್ವರ ಪುರಾಣದಲ್ಲಿ ತಿಮ್ಮಣ್ಣ ಚವಡಿ ಮಾತನಾಡಿದರು.