ಸರ್ವ ಜನಾಂಗದ ಹಿತ ಬಯಸಿ ಜಗತ್ತಿನ ಜನರಿಗೆ ಅನ್ನ ನೀಡುವ ಅನ್ನದಾತ ನಿಜವಾದ ದೇವರು
The true God is the breadwinner who seeks the welfare of all nations and provides food to the people
ಬೀಳಗಿ 24 : ಇಪತ್ತು ನಾಲ್ಕು ಗಂಟೆಗಳ ಕಾಲ ಮಳೆ ಚಳಿ ಬಿಸಿಲು ಹುಳ ಹುಪ್ಡಡಿ ಎನ್ನದೇ ಬೆವರು ಸುರಿಸಿ ತನ್ನ ಆರೋಗ್ಯದತ್ತ ಗಮನ ಹರಿಸದೇ ಸದಾ ಜಮೀನನಲ್ಲಿ ಬೆಳೆದ ಬೆಳೆಗಳನ್ನು ಪೋಷಿಸುವದರೊಂದಿಗೆ ಸರ್ವ ಜನಾಂಗದ ಹಿತ ಬಯಸಿ ಜಗತ್ತಿನ ಜನರಿಗೆ ಅನ್ನ ನೀಡುವ ಅನ್ನದಾತ ನಿಜವಾದ ದೇವರು ಅದಕ್ಕಾಗಿ ಪ್ರತಿಯೊಬ್ಬರು ಊಟ ಮಾಡುವ ಮೊದಲು ರೈತನನ್ನು ಸ್ಮರಿಸಿ ಗೌರವಿಸಬೇಕು ಎಂದು ಭಾರತೀಯ ಕಿಸಾನ ಸಂಘದ ಜಿಲ್ಲಾ ಅಧ್ಯಕ್ಷ ವಿರುಪಾಕ್ಷಯ್ಯ ಪ. ಹಿರೇಮಠ ಹೇಳಿದರು.ಅವರು ಬೀಳಗಿ ಪಟ್ಟಣದಲ್ಲಿ ಕೀರ್ತಿ ಶಿಕ್ಷಣ ಸಂಸ್ಥೆಯ ಕೀರ್ತಿ ಪ್ಲೇ ಶಾಲೆಯಲ್ಲಿ ಜರುಗಿದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲೆಯಲ್ಲಿ ರೈತ ದಿನಾಚರಣೆ ಹಮ್ಮಿಕೊಂಡು ಮಕ್ಕಳಿಗೆ ರೈತ ಅನ್ನವನ್ನು ಬೆಳೆಯಲು ಶ್ರಮಿಸುವ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಶಾಲಾ ಸಂಸ್ಥಾಪಕಿ ಮಲ್ಲಿಕಾ ಪಾಟೀಲ ಸಂಸ್ಥೆಯ ಪದಾಧಿಕಾರಿಗಳು ಕಾರ್ಯ ಶ್ಲಾಘನೀಯವಾದದು ಎಂದರು. ಕೋಟ್ಶಾಲಾ ಮಕ್ಳಳು ತಮ್ಮ ತಂದೆ ಪಾಲಕರಿಗೆ ಚಾಕಲೇಟ್ ಪೀಜಾ ಬರ್ಗರ ಇನ್ನೀತರ ಕುರುಕಲ ತಿಂಡಿಗಳನ್ನು ನಮಗೆ ಕೊಡಿಸಬೇಡಿ ಇದರಿಂದ ಆರೋಗ್ಯ ಹದಗೆಡುತ್ತದೆ ಅದಕ್ಕಾಗಿ ನಮ್ಮ ಹಿರಿಯರು ಹಿಂದೆ ಸಾವಯವ ಕೃಷಿ ಮೂಲಕ ಬೆಳೆಯುವ ಶಿರಿಧಾನ್ಯ ತಿಂಡಿಗಳನ್ನು ನಮಗೆ ಕೊಡಿಸಿದರೆ ನಮ್ಮ ಆರೋಗ್ಯ ಸುರಕ್ಷೀತವಾಗಿರುತ್ತದೆ ಎಂದು ಹೇಳಿ ಕೃಷಿ ಜ್ಞಾನ ನೀಡಲು ವಿನಂತಿಸಿಕೊಳ್ಳಿ ವಿರುಪಾಕ್ಷಯ್ಯ ಪ.ಹಿರೇಮಠ ಜಿಲ್ಲಾಧ್ಯಕ್ಷರು ಭಾರತೀಯ ಕಿಸಾನ ಸಂಘ ಬಾಗಲಕೋಟೆಕೀರ್ತಿ ಶಿಕ್ಷಣ ಸಂಸ್ಥೆ ಸಂಸ್ಥಾಪಕಿ ಮಲ್ಲಿಕಾ ಪಾಟೀಲ ಮಾತನಾಡಿ ಎಲ್ಲಾ ವೃತ್ತಿ ಗಿಂತ ಶಿಕ್ಷಕ ವೃತ್ತಿ ಶ್ರೇಷ್ಠ ಎಂದು ಹೇಳುವ ನಾವು,
ರೈತರೇ ಇಲ್ಲದೆ ಯಾವ ವೃತ್ತಿಯೂ ಇರಲಾರದು ಜಗತ್ತಿನ ಎಲ್ಲ ಜೀವಿಗಳಿಗೆ ಈ ಭೂಮಿಯ ಮೇಲೆ ಜೀವಂತವಾಗಿರಲು ಆಹಾರ ಅವಶ್ಯವಾಗಿದ್ದು ಅದನ್ನು ಬೆಳೆಯುವನು ರೈತ ಅವನಿಗೆ ನಾವೇಲ್ಲರೂ ಗೌರವಿಸಬೇಕು ಭಾರತೀಯ ಕಿಸಾನ ಸಂಘದ ಜಿಲ್ಲಾ ಮಹಿಳಾ ಪ್ರಮುಖರಾದ ಕಾವ್ಯ ಪಾಟೀಲ,ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಸ್ಮೀತಾ ಪಾಟೀಲ ಮಾತನಾಡಿ ಶ್ರಮಿಕ ರೈತರ ಮಹತ್ವ ವಿವರಿಸಿದರು, ಮಕ್ಜಳು ರೈತರ ವೇಷ ಭೂಷಣಗಳನ್ನು ತೊಡಿಸಿದ್ದರು. ರಾಧಾ ಮೂಲಿಮನಿ ಅವರು ಸ್ವಾಗತಿಸಿದರು. ಲತಾ ಬಡಿಗೇರವರು ವಂದನಾರೆ್ಣ ಮಾಡಿದರುಪೋಟೊಬೀಳಗಿ ಪಟ್ಟಣದಲ್ಲಿ ಕೀರ್ತಿ ಶಿಕ್ಷಣ ಸಂಸ್ಥೆಯಲ್ಲಿ ರೈತರ ದಿನಾಚರಣೆಯನ್ನು ಸಸಿ ನೇಡುವ ಮೂಲಕ ಗಣ್ಯರು ಚಾಲನೆ ನೀಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 