ಸಾಧಕರನ್ನು ಸನ್ಮಾನಿಸಿ ಗೌರವಿಸುವ ಪರಂಪರೆ ದೊಡ್ಡದು : ವೀರೇಶ ಕೆಲಗೇರಿ
The tradition of honoring and respecting achievers is great: Veeresh Kelageri
ಧಾರವಾಡ 13: ಎಲೆ ಮರೆಯ ಕಾಯಿಯಂತೆ ಸಮಾಜ ಮುಖಿಯಾಗಿ ಕಾರ್ಯ ಮಾಡುವ ಅನೇಕ ಸಾಧಕರು ನಮ್ಮ ಸಮಾಜದಲ್ಲಿದ್ದಾರೆ. ಅಂತಹ ಸಾಧಕರ ನಿಸ್ವಾರ್ಥ ಹಾಗೂ ಅನುಪಮ ಸೇವೆಯನ್ನು ಗುರುತಿಸಿ ಕ.ವಿ.ವ ಸಂಘವು 20 ಸಾಧಕರನ್ನು ಸನ್ಮಾನಿಸಿ ಗೌರವಿಸುವ ಪರಂಪರೆ ದೊಡ್ಡದು ಎಂದು ವೀರೇಶ ಕೆಲಗೇರಿ ಅಭಿಪ್ರಾಯಪಟ್ಟರು.
ಅವರು ದಿ: 12-11-2025 ರಂದುಕರ್ನಾಟಕ ವಿದ್ಯಾವರ್ಧಕ ಸಂಘವು 70ನೇ ರಾಜ್ಯೋತ್ಸವದ ಅಂಗವಾಗಿ ನಾಡಹಬ್ಬ-2025 ನಿಮಿತ್ತ ಆಯೋಜಿಸಿರುವ ಸಾಧಕರ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಧನೆ ಮಾಡಲು ನಿರಂತರ ಪರಿಶ್ರಮ, ಪ್ರಜ್ಞೆ ಬಹಳ ಮುಖ್ಯ. ಅಂತಹ ಅಪರೂಪದ ಸಾಧಕರು ಅಶೋಕ ಬಾಬರಒಬ್ಬರು. ಅವರುಯಾವ ಫಲಾಪೇಕ್ಷೆ ಇಲ್ಲದೇ ಕರ್ತವ್ಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸಿದವರು. ಬ್ಯಾಂಕ ಉದ್ಯೊಗಿಯಾಗಿ ಎಂದೂ ಒಂದು ದಿನ ರಜೆ ಪಡೆಯದೇ ಸೇವೆ ಮಾಡಿದವರಲ್ಲಿ ಇವರೊಬ್ಬರೇ ಎನಿಸುತ್ತದೆ. ಇಂತಹ ಅನೇಕ ಸಾಧಕರನ್ನು ಸಂಘ ಇನ್ನೂ ಹೆಚ್ಚು ಗುರುತಿಸುವ ಕಾರ್ಯ ಮಾಡಬೇಕು ಎಂದು ಹೇಳಿ ಕ.ವಿ.ವ ಸಂಘದ ನೂತನ ಆಡಳಿತ ಮಂಡಳಿ ಕಳೆದ 4 ವರ್ಷದಅವಧಿಯಲ್ಲಿ ಮಾಡಿದಅಭಿವೃದ್ದಿ ಕಾರ್ಯಗಳನ್ನು ಅವರು ಶ್ಲಾಘಿಸಿದರು.
ಅಶೋಕ ಬಾಬರ ಸನ್ಮಾನ ಸ್ವಿಕರಿಸಿ ಮಾತನಾಡಿ, ನಾನು ನನ್ನ ಕೌಟುಂಬಿಕ ಬಾಂಧವ್ಯಕ್ಕಿಂತ ಹೆಚ್ಚು ನನ್ನ ಉದ್ಯೋಗ ಪ್ರೀತಿಸಿದೆನು. ನನ್ನ ಹಕ್ಕಿನ ರಜೆ ಹೊರತುಪಡಿಸಿ ಸುದೀರ್ಘ 30 ವರ್ಷ ಒಂದೂ ರಜೆ ಪಡೆಯದೇ ಕರ್ತವ್ಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಿದ್ದೇನೆ. ನನ್ನ ಈ ಕಾರ್ಯ ಗುರುತಿಸಿ ಕ.ವಿ.ವ. ಸಂಘ ಸನ್ಮಾನಿಸಿ ಗೌರವಿಸುತ್ತಿರುವುದು ನನ್ನ ಭಾಗ್ಯಎಂದು ಭಾವುಕರಾಗಿ ಮಾತನಾಡಿದರು.
ಪ್ರಾರಂಭದಲ್ಲಿ ಹುಬ್ಬಳ್ಳಿಯ ವಂದನಾ ನೂಲ್ವಿ ಅವರತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು. ರಮೇಶ ರಾಠೋಡ ತಬಲಾ ಸಾಥ್, ಕಿರಣ ಹಾರೋ್ಮನಿಯಂ ಸಾಥ ನೀಡಿದರು. ರತಿಕಾ ನೃತ್ಯ ನಿಕೇತನ ಮಕ್ಕಳಿಂದ ಭರತನಾಟ್ಯ ಪ್ರದರ್ಶನಗೊಂಡಿತು.
ವೀರಣ್ಣಒಡ್ಡೀನ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಧನವಂತ ಹಾಜವಗೋಳ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ಸನ್ಮಾನ ಪತ್ರ ಓದಿ, ವಂದಿಸಿದರು. ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶತುರಮರಿ, ಶಿವಾನಂದ ಭಾವಿಕಟ್ಟಿ, ಗುರು ಹಿರೇಮಠ, ನಾಗರತ್ನಾ ಹಡಗಲಿ, ನಾಗರಾಜ ಹಡಗಲಿ ಸೇರಿದಂತೆ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 