ಮೊಬೈಲ್ ವರ್ಜನ ಶಿಬಿರ ಪ್ರಾರಂಭವಾಗುವ ಕಾಲ ದೂರವಿಲ್ಲ: ಡಾ. ಅಲ್ಲಮಪ್ರಭು ಶ್ರೀಗಳು
The time is not far when the mobile ban camp will begin: Dr. Allama Prabhu
ಮೊಬೈಲ್ ವರ್ಜನ ಶಿಬಿರ ಪ್ರಾರಂಭವಾಗುವ ಕಾಲ ದೂರವಿಲ್ಲ: ಡಾ. ಅಲ್ಲಮಪ್ರಭು ಶ್ರೀಗಳು
ಸಾಮಾಜಿಕ ಜಾಲತಾಣಗಳ ವಿಪರೀತ ಹಾವಳಿಯಿಂದ ಮೊಬೈಲ್ ಬಳಕೆ ದಿನದಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರಿಂದ ಯುವಕರು ದೈಹಿಕ ಶ್ರಮವಿಲ್ಲದೆ ರೋಗ, ರುಜಿನಗಳಿಗೆ ತುತ್ತಾಗಿ ಆಲಸ್ಯ ಜೀವನ ಸವೆಸುತ್ತಿದ್ದಾರೆ. ಮಧ್ಯ ವ್ಯಸನ ದೂರ ಮಾಡಲು ಇರುವ ವರ್ಜನ ಶಿಬಿರಗಳಂತೆ ಮುಂದೊಂದು ದಿನ ಮೊಬೈಲ್ ವರ್ಜನ ಶಿಬಿರ ಪ್ರಾರಂಭವಾಗುವ ಕಾಲ ದೂರವಿಲ್ಲ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಅವರು ಇಂದು ಶಿವಬಸವ ನಗರದ ಪ್ರಭುದೇವ ಸಭಾಗೃಹ ದಲ್ಲಿ ಸಿದ್ಧರಾಮೇಶ್ವರ ಸಂಯುಕ್ತ ಪ.ಪೂ.ಮಹಾವಿದ್ಯಾಲಯದ ಶಾಲಾ ಸಂಸತ್ತು ಹಾಗು ಸಾಂಸ್ಕೃತಿಕ ಸಂಘಗಳ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗದಗ ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ. ಎಚ್. ಬಿ. ಹುಲಗನ್ನವರ ಮಾತನಾಡಿ ವಿದ್ಯಾರ್ಥಿಗಳು ಬಾಲ್ಯದಿಂದಲೆ ವೈದ್ಯ, ಇಂಜನಿರ್, ವಿಜ್ಞಾನಿ, ಸಮಾಜ ಸೇವಕ ಸೇರಿದಂತೆ ಯಾವುದಾದರೂ ಒಂದು ದೊಡ್ಡ ಗುರಿಯನ್ನು ಹೊಂದಿ ನಿರಂತರ ಪರಿಶ್ರಮ ಪಟ್ಟರೆ ಖಂಡಿತವಾಗಿಯೂ ಇಟ್ಟ ಗುರಿ ತಲಪಬಹುದು. ಗುರುವಿನಲ್ಲಿ ಭಯ, ಭಕ್ತಿ, ನಯ ವಿನಯ ಇದ್ದರೆ ಗುರುವಿನಲ್ಲಿನ ಧನಾತ್ಮಕ ಶಕ್ತಿ ಗೊತ್ತಿಲ್ಲದಂತೆಯೆ ವಿದ್ಯಾರ್ಥಿಗೆ ವರ್ಗಾವಣೆ ಆಗುತ್ತದೆ. ಇದೇ ಶ್ರದ್ಧಾಭಾವದಿಂದ ನಾನು ಸಿದ್ಧರಾಮೇಶ್ವರ ಶಾಲೆಯಲ್ಲಿ ಅಧ್ಯಯನ ಮಾಡಿದ ಕಾರಣ ಇಂದು ಸರ್ಕಾರದ ಮಹತ್ವಪೂರ್ಣ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದರು.
ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಸವರಾಜ ರೊಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಾರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಉಪಪ್ರಾಚಾರ್ಯೆ ಶಿವಲೀಲಾ ಪೂಜಾರ ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಳಿಗೆ ಮೀಸಲಾಗದೇ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದರು. ಶಿಕ್ಷಕಿ ಜಾನಕಿ ಪಾಟೀಲ ಅತಿಥಿ ಪರಿಚಯ ಮಾಡಿದರು. ಎಲ್. ಬಿ. ಮೆಳವಂಕಿ ಶಾಲಾ ಸಂಸತ್ತಿನ ವರದಿ ವಾಚಿಸಿದರು. ಮನೋಹರ ಉಳ್ಳೇಗಡ್ಡಿ ನಿರೂಪಿಸಿದರು. ಪಿ. ಬಿ. ಶಿದ್ರಾಮನಿ ವಂದಿಸಿದರು.
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ 