ಮಹಾ ಮಾನವತಾವಾದಿ ಅಂಬೇಡ್ಕರ್ ಅವರ ಚಿಂತನೆಗಳು ಸಾಮಾಜಿಕ ಬದಲಾವಣೆಗೆ ಬುನಾದಿಯಾಗಿವೆ: ಎನ್ .ಎಫ್ ಮಲಕಣ್ಣನವರ

ಮಹಾ ಮಾನವತಾವಾದಿ ಅಂಬೇಡ್ಕರ್  ಅವರ ಚಿಂತನೆಗಳು ಸಾಮಾಜಿಕ ಬದಲಾವಣೆಗೆ ಬುನಾದಿಯಾಗಿವೆ: ಎನ್ .ಎಫ್ ಮಲಕಣ್ಣನವರ The thoughts of the great humanist Ambedkar are the foundation for social change: N.F. Malakannavara

ಲೋಕದರ್ಶನ ವರದಿ 

       ಬೆಳಗಾವಿ   29: ಡಾ. ಬಿ.ಆರ್‌. ಅಂಬೇಡ್ಕರ್ ಅವರ ಚಿಂತನೆಗಳು ಸಮಾಜದ  ಅಭಿವೃದ್ಧಿಗೆ ಪೂರಕವಾಗಿದ್ದು  ಇಂದಿಗೂ ಅವುಗಳ ಪ್ರಸ್ತುತತೆ ತುಂಬಾ ಮಹತ್ವದ್ದಾಗಿದೆ. ಅವರು ಕೇವಲ ದಲಿತರ ನಾಯಕರಲ್ಲ, ಇಡೀ ಭಾರತದ ಸಾಮಾಜಿಕ-ರಾಜಕೀಯ-ಆರ್ಥಿಕ ಮತ್ತು  ಪ್ರಜಾಪ್ರಭುತ್ವದ ಚಿಂತಕರು.ಸಾಮಾಜಿಕ ನ್ಯಾಯ ಮತ್ತು ಸಮಾನತೆ ಬಗೆಗೆ ಹಾಗೂ ಜಾತಿ ವಿನಾಶ ಅಂಬೇಡ್ಕರ್ ಅವರ "ಂಟಿಟಿಟಚಿಣಠ ಠ ಅಛಿಣಜ" ಕೃತಿ ಇಂದಿಗೂ ಪ್ರಸ್ತುತ. ಜಾತಿ ಆಧಾರಿತ ತಾರತಮ್ಯ, ದೌರ್ಜನ್ಯಗಳ ಇಂದಿನ ದುರಿತ ಕಾಲದಲ್ಲಿ   ಸಾಮಾಜಿಕ ಸಮಾನತೆಗೆ ಅಂತರ್‌-ಜಾತಿ ವಿವಾಹವು ನಿಜವಾದ ಮಾರ್ಗ ಎಂದಿದ್ದರು.  

     ಮಹಿಳಾ ಸಬಲೀಕರಣಕ್ಕಾಗಿ ಹಿಂದೂ ಕೋಡ್ ಬಿಲ್ ನೀಡಿದ  ಅವರು ಮಹಿಳೆಯರಿಗೆ ಆಸ್ತಿ ಹಕ್ಕು, ವಿಚ್ಛೇದನ ಹಕ್ಕುಗಳನ್ನು ನೀಡಲು ಹೋರಾಡಿದರು." ನಾನು ಸಮಾಜದ ಪ್ರಗತಿಯನ್ನು ಮಹಿಳೆಯರು ಸಾಧಿಸಿದ ಪ್ರಗತಿಯಿಂದ ಅಳೆಯುತ್ತೇನೆ" ಈ ಮಾತು ಇಂದಿನ ಲಿಂಗ ಸಮಾನತೆ ಚಳವಳಿಗೆ ದಾರೀದೀಪವಾಗಿದೆ. 

    ಸಂವಿಧಾನ ಮತ್ತು ಪ್ರಜಾಪ್ರಭುತ್ವ ಇವು  ಭಾರತದ ಆತ್ಮಗಳಾಗಿವೆ. ಅವರು ಕೇವಲ ಮೂಲಭೂತ ಹಕ್ಕು ಕೊಟ್ಟಿಲ್ಲ, ನಿರ್ದೇಶಕ ತತ್ವಗಳ ಮೂಲಕ ಸಾಮಾಜಿಕ-ಆರ್ಥಿಕ ನ್ಯಾಯಕ್ಕೆ ಒತ್ತು ಕೊಟ್ಟರು. ಶಿಕ್ಷಣ, ಆರೋಗ್ಯ, ಕೆಲಸ - ಇವು ಇಂದಿಗೂ ಹೋರಾಟದ ವಿಷಯಗಳಾಗಿವೆ. ಸಾಂವಿಧಾನಿಕ ನೈತಿಕತೆಯನ್ನು ಬೋಧಿಸಿದ ಅಂಬೇಡ್ಕರ್ ಅವರು ಮಹಾ ಮಾನವತಾವಾದಿಗಳಾಗಿದ್ದರು ಎಂದು ಬೆಳಗಾವಿ ಶ್ರೀ ಸಂಗಮೇಶ ಐ. ಟಿ .ಐ ಕಾಲೇಜು ಉಪ ಪ್ರಾಚಾರ್ಯರಾದ ಶ್ರೀ ಎನ್‌.ಎಫ್ ಮಲಕಣ್ಣವರ ಅಂಬೇಡ್ಕರ್ ಚಿಂತನೆಗಳ ಪ್ರಸ್ತುತತೆ ಕುರಿತಾಗಿ ಉಪನ್ಯಾಸ ನೀಡಿದರು. 

   ಕರ್ನಾಟಕ ಸಾಹಿತ್ಯ ಅಕಾಡೆಮಿ ,ಬೆಂಗಳೂರು .ಚಕೋರ ಸಾಹಿತ್ಯ ವಿಚಾರ ವೇದಿಕೆ, ಬೆಳಗಾವಿ ಶ್ರೀ ಸಂಗಮೇಶ ಐ ಟಿ ಐ ಕಾಲೇಜು ಆಟೋ ನಗರ .   ಬೆಳಗಾವಿ ಇವರ ಸಹಯೋಗದಲ್ಲಿ  ವಿಶೇಷ ಉಪನ್ಯಾಸ ಮಾಲಿಕೆ-18 ಅನ್ನು   ದಿನಾಂಕ   29- 4-2026 ಬುಧವಾರದಂದು   ಶ್ರೀ. ಸಂಗಮೇಶ ಐ. ಟಿ .ಐ ಕಾಲೇಜಿನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. 

    ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಶ್ರೀ.ಬಸವರಾಜ ಸದಲಗೆಯವರು ಅಧ್ಯಕ್ಷೀಯ ನುಡಿಗಳನ್ನಾಡುತ್ತ,ಶಿಕ್ಷಣ ಮತ್ತು ವೈಚಾರಿಕತೆಯ ಬಗ್ಗೆ ಅಂಬೇಡ್ಕರ್ ಅವರ ಪ್ರತಿಪಾದಿಸಿದ ಮೌಲ್ಯಗಳು ಇಂದಿಗೂ  ಚಿಂತನಾರ್ಹವಾಗಿವೆ."ಶಿಕ್ಷಣ, ಸಂಘಟನೆ, ಹೋರಾಟ" ಇದು ಕೇವಲ ಘೋಷಣೆ ಅಲ್ಲ. ಶಿಕ್ಷಣದಿಂದಲೇ ವಿಮೋಚನೆ ಸಾಧ್ಯ ಎಂದರು  "ಬುದ್ಧ ಮತ್ತು ಕಾರ್ಲ್‌ ಮಾರ್ಕ್ಸ್‌" ಕೃತಿಯಲ್ಲಿ ಮೂಢನಂಬಿಕೆ ವಿರುದ್ಧ, ವೈಚಾರಿಕತೆ ಪರ ನಿಂತರು. ವೈಜ್ಞಾನಿಕ ಮನೋಭಾವ ಬೆಳೆಸಿ ಎಂಬುದು ಸಂವಿಧಾನದ ಮೂಲ ಕರ್ತವ್ಯ ಕೂಡ ಎಂಬುದನ್ನು ಮನಗಾಣಿಸಿದರು."ನಾನು ಮೊದಲು ಭಾರತೀಯ, ಕೊನೆಗೂ ಭಾರತೀಯ" ಎಂದರು. ಆದರೆ ಅದು "ಒಂದೇ ಸಂಸ್ಕೃತಿ" ಹೇರುವ ರಾಷ್ಟ್ರೀಯತೆ ಅಲ್ಲ. ಬಹುತ್ವ, ಸಹಿಷ್ಣುತೆ ಇರುವ ರಾಷ್ಟ್ರೀಯತೆ ಎನ್ನುವ ಮೂಲಕ ಹೊಸ ಪರಿಕಲ್ಪನೆಯನ್ನು ನೀಡಿದರು. ಎಂದು ಅಂಬೇಡ್ಕರ್ ಅವರ ಚಿಂತನೆಗಳ ಮಹತ್ವವನ್ನು ತಿಳಿಸಿದರು. 

      ಬೆಳಗಾವಿ ಜಿಲ್ಲಾ ಸಂಚಾಲಕರಾದ ಶಿವರಾಜ ಅರಳಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಅಯ್ಯಪ್ಪ ಹುನಗುಂದ ಸ್ವಾಗತಿಸಿದರು.ಸಂಗಮೇಶ ಐ .ಟಿ .ಐ ಕಾಲೇಜಿನ  ವಿದ್ಯಾರ್ಥಿಗಳಾದ ಮಂಜುನಾಥ ಹಗೆದಾಳ  ಪ್ರಾರ್ಥಿಸಿದರು. ಮುತ್ತು ನಾಯಕ ನಿರೂಪಿಸಿದರು.  ಯಲ್ಲೇಶ ಬೆಳಗಾವಿ  ವಂದಿಸಿದರು.