ಶಿಕ್ಷಕ ಅರಿವಿನ ಅಕ್ಷಯ ಪಾತ್ರೆ ಹಿ ಶ್ಯಾಮಸುಂದರ ಅಡಿಗ
The teacher is the inexhaustible vessel of knowledge, the beautiful Adiga
ಶಿಕ್ಷಕ ಅರಿವಿನ ಅಕ್ಷಯ ಪಾತ್ರೆ ಹಿ ಶ್ಯಾಮಸುಂದರ ಅಡಿಗ
ರಾಣಿಬೆನ್ನೂರ:16 ಶಿಕ್ಷಕ ನಿರಂತರ ಅಧ್ಯಯನ ಶೀಲ, ಜ್ಞಾನದ ಖಣಿಯಾಗಿ ಹಾಗೂ ತಪಸ್ವಿಯಂತೆ ಶಿಕ್ಷಣ ಪಡೆದು ಸಮಾಜ ಸೇವೆಗೆ ಮುಂದಾಗಬೇಕು, ಸಾಮಾಜಿಕ ಸಾಮರಸ್ಯದ ಜೊತೆಗೆ ತನಗಾಗಿ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಧ್ಯೇಯವನ್ನು ಹೊಂದಿ ಆದರ್ಶ ಶಿಕ್ಷಕರಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಹೇಳಿದರು. ನಗರದ ಹಲಗೇರಿ ರಸ್ತೆಯ ಬಿ.ಎ.ಜೆ.ಎಸ್‌ಎಸ್ ಬಿ.ಇಡಿ ಮಾಹಾವಿದ್ಯಾಲಯದಲ್ಲಿ ಬುಧವಾರ ನೆಡೆದ ಶಿಕ್ಷಕ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಶಿಕ್ಷಕ ಭರವಸೆಯ ಪ್ರೇರಕರಾಗಿದ್ದು ಮುಂದಿನ ಪೀಳಿಗೆಯ ನಿರ್ಮಾತೃಗಳಾಗಿರುವುದರಿಂದ ಶಿಕ್ಷಕರು ಪರಿಪೂರ್ಣ ಜ್ಞಾನ ಹೊಂದುವುದರ ಜೊತೆಗೆ ಅತ್ಯುತ್ತಮ ಸಂವಹನ ಕೌಶಲ್ಯವನ್ನು ಒಳಗೊಂಡು ಆದರ್ಶ ಸಮಾಜ ನಿರ್ಮಿಸುವ ದೃಢ ಸಂಕಲ್ಪದೊಂದಿಗೆ ಬೌದ್ಧಿಕ ಪ್ರಾಮಾಣಿಕತೆ ಹಾಗೂ ನಿರಂತರ ಜ್ನಾನದಾಹಿಯಾಗಿ ಹೊಸ ಚಿಂತನೆಗಳನ್ನು ಹೊಂದಬೇಕು ಎಂದರು.
ಪತ್ರಕರ್ತ ಎಸ್.ಜಿ. ಮಹಾನುಭಾವಿಮಠ ಮಾತನಾಡಿ, ಪ್ರಶಿಕ್ಷಣಾರ್ಥಿಗಳು ಸಕಾರಾತ್ಮಕ ಚಿಂತನೆ ಮುಕ್ತ ಕಲಿಕೆಯ ವಾತಾವರಣ ಹಾಗೂ ವಿದ್ಯಾರ್ಥಿಗಳ ಸ್ವ ಸಾಮರ್ಥ್ಯವನ್ನು ಹೊರಸೆಳೆಯುವ ಹಾಗೂ ಕಲಿಕೆಯಲ್ಲಿ ಕುತೂಹಲ ಕೆರಳಿಸುವ, ಭಾರತೀಯ ಜ್ಞಾನ ಪರಂಪರೆ ಹಾಗೂ ದೇಶೀಯತೆಯನ್ನು ಮಕ್ಕಳಲ್ಲಿ ಬೆಳೆಸಬೇಕೆಂದು ಕರೆ ನೀಡಿದರು. ಹೊಸಮನಿ ಸಿದ್ದಪ್ಪ ಪದವು ಪೂರ್ವ ಕಾಲೇಜ ಉಪನ್ಯಾಸಕ ಡಾ. ಹೆಚ್. ಓಂಕಾರ ನಾಯ್ಕ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನಿಕಟ್ಟಿ, ಸಾಹಿತಿ ಎಚ್. ಎ. ಭಿಕ್ಷಾವರ್ತಿಮಠ ಮಾತನಾಡಿದರು.
ಪ್ರಾಚಾರ್ಯ ಡಾ.ವಎಂ.ಎಂ. ಮೃತ್ಯುಂಜಯ ಅಧ್ಯಕ್ಷತೆ ವಹಿಸಿದ್ದರು. ಜಂಗಳಿ ಆಶಾಕುಮಾರಿ, ಭಾಗ್ಯ ದೇವಗಿರಿಮಠ, ಅನುಷಾ ಸಿ.ಜಿ, ಉಪಪ್ರಾಚಾರ್ಯ ಪ್ರೊ. ಶಿವಕುಮಾರ ಬಿಸಲಳ್ಳಿ, ಪ್ರೊ. ಪರಶುರಾಮ ಪವಾರ, ಪ್ರೊ. ಎ. ಶಂಕರ ನಾಯ್ಕ, ಡಾ. ಹೆಚ್. ಐ. ಬ್ಯಾಡಗಿ, ಪ್ರೊ. ಶ್ರೀಕಾಂತ ಗೌಡಶಿವಣ್ಣನವರ, ಡಾ.ರಾಜೀವ್ ಕೆ.ಎಂ, ಪ್ರೊ. ಅಶೋಕ ಬಣಕಾರ, ಮುತ್ತುರಾಜ ಸಿದ್ದಣ್ಣನವರ, ಬೀರ್ಪ ಲಮಾಣಿ, ಚಂದನ ಕಿಚಡಿ ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು. ಕು.ಪದ್ಮ ಹಾಗೂ ಶ್ವೇತಾ ಪ್ರಾರ್ಥಿಸಿದರು, ಕು.ಸುನೀತಾ ಹುಲಿಗೆಮ್ಮನವರ ಸ್ವಾಗತಿಸಿದರು, ಕು. ಲಕ್ಷ್ಮೀ ಹಣಚಿಕ್ಕಿ ಹಾಗೂ ಕು. ಪೂಜಾ ಹೆಗಡೇರ ನಿರೂಪಿಸಿದರು. ಕು.ದೀಪಾ ಪೂಜಾರ ವಂದಿಸಿದರು.
.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 