ರಾಜ್ಯದಲ್ಲಿಯೇ ಅತೀ ಹೆಚ್ಚು ಸರಕಾರಿ ಪ್ರೌಢ ಶಾಲೆಗಳು ತಾಲೂಕಿಗೆ ಮಂಜೂರು: ಶಾಸಕ ಲಕ್ಷ್ಮಣ ಸವದಿ
The taluk has been allotted the highest number of government high schools in the state: MLA Lakshman
ರಾಜ್ಯದಲ್ಲಿಯೇ ಅತೀ ಹೆಚ್ಚು ಸರಕಾರಿ ಪ್ರೌಢ ಶಾಲೆಗಳು ತಾಲೂಕಿಗೆ ಮಂಜೂರು: ಶಾಸಕ ಲಕ್ಷ್ಮಣ ಸವದಿ
ಅಥಣಿ 12: ರಾಜ್ಯದಲ್ಲಿ ಅತೀ ಹೆಚ್ಚು ಅಥಣಿ ಮತಕ್ಷೇತ್ರಕ್ಕೆ ಕ್ಷೇತ್ರಕ್ಕೆ ಅತೀ ಹೆಚ್ಚು 9 ಸರಕಾರಿ ಪ್ರೌಢ ಶಾಲೆಗಳು ಮಂಜೂರಾಗಿವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ಖವಟಕೊಪ್ಪ ಗ್ರಾಮದಲ್ಲಿ ನೂತನವಾಗಿ ಮಂಜೂರಾದ ಪ್ರೌಢ ಶಾಲೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸ್ವಾತಂತ್ರ್ಯದ ನಂತರದಿಂದ ಇಲ್ಲಿಯವರೆಗೂ ಅಥಣಿ ಪಟ್ಟಣದಲ್ಲಿ ಒಂದು ಸರಕಾರಿ ಪ್ರೌಢ ಶಾಲೆ ಇರಲಿಲ್ಲ ಇದಕ್ಕೆ ಅನೇಕ ತಾಂತ್ರಿಕ ಅಡಚಣೆಗಳನ್ನು ಶಿಕ್ಷಣ ಇಲಾಖೆ ಕೊಡುತ್ತಿತ್ತು. ಹೀಗಾಗಿ 75 ವರ್ಷಗಳಿಂದಲೂ ಅಥಣಿಯಲ್ಲಿ ಸರಕಾರಿ ಪ್ರೌಢ ಶಾಲೆ ಇರಲಿಲ್ಲ ಎಂದ ಅವರು ನಾನು ಶಿಕ್ಷಣ ಸಚಿವ ಮಧು ಬಂಗಾರ್ಪನವರಿಗೆ ವಿಶೇಷ ಮನವಿ ಮಾಡಿದ ಪರಿಣಾಮ ಅಥಣಿ ಸೇರಿದಂತೆ ತಾಲೂಕಿನ 9 ಗ್ರಾಮಗಳಿಗೆ ಸರಕಾರಿ ಪ್ರೌಢ ಶಾಲೆಗಳು ಮಂಜೂರಾಗಿವೆ ಎಂದರು.
ಸರಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳೇ ಶಿಕ್ಷಣದಲ್ಲಿ ಮೇಲುಗೈ ಸಾಧಿಸಿದ್ದು, ಈ ದೇಶದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹಿತ ಅತ್ಯುನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚಿನವರು ಸರಕಾರಿ ಶಾಲೆಗಳಲ್ಲಿಯೇ ಶಿಕ್ಷಣ ಪಡೆದಿದ್ದಾರೆ ಎಂದ ಅವರು ಕೆಲ ದಶಕಗಳ ಹಿಂದೆ ಶಿಕ್ಷಣ ದುರ್ಲಭವಾಗಿತ್ತು ಆದರೆ ಇಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶಿಕ್ಷಣ ವ್ಯವಸ್ಥೆ ಎಲ್ಲರಿಗೂ ಸುಲಭವಾಗಿ ತಲುಪಬೇಕು ಈ ನಿಟ್ಟಿನಲ್ಲಿ ಅನೇಕ ಯೋಜನೆಗಳು ಅನುಷ್ಠಾನಗೊಂಡಿವೆ ಎಂದರು.
ಖವಟಕೊಪ್ಪ ಗ್ರಾಮಸ್ಥರು ಗ್ರಾಮದ ಅಭಿವೃದ್ಧಿಗಾಗಿ ಸ್ಮಶಾನ ಭೂಮಿಯ ಮಂಜೂರಾತಿ, ಗುಣಮಟ್ಟದ ವಿದ್ಯುತ್ ಗಾಗಿ ಗ್ರಾಮದ ಸಮೀಪದಲ್ಲಿ ನಿರ್ಮಿಸುತ್ತಿರುವ 110 ಕೆ.ವಿ ವಿದ್ಯುತ್ ವಿತರಣಾ ಘಟಕವನ್ನು ಬೇಗ ಪೂರ್ಣಗೊಳಿಸಬೇಕು ಈ ರೀತಿ ಅನೇಕ ಬೇಡಿಕೆಗಳನ್ನು ನನ್ನ ಮುಂದೆ ಇಟ್ಟಿದ್ದು, ಇವುಗಳನ್ನು ಹಂತ ಹಂತವಾಗಿ ಈಡೇರಿಸುವೆ ಎಂದರು.
ನನ್ನ ತಂದೆ ಶಿಕ್ಷಣ ಪಡೆದ ಗ್ರಾಮದ ಈ ಶಾಲೆಯ ಶತಮಾನೋತ್ಸವ ಆಚರಣೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು ಮತ್ತು ಖವಟಕೊಪ್ಪ ಗ್ರಾಮಕ್ಕೆ 65 ಲಕ್ಷ ರೂ.ವೆಚ್ಚದ ಸರಕಾರಿ ಆಯುಷ್ ಆಸ್ಪತ್ರೆ ಮಂಜೂರಾಗಿದ್ದು, ಕೆಲವೇ ದಿನಗಳಲ್ಲಿಯೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಮಗಾರಿ ಪ್ರಾರಂಭಗೊಳ್ಳುವುದು ಎಂದರು.
ಗ್ರಾಮದ ಮುಖಂಡ, ಪಿ.ಕೆ.ಪಿ.ಎಸ್ ಅಧ್ಯಕ್ಷ ಆನಂದ ಕುಲಕರ್ಣಿ ಮಾತನಾಡಿ, ಶಾಸಕ ಲಕ್ಷ್ಮಣ ಸವದಿ ಮೊದಲಿನಿಂದಲೂ ಖವಟಕೊಪ್ಪ ಗ್ರಾಮದ ಅಭಿವೃದ್ಧಿಗಾಗಿ ಅನೇಕ ಮಹತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, 2008 ರಲ್ಲಿ ನಮ್ಮ ಗ್ರಾಮಕ್ಕೆ ಪಿ.ಕೆ.ಪಿ.ಎಸ್ ಸೊಸೈಟಿ ಮಂಜೂರು ಮಾಡಿಸಿದ್ದಾರೆ ಜೊತೆಗೆ ಮುಳುಗಡೆ ಪರಿಹಾರ ಹಣ ಮಂಜೂರು ಮಾಡಿಸಿ ನಮಗೆ ಆರ್ಥಿಕ ಬಲ ನೀಡಿರುವ ಇಂತಹ ಶಾಸಕರನ್ನು ಎಂದಿಗೂ ಮರೆಯಲು ಸಾಧ್ಯ ಇಲ್ಲ ಎಂದ ಅವರು ಖವಟಕೊಪ್ಪ ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯತನ್ನು ಮಂಜೂರು ಮಾಡಿಸಿ ಎಂದು ಮನವಿ ಮಾಡಿದರು.
ಸಾನಿಧ್ಯ ವಹಿಸಿದ್ದ ಕೌಲಗುಡ್ಡದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಮಾತನಾಡಿ, ಶಿಕ್ಷಕರು ಸಂಬಳಕ್ಕಾಗಿ ದುಡಿಯದೇ ಮಕ್ಕಳ ಬದುಕನ್ನು ಕಟ್ಟುವ ಶಿಲ್ಪಿಗಳಾಗಬೇಕು ಎಂದರು.
ಡಾ.ಧರೆಪ್ಪ ಚೌಗಲಾ, ನಿವೃತ್ತ ಶಿಕ್ಷಕ ಬಿ.ಕೆ.ಅನ್ನಣ್ಣವರ ಮಾತನಾಡಿದರು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಆರ್.ಮುಂಜೆ, ತಾ.ಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಪಿ.ಎಸ್.ಐ ಗಿರಮಲ್ಲಪ್ಪ ಉಪ್ಪಾರ, ಪಂಚಾಯತ ಅಭಿವೃದ್ಧಿ ಅಧಿಕಾರಿ ಗೋಪಾಲ ಮಾಳಿ, ಮುಖ್ಯಾಧ್ಯಾಪಕ ಆರಿ್ಸ.ಕನ್ನೋಳಿ, ಗ್ರಾ.ಪಂ ಅಧ್ಯಕ್ಷ ಸಿದ್ರಾಮ ಬಡಿಗೇರ, ಬಿಸಿಯೂಟ ಅಧಿಕಾರಿ ಮಲ್ಲಿಕಾರ್ಜುನ ನಾಮದಾರ, ಅಥಣಿ ಪುರಸಭಾ ಸದಸ್ಯರಾದ ಕಲ್ಲೇಶ ಮಡ್ಡಿ, ಆಸೀಫ ತಾಂಬೋಳಿ, ರಾಜು ಬುಲಬುಲೆ, ಮುಖಂಡರಾದ ಎಸ್.ಆರ್.ಘೂಳಪ್ಪನವರ, ಶಾಂತು ನಂದೇಶ್ವರ, ಎ.ಎಮ್.ಖೊಬ್ರಿ, ಅನಂತ ಬಸರಿಖೋಡಿ, ಸುರೇಂದ್ರ ಶಿವಣ್ಣವರ, ವಿವೇಕ ನಾರಗೊಂಡ, ಕುಮಾರ ಚೌಗಲಾ, ಪ್ರದೀಪ ನಂದಗಾಂವ, ವಿಠ್ಠಲ್ ಕಾಂಬಳೆ, ಮಹಾದೇವ ಚೌಗಲಾ, ಮಹಾಂತೇಶ ಠಕ್ಕಣ್ಣವರ, ಸುರೇಶ ವಾಡೇದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 