ಶಿಡೇನೂರನಲ್ಲಿ ಶಿದ್ದರ ಬೆಟ್ಟದಲ್ಲಿ ಮುಕ್ತೇಶ್ವರನಿಗೆ ಸೂರ್ಯ ಸರ್ಶ್ಪ
The sun shines on Mukteshwar on the Shiddar hill in Shidenur.
ಲೋಕದರ್ಶನ ವರದಿ
ಶಿಡೇನೂರನಲ್ಲಿ ಶಿದ್ದರ ಬೆಟ್ಟದಲ್ಲಿ ಮುಕ್ತೇಶ್ವರನಿಗೆ ಸೂರ್ಯ ಸರ್ಶ್ಪ
ಬ್ಯಾಡಗಿ 05: ತಾಲೂಕಿನ ಶಿಡೇನೂರ ಗ್ರಾಮದ ಐತಿಹಾಸಿಕ ಹಿನ್ನೆಲೆ ಅಲ್ಲಿ ದಿ. 06 ರಂದು ಮುಕ್ತೇಶ್ವರ ಮೂರ್ತಿಗೆ ಸಂಪೂರ್ಣವಾಗಿ ಸೂರ್ಯನ ಕಿರಣಗಳು ಗರ್ಭಗುಡಿಯಲ್ಲಿರುವ ಮುಕ್ತೇಶ್ವರನಿಗೆ (ಶಿವನ ಮೂರ್ತಿಗೆ) ವರ್ಷದಲ್ಲಿ ಎರಡು ಬಾರಿ ಸ್ಪರ್ಶಿಸುತ್ತದೆ.
ಸೂರ್ಯನು ದಿ.06 ರಂದು ಬೆಳಗ್ಗೆ 7 ಗಂಟೆ 10 ನಿಮಿಷದಿಂದ 7 ಗಂಟೆ 37 ನಿಮಿಷದವರಗೆ ಸೂರ್ಯನು ಮುಕ್ತೇಶ್ವರನಿಗೆ ಸರ್ಶ್ಪಸಿವುದರ ಮೂಲಕ ಜನರಿಗೆ ವಿಸ್ಮಯಕಾರಿ ದರ್ಶನ ನೀಡಿತು. ಹಾಗೂ ಇದೆ ಸಂದರ್ಭದಲ್ಲಿ ದೇವಸ್ಥಾನ ಕಮಿಟಿ ಹಾಗೂ ಭಕ್ತಾದಿಗಳಿಂದ ಸೂರ್ಯನ ಸರ್ಶ್ಪ ಮುಗಿವುವರೆಗೆ ರುದ್ರಾಭಿಷೇಕ ಹಾಗೂ ಪೂಜೆ ಪುನಸ್ಕಾರಗಳು ನೆರವೇರಿದವು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ನೆಹರು ಚ ಓಲೇಕಾರ ಮಾತನಾಡಿ ಸೂರ್ಯ ಉತ್ತರಯಣದಿಂದ ದಕ್ಷೀಣಾಯನಕ್ಕೆ ಹಾಗೂ ದಕ್ಷಿಣಯಾಣದಿಂದ ಉತ್ತರಯಾಣಕ್ಕೆ ಕನಿಷ್ಟ 5 ನಿಮಿಷಗಳ ಕಾಲ ಸೂರ್ಯನ ಕಿರಣ ಗರ್ಭಗುಡಿಯಲ್ಲಿರುವ ಮುಕ್ತೇಶ್ವರನಿಗೆ ಸ್ಪರ್ಶಿಸುತ್ತದೆ ಹಾಗೂ ಸಿದ್ದರು ನೆಲೇಸಿದ ನಾಡಾಗಿರುವುದರಿಂದ ಸಹಜವಾಗಿ ಶಿವನ ಆರಾಧಾಕರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದಲ್ಲಿ ಸಿದ್ದರು ನೆಲೆಸಿದ್ದರು. ಆದ್ದರಿಂದ ಗ್ರಾಮದ ಕೋಟಿ ಪ್ರೆದೇಶದಲ್ಲಿ ಮುಕ್ತೇಶ್ವರ ನೆಲೆಸಿರುತ್ತಾನೆ ಮತ್ತು ಮುಕ್ತಿಗೆ ಹೆಸರುವಾಸಿ ಆಗಿರುವ ಮುಕ್ತೇಶ್ವರ ದರ್ಶನವನ್ನು ಪಡೆದು ಭಕ್ತರು ಪೂಜೆ ಪುನಸ್ಕಾರ ಮಾಡಿ ಆಶೀರ್ವಾದ ಪಡೆದರು.
ಈ ದೇವಾಲಯವು ಸುಮಾರು ಹತ್ತು ವರ್ಷಗಳ ಕಾಲ ಕೆತ್ತನೆ ಮಾಡಿ ನಿರ್ಮಿಸಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸುರೇಸ್ ಉದ್ಯೋಗಣ್ಣನವರ್, ಸುರೇಸ ಬೆನ್ನುರ, ಮಂಜುನಾಥ ಓಲೇಕಾರ, ನಾಗರಾಜ ಓಲೇಕಾರ, ಬಸಣ್ಣ ನೆಗಳೂರ, ಪುಟ್ಟಪ್ಪ ಮಲ್ಲಾಡದ, ಶಿವಾ ನಾಯಕ, ಫಕ್ಕೀರಮ್ಮ ಚಲವಾದಿ ಹಾಗೂ ಇನ್ನು ಹಾವೇರಿ ರಾಣೇಬೆನ್ನೂರ ಹಿರೇಕೆರೂರ ಗ್ರಾಮದ ಹೆಚ್ಚಿನ ಜನ ಆಗಮಿಸಿ ದರ್ಶನ ಪಡೆದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 