ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬೆಳಗಾವಿ ಜಿಲ್ಲೆಯ ಹೋರಾಟ ದಾಖಲಾರ್ಹ ಕಥನ: ಯ.ರು ಪಾಟೀಲ
The struggle of Belgaum district in the freedom struggle is a story worth documenting: Y.R. Patil
ಬೆಳಗಾವಿ, 14 ; ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬೆಳಗಾವಿ ಜಿಲ್ಲೆಯ ಕೊಡುಗೆ ಚಿರಸ್ಮರಣೀಯವಾಗಿದೆ. ಸಂಘಟಿತ ಈ ಹೋರಾಟವು ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧದ ಪ್ರತಿರೋಧದ ಸಂಕೇತವೆಂದು ಪರಿಗಣಿಸಲಾಗಿದೆ. ಕಿತ್ತೂರು ಚನ್ನಮ್ಮನ ಶೌರ್ಯ ಮತ್ತು ನಾಯಕತ್ವವು ಅನೇಕ ಇತರ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ನೀಡಿತು ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಯಶೋಗಾಥೆ ಕುರಿತಾಗಿ ಇಂದಿಗೂ ನೂರಾರು ಸಂಶೋಧನೆಗಳು ನಡೆಯಬಹುದಾದಷ್ಟು ವಿಷಯಗಳಿವೆ. ಪೋರ್ತುಗೀಜ್‌ರನ್ನು ಹಿಮ್ಮೆಟಿಸಿದ್ದ ರಾಣಿ ಉಳ್ಳಾಲದ ಅಬ್ಬಕ್ಕ,ಕರಿಮೆಣಸಿನ ರಾಣಿ ಚೆನ್ನಬೈರಾದೇವಿಯವರ ಹೋರಾಟದ ಕಥನ ವಸಾಹತುಶಾಹಿ ಆರಂಭದ ಹೋರಾಟ ಇಂದಿಗೂ ಅವಿಸ್ಮರಣೀಯ. ಬೆಳಗಾವಿ ಜಿಲ್ಲೆಯ ಅನೇಕ ಮಹಿಳೆಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು.ಹಿಂಡಲಗಾ ಜೈಲುವಾಸ ಅನುಭವಿಸಿದರು. ಹೆಣ್ಣುಮಕ್ಕಳು ತಮ್ಮ ಗಂಡನೊಂದಿಗೆ ಹೋರಾಟದಲ್ಲಿ ಪಾಲ್ಗೊಂಡಿದ್ದರು.ನಾಗನೂರಿನ ನಾಗಮ್ಮನ ಬಂಡಾಯದ ಕಥೆ ಇಂದಿಗೂ ಸ್ಪೂರ್ತಿಯಾಗಿದೆ . ಎಂದು ಬೆಳಗಾವಿಯ ತಹಶೀಲ್ದಾರರು (ನಿ) , ನಾಟಕಕಾರರು , ಐತಿಹಾಸಿಕ ಕಾದಂಬರಿಕಾರರಾದ ಶ್ರೀ ಯ.ರು. ಪಾಟೀಲ ಅವರು "ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬೆಳಗಾವಿ ಜಿಲ್ಲೆ ಮತ್ತು ಕಿತ್ತೂರಿನ ವೀರರಾಣಿ ಚನ್ನಮ್ಮ" ವಿಷಯ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು
ಕರ್ನಾಟಕ ಸಾಹಿತ್ಯ ಅಕಾಡೆಮಿ , ಬೆಂಗಳೂರು.ಚಕೋರ ಸಾಹಿತ್ಯ ವಿಚಾರ ವೇದಿಕೆ ,ಬೆಳಗಾವಿ ಹಾಗೂ ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ, ಬೆಳಗಾವಿ ಹಾಗೂ ಕಾಲೇಜು ಐ.ಕ್ಯೂ.ಎ.ಸಿ ಘಟಕ ಮತ್ತು ಕನ್ನಡ ವಿಭಾಗ ಇವರ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ ಪ್ರಯುಕ್ತ “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬೆಳಗಾವಿ ಜಿಲ್ಲೆ ಮತ್ತು ಕಿತ್ತೂರಿನ ವೀರರಾಣಿ ಚನ್ನಮ್ಮ” ವಿಷಯ ಕುರಿತಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ದಿನಾಂಕ 14- 8-2025 ರಂದು ಮುಂಜಾನೆ 10-30 ಗಂಟೆಗೆ, ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಸಭಾ ಭವನ, ಬೆಳಗಾವಿಯಲ್ಲಿ ಯಶಸ್ವಿಯಾಗಿ ನಡೆಯಿತು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು ಆಶಯ ನುಡಿಯನ್ನಾಡುತ್ತ, 19 ನೇ ಶತಮಾನದಲ್ಲಿ ನಡೆದ ಆಂಗ್ಲೋ - ಕಿತ್ತೂರು ಕದನಗಳೆ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರತಿರೋಧ ಮುನ್ನುಡಿಯನ್ನು ಬರೆದಿವೆ. 1824ರಲ್ಲಿ ಬೆಳಗಾವಿಯ ಕಿತ್ತೂರಿನಲ್ಲಿ ನಡೆದ ಹೋರಾಟಕ್ಕೆ ಎರಡು ಶತಮಾನಗಳ ಇತಿಹಾಸವಿದೆ.ಹಾಗೆಯೇ 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ ತುಂಬಿದೆ.ಇದು ಬೆಳಗಾವಿ ಜಿಲ್ಲೆಯ ಕೊಡುಗೆಯನ್ನು ಸದಾ ಕಾಲ ದೇಶಕ್ಕೆ ನೆನಪಿಸುತ್ತದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮ ಇಂದಿಗೂ ಕೋಟ್ಯಾಂತರ ಭಾರತೀಯರಲ್ಲಿ ದೇಶ ಪ್ರೇಮದ ಅಭಿಮಾನವನ್ನು ಇಂದಿಗೂ ಕಾಣುತ್ತೇವೆ. ಪ್ರತಿ ದೇಶದ ಇಂತಹ ಹೋರಾಟಗಳು ಜನಕಥನಗಳಾಗಿವೆ.ಆದರೆ ಆಂಗ್ಲರ ಎರಡು ಶತಮಾನಗಳ ಸುಧೀರ್ಘ ವಸಾಹತುಶಾಹಿ ಆಡಳಿತವನ್ನು ಭಾರತದಲ್ಲಿ ನಡೆಸಿದ್ದು ಹಾಗೂ ಸಮಸ್ತ ಭಾರತಿಯರು ಅದನ್ನು ಪ್ರಬಲವಾಗಿ ವಿರೋಧಿಸುವ ಮೂಲಕ ಪ್ರಜಾಪ್ರಭುತ್ವದ ಭಾರತೀಯ ಧ್ವಜ ಹಾರಾಡುವಂತೆ ಮಾಡಿದ್ದು ಇಂದಿಗೂ ಜಾಗತಿಕ ಇತಿಹಾಸದಲ್ಲಿ ರೋಚಕ ಯಶೋಗಾಥೆಯಾಗಿದೆ.ಬೆಳಗಾವಿಯ ಕಿತ್ತೂರಿನ ವೀರರಾಣಿ ಚನ್ನಮ್ಮ 1824 ರಲ್ಲಿಯೇ ಪ್ರಬಲ ಬ್ರಿಟಿಷರ ವಿರುದ್ಧವಾಗಿ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಕಹಳೆ ಮೊಳಗಿಸಿದಳು. ಇಂದಿಗೂ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿಯೆಂದು ಚನ್ನಮ್ಮನ್ನು ನಾಡು ಗೌರವಿಸುತ್ತದೆ. ಕರ್ನಾಟಕದ ವೀರ ವನಿತೆಯರಾದ ರಾಣಿಯರು, ನಾಯಕರ ಪತ್ನಿಯರು, ಪಾಳೆಗಾರರ ಹೆಂಡತಿಯರು, ದೇಸಗತಿಗಳ ರಾಣಿಯರು ಈ ಸಂಗ್ರಾಮದಲ್ಲಿ ಕೆಚ್ಚೆದೆಯಿಂದ ಹೋರಾಡಿದ್ದಾರೆ.ಸಾಮಾಜಿಕ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದು ಹೋರಾಡಿದ ನಾಯಕಿಯರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಪರೋಕ್ಷವಾಗಿ ಊಟ ಒದಗಿಸುವ ಹಾಗೂ ಅವರ ಕುಟುಂಬದ ಸಂರಕ್ಷಣೆ ಜವಾಬ್ದಾರಿಯನ್ನು ನಿಭಾಯಿಸಿದ ತಾಯಂದಿರ ಸೇವೆ ಅವಿಸ್ಮರಣೀಯ. ಗಾಂಧೀಜಿಯವರು ಚಲೇಜಾವ್ ಚಳುವಳಿಯಿಂದ ಪ್ರಭಾವಿತರಾದ ಅನೇಕ ಕನ್ನಡತಿಯರು ಸಮಾಜಕ್ಕಾಗಿ ತಮ್ಮ ಬದುಕನ್ನು ಮಿಸಲಿರಿಸಿದ್ದು ಶ್ಲಾಘನೀಯ.1834ರ ಕಿತ್ತೂರು ಹೋರಾಟವು ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಮವಾಗಿದ್ದು ನಂತರದ ಸಂಗೋಳ್ಳಿ ರಾಯಣ್ಣನ ಬಂಡಾಯವು ಎರಡನೇ ಹೋರಾಟವಾಗಿದೆ.ತದನಂತರ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹೋರಾಟ ನಡೆದಿದೆ.ಝಾನ್ಸಿ ಹೋರಾಟಕ್ಕಿಂತ 34 ವರ್ಷ ಮುಂಚೆಯೇ ಬೆಳಗಾವಿಯ ಕಿತ್ತೂರು ಹೋರಾಟವೇ ಭಾರತದಲ್ಲಿ ಆಂಗ್ಲರಿಗೆ ಮೊದಲ ಸೋಲಿನ ಕಹಿ ಉಣಿಸಿದೆ.1924 ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಸಮ್ಮೇಳನ ನಡೆಯಿತು.ಇದರಿಂದ ಗಾಂಧೀಜಿಯವರ ಪ್ರಭಾವ ಕರ್ನಾಟಕದ ಅನೇಕ ಹೋರಾಟಗಾರ ಮೇಲೆ ಅತೀವ ಪರಿಣಾಮ ಬೀರಿತ್ತು .ಈ ಮಾರ್ಗದಲ್ಲಿ ಮುನ್ನಡೆದ ಅನೇಕರು ಅಪ್ಪಟ ಗಾಂಧಿವಾದಿಗಳಾಗಿದ್ದರು.ಮುಂದೆ ಭಾರತದ ಸ್ವಾತಂತ್ರ್ಯೋತ್ಸ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ತಯಾರಿಸಿ ದೇಶಕ್ಕೆ ನೀಡಿದ ಹೆಮ್ಮೆ ಅವಿಭಜಿತ ಬೆಳಗಾವಿ ಜಿಲ್ಲೆಯ ಗರಗ ಗ್ರಾಮಕ್ಕೆ ಹಾಗೂ ಧಾರವಾಡದ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಸಲ್ಲುತ್ತದೆ ಎಂದು ನುಡಿದರು.
ಬೆಳಗಾವಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎನ್.ಆರ್.ಪಾಟೀಲ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಈ ಹೋರಾಟದಲ್ಲಿ ದೇಶದ ಎಲ್ಲ ಪ್ರದೇಶದ ದೇಶಪ್ರೇಮಿಗಳ ಭಾಗವಹಿಸುವಿಕೆ ಅಚ್ಚಳಿಯದ ಇತಿಹಾಸ. ಅದರಲ್ಲೂ ಬೆಳಗಾವಿ ಜಿಲ್ಲೆಯ ಕೊಡುಗೆ ಅಜರಾಮರವಾಗಿದೆ. ರಾಜಕೀಯ ಮತ್ತು ಸಾಮಾಜಿಕ ಸಂಘಟನೆ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ವೀರ ರಾಣಿಯರಲ್ಲಿ ಕಿತ್ತೂರಿನ ವೀರ ರಾಣಿ ಚನ್ನಮ್ಮನ ಸಾಹಸಗಾಥೆ ಇಂದಿಗೂ ಕೋಟ್ಯಾಂತರ ಹೆಣ್ಣುಮಕ್ಕಳಿಗೆ ಮಾದರಿಯಾಗಿದೆ .ಪ್ರತ್ಯಕ್ಷವಾಗಿ ಅನೇಕ ಮಹಿಳಾ ಸೇನಾನಿಗಳು ವಿರೋಚಿತ ಹೋರಾಟದಲ್ಲಿ ಭಾಗವಹಿಸಿದ್ದರೆ ಇನ್ನೂ ಅನೇಕ ಮಹಿಳೆಯರು ನೇರವಾಗಿ ಗಾಂಧಿಯವರು ಕರೆ ಕೊಟ್ಟ ಸತ್ಯಾಗ್ರಹದಲ್ಲಿ ಭಾಗವಹಿಸಿದರೆ ಮತ್ತೆ ಅನೇಕರು ಪರೋಕ್ಷವಾಗಿ ಹೋರಾಟಗಾರರಿಗೆ ಸ್ಪೂರ್ತಿ ತುಂಬಿದ್ದರು ಎಂದು ನುಡಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಬಸಮ್ಮ .ಎಸ್. ಗಂಗನಳ್ಳಿಯವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತ,ಬೆಳಗಾವಿಯ ಕಿತ್ತೂರಿನ ವೀರರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ .19 ನೇ ಶತಮಾನದಲ್ಲಿಯೇ ಆಂಗ್ಲರ ವಿರುದ್ಧವಾಗಿ ಸ್ವಾತಂತ್ರ್ಯ ಹೋರಾಟದದ ಸಂಘರ್ಷಕ್ಕೆ ನಾಂದಿ ಹಾಡಿದರು.ಕರ್ನಾಟಕದ ಅನೇಕ ಅರಸು ಮನೆತನದವರು ಸಂಸ್ಥಾನಿಕರು ಪಾಳೆಯಗಾರರು ಈ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.ಇಂತಹ ಈ ನೆಲದಲ್ಲಿ ನಾವು ಬಾಳಿ ಬದುಕುತ್ತಿದ್ದೇವೆ ಎಂಬುದೆ ಹೆಮ್ಮೆ ಎಂದರು.ಕಾಲೇಜು ಐ.ಕ್ಯೂ. ಎ.ಸಿ ಘಟಕದ ಸಂಯೋಜಕರು ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ ಜಯಶೀಲ ಜೆ.ಹಾಗೂ ಚಕೋರ ಸಾಹಿತ್ಯ ವಿಚಾರ ವೇದಿಕೆ, ಬೆಳಗಾವಿಯ ಜಿಲ್ಲಾ ಸಂಚಾಲಕರಾದ ಶ್ರೀ ಶಿವರಾಜ ಅರಳಿಯವರು ಕಾರ್ಯಕ್ರಮ ಸಂಯೋಜಿಸಿದರು.ಡಾ ವಿದ್ಯಾ ಕುಂದರಗಿ ಡಾ ಹೇಮಾ ಸೊನೊಳ್ಳಿ ಹಾಗೂ ಕಾಲೇಜು ಅಧ್ಯಾಪಕರ ಬಳಗ ಡಾ ಲಕ್ಕಮ್ಮ ಬೂದನವರ ಡಾ ಪ್ರವೀಣ ಕೊರ್ಬು. ಉಪಸ್ಥಿತರಿದ್ದರು .ಕುಮಾರಿ ಪ್ರಗತಿ ಮುತ್ತೂರು ಹಾಗೂ ಸಂಗಡಿಗರು ಪ್ರಾರ್ಥನೆ ಮಾಡಿದರು.ಕುಮಾರಿ ನಿರ್ಮಲಾ ರಾಘಣ್ಣವರ ವಂದನಾರೆ್ಣ ಮಾಡಿದರು.ಕುಮಾರಿ ಅಕ್ಷತಾ ಮೇತ್ರಿ ನಿರೂಪಿಸಿದರು.ಕಾಲೇಜಿನ ಸ್ಕೌಟ್ ನ ರೇಂಜರ್ ತಂಡದವರು ವಿಶೇಷ ಕವಾಯತು ಪ್ರಸ್ತುತ ಪಡಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 