ಡಿಕೆಶಿ ಸಂಚಾರಿ ಕ್ಯಾಂಟೀನ್ ಆರಂಭ

ಶಿವಮೊಗ್ಗ, ಏ.15, ಶಿವಮೊಗ್ಗದಲ್ಲಿ  ಆಸ್ಪತ್ರೆಯ ರೋಗಿಗಳಿಗೆ, ಸಂಬಂಧಿಕರಿಗೆ ಹಾಗೂ ಸಿಬ್ಬಂದಿಗೆ ಅನುಕೂಲವಾಗುವಂತೆ  ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಸಂಚಾರಿ ಕ್ಯಾಂಟೀನ್ ನ  ಆರಂಭಿಸಲಾಗಿದ್ದು, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕ್ಯಾಂಟೀನ್‌ಗೆ  ಚಾಲನೆ ನೀಡಿದರು.ಕೊರೊನಾ ಲಾಕ್‌ ಡೌನ್‌ನಿಂದ ಆಸ್ಪತ್ರೆಯ ರೋಗಿಗಳಿಗೆ ಮತ್ತು  ಸಿಬ್ಬಂದಿಗೆ ಹಾಗೂ ನಿರ್ಗತಿಕರಿಗೆ ಆಹಾರದ ಕೊರತೆ ನೀಗಿಸುವ ಉದ್ದೇಶಕ್ಕಾಗಿ  ಕಾಂಗ್ರೆಸ್‌ನಿಂದ ಡಿಕೆಶಿ ಮೊಬೈಲ್ ಕ್ಯಾಂಟೀನ್ ಆರಂಭಿಸಲಾಗಿದೆ. ಲಾಕ್‌ ಡೌನ್  ಅವಧಿ ಮುಗಿಯುವವರೆಗೂ ಈ ಸೇವೆ ಲಭ್ಯವಾಗಲಿದೆ ಎಂದು ಡಿಕೆಶಿ ಅಭಿಮಾನಿಗಳ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಹೇಳಿದ್ದಾರೆ.ಆರಂಭದ ಮೊದಲ ದಿನವಾದ ಇಂದು 750 ಜನರಿಗೆ ವೆಜ್ ರೈಸ್ ಹಾಗೂ ಫಲಾವ್ ಹಂಚಲು ಸಿದ್ಧವಾಗಿತ್ತು.  ಶಿವಮೊಗ್ಗ  ಪಟ್ಟಣದ ಜ್ಯೋತಿ ಕ್ಲೀನಿಕ್, ಮಲ್ನಾಡ್ ಹಾಸ್ಪಿಟಲ್ ಮಹಾಲಕ್ಷ್ಮೀ ಆಸ್ಪತ್ರೆ ಸೇರಿದಂತೆ  ಒಟ್ಟು 15 ಆಸ್ಪತ್ರೆಗಳಲ್ಲಿ ಬೆಳಗ್ಗಿನ ತಿಂಡಿ, ಮದ್ಯಾಹ್ನದ ಊಟ ಹಂಚುವ ವ್ಯವಸ್ಥೆ  ಮಾಡಲಾಯಿತು.ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಕೊರೊನ ವಿರುದ್ಧ  ಹೋರಾಡುವುದರ ಜೊತೆಗೆ ಜನರ ಹಸಿವನ್ನೂ ನೀಗಿಸಬೇಕಿದೆ. ಈ ನಿಟ್ಟಿನಲ್ಲಿ ಡಿಕೆಶಿ  ಕ್ಯಾಂಟೀನ್ ಆರಂಭಿಸಿರುವ ದೇವೇಂದ್ರಪ್ಪನವರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ  ವ್ಯಕ್ತಪಡಿಸಿದರು.