“ಅಂಚೆಗೆ ಹೋಗದ ಪತ್ರ” ಚಿತ್ರದ ‘ಕಣ್ಣಂಚಲೇ ಪ್ರೀತಿ’ ಹಾಡು ಬಿಡುಗಡೆ
The song ‘Kannanchale Preeti’ from the film “Anchege Hoga Da Patra” is released.
ಲೋಕದರ್ಶನ ವರದಿ
ಬೆಳಗಾವಿ 17: ನವಗ್ರಹ ಮತ್ತು ವರ್ಚಸ್ ಸಹಯೋಗದಲ್ಲಿ ಬೆಳಗಾವಿ ಹುಡುಗರ “ಅಂಚೆಗೆ ಹೋಗದ ಪತ್ರ” ಚಿತ್ರದ ಎರಡನೇ ಹಾಡು “ಕಣ್ಣಂಚಲೇ ಪ್ರೀತಿ ಶುರುವಾಯಿತು ” ಬಿಡುಗಡೆಯಾಗಿ ಇದೀಗ ಯೂಟ್ಯೂಬ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.
ಈ ಹಾಡಿಗೆ ಖ್ಯಾತ ಗಾಯಕ ಪಂಚಮ ಜೀವ ಧ್ವನಿಯಾಗಿದ್ದು, ಎಸ್.ಕೆ.ಎಸ್ ಅವರ ಸಾಹಿತ್ಯ ಹಾಡಿನ ಭಾವವನ್ನು ಮತ್ತಷ್ಟು ಮನಮುಟ್ಟುವಂತೆ ಮಾಡಿದೆ. ಸಂಪೂರ್ಣ ಉತ್ತರ ಕರ್ನಾಟಕದ ಪ್ರತಿಭೆಗಳ ಒಕ್ಕೂಟದಲ್ಲಿ ನಿರ್ಮಾಣವಾಗಿರುವ , ಉತ್ತರ ಕರ್ನಾಟಕದಲ್ಲೇ ಸಂಪೂರ್ಣ ಚಿತ್ರೀಕರಣವಾದ ಈ ಚಿತ್ರದಲ್ಲಿ ಪ್ರವೀಣ ಸುತಾರ ನಾಯಕನಾಗಿ ಮತ್ತು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ನಾಯಕಿಯಾಗಿ ಸಹನಾ ಪ್ರಕಾಶ ಜೊತೆಗೆ “ರಕ್ಕಸಪುರದೊಳ” ಖ್ಯಾತಿಯ ಸೌಮ್ಯ ಅಮರಪೂರಕರ್ ಮತ್ತು “ಮಹಾನಟಿ ರನ್ನರ್ ಆಫ್” ವರ್ಷಾ ದಿಗ್ರೆಜೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ದಿವಾಕರ ಎಂ ಅವರ ಸಂಗೀತ , ಮಂಜು ಬಸವರಾಜ ಛಾಯಾಗ್ರಹಣ, ಸಂಕಲನ ಶಿವ ಗಂಗಾಧರ ರಂಜಿತ ಪಾಂಡೆ ವಿ.ಎಫ್.ಎಕ್ಸ್ , ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ನಿರ್ವಹಿಸಿದ್ದು, ಸಹ ನಿರ್ದೇಶಕರಾಗಿ ವೀಣಾ ಮತ್ತು ವಿಶಾಲ ಕೆಲಸ ಮಾಡಿದ್ದು, ಪ್ರವೀಣ ತಾನಾಜಿ ಸುತಾರ, ಮಂಜುನಾಥ ಹುಲಮನಿ, ವರ್ಚಸ್ ಮತ್ತು ಪರದಿಶೆ ನಿರ್ಮಾಪಕರಾಗಿದ್ದಾರೆ. ಚಿತ್ರದ ಎಲ್ಲ ಕಾರ್ಯಗಳೂ ಮುಗಿದು ಬಿಡುಗಡೆಗೆ ಸಿದ್ದವಾಗಿದ್ದು, ಮೇ ತಿಂಗಳ ಕೊನೆ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವದಾಗಿ ನಿರ್ದೇಶಕ ಪ್ರವೀಣ ಸುತಾರ ತಿಳಿಸಿದ್ದಾರೆ.
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ಮಗನಿಗಾಗಿ 2ನೇ ದಿನವು ಮುಂದುವರಿದ ಶೋಧ ಕಾರ್ಯ: ಕುಟುಂಬಕ್ಕಿದ್ದ ಒಬ್ಬನೆ ಮಗು ನೀರುಪಾಲು
ಅಕ್ರಮ ಚಟುವಟಿಕೆಗಲ್ಲಿ ಭಾಗಿ : ಇಬ್ಬರು ಆರೋಪಿತರು ಬೆಳಗಾವಿ ಜಿಲ್ಲೆಯಿಂದ ಗಡಿಪಾರು 