ಬಡ ರೈತನ ಮಗ ದೇಶ ಮೆಚ್ಚುವ ವಿಜ್ಞಾನಿ! ಮುಂಡಗೋಡಿನ ಬಸವರಾಜ ದೊಡ್ಡಮನಿ ಸಾಧನೆಗೆ ಜನರಿಂದ ಅಭಿನಂದನೆ
The son of a poor farmer is a scientist that the country admires! Basavaraja Doddamani of Mundagode
ಲೋಕದರ್ಶನ ವರದಿ
ಮುಂಡಗೋಡ 11 : ತಾಲೂಕಿನ ಗ್ರಾಮೀಣ ಭಾಗದ ಯುವಕನೊಬ್ಬ ಕಡುಬಡತನದಲ್ಲಿಯೂ ಛಲದಿಂದ ಓದಿ ಉನ್ನತ ಶಿಕ್ಷಣ ಪಡೆದು ಕೃಷಿ ವಿಜ್ಞಾನಿಯಾಗಿ ಹೊರಹೊಮ್ಮಿರುವುದು ಹೆಮ್ಮೆಯ ವಿಷಯವಾಗಿದೆ. ಪಟ್ಟಣದ ಹುಬ್ಬಳ್ಳಿ ರಸ್ತೆಯ ಬಳಿಯ ಬಾಚಣಕಿ ಗ್ರಾಮದ ರೈತ ಕುಟುಂಬದ ಅಂದಾನಪ್ಪಾ- ಶೈಲ ದಂಪತಿಯ ಪುತ್ರ ಬಸವರಾಜ ದೊಡ್ಡಮನಿ ಇದೀಗ ಕೃಷಿ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ.
ತಂದೆ ಅಂದಾನೆಪ್ಪ ಅವರು 8 ಎಕರೆ ಜಮೀನಿನಿಂದ ಬರುತ್ತಿದ್ದ ಅಲ್ಪ ಆದಾಯದಲ್ಲೇ ಕುಟುಂಬದ ಖರ್ಚು ಹಾಗೂ ಮಕ್ಕಳ ಶಿಕ್ಷಣವನ್ನು ಕಷ್ಟಪಟ್ಟು ನಿಭಾಯಿಸಿದರು. ಇದೇ ಪರಿಸ್ಥಿತಿಯಲ್ಲೂ ಬಸವರಾಜ ಅವರು ಬಾಲ್ಯದಿಂದಲೇ ಸಾಧನೆಯ ಕನಸು ಕಂಡು ನಿರಂತರ ಪರಿಶ್ರಮದಿಂದ ಮುಂದುವರಿದರು. ಅವರು 1ರಿಂದ 3ನೇ ತರಗತಿವರೆಗೆ ಸವಣೂರಿನಲ್ಲಿ, 4 ಮತ್ತು 5ನೇ ತರಗತಿಯನ್ನು ಬಾಚಣಕಿಯಲ್ಲಿ ಹಾಗೂ 6ರಿಂದ 10ನೇ ತರಗತಿವರೆಗೆ ಮುಂಡಗೋಡದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಿಕ್ಷಣ ಪಡೆದರು. ಪಿಯುಸಿ ವಿಜ್ಞಾನ ವಿಭಾಗವನ್ನು ಸವಣೂರಿನ ಮುರಾರ್ಜಿ ಶಾಲೆಯಲ್ಲಿ ಪೂರ್ಣಗೊಳಿಸಿದರು. ಮುಂದೆ ಹಾವೇರಿ ಜಿಲ್ಲೆಯ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದಲ್ಲಿ ಬಿಎಸ್ಸಿ ಅಗ್ರಿ ಪದವಿ ಪಡೆದು, ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಎಮ್‌ಎಸ್ಸಿ ಹಾಗೂ ಪಿಎಚ್ಡಿ ಪದವಿಗಳನ್ನು ಸಂಪಾದಿಸಿದರು. ಎಮ್‌ಎಸ್ಸಿ ಅವಧಿಯಲ್ಲಿ ಐಸಿಎಆರ್ ಪರೀಕ್ಷೆಯಲ್ಲಿ 15ನೇ ರ್ಯಾಂಕ್ ಪಡೆದಿದ್ದು, ಪಿಎಚ್ಡಿ ವೇಳೆ ಎಸ್‌ಆರ್‌ಎಫ್ ಪರೀಕ್ಷೆಯಲ್ಲಿ 7ನೇ ರ್ಯಾಂಕ್ ಗಳಿಸಿದರು.
ಇತ್ತೀಚೆಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧೀನದಲ್ಲಿರುವ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಅಂಡ್ ಎಜುಕೇಶನ್ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಆಯ್ಕೆಯಾಗಿದ್ದು, 10 ಅಭ್ಯರ್ಥಿಗಳಲ್ಲಿ ಕೇವಲ ಇಬ್ಬರಲ್ಲಿ ಒಬ್ಬರಾಗಿದ್ದಾರೆ. “ಬಾಲ್ಯದಿಂದಲೂ ನನ್ನ ಓದಿಗೆ ತಂದೆ-ತಾಯಿಯ ಪ್ರೋತ್ಸಾಹವೇ ನನಗೆ ಬಲವಾಗಿದೆ. ನನ್ನ ಕನಸು ನನಸಾಗಿದೆ. ಈ ಸಾಧನೆ ನನಗೆ ಅಪಾರ ಸಂತೋಷ ತಂದಿದೆ. ಸೇವೆಯ ಸ್ಥಳ ಇನ್ನೂ ನಿಯೋಜನೆಯಾಗಬೇಕಿದೆ,” ಎಂದು ಬಸವರಾಜ ದೊಡ್ಡಮನಿ ಹೇಳಿದರು. ಸನ್ಮಾನ: ಬಸವರಾಜ ದೊಡ್ಡಮನಿ ಅವರ ಸಾಧನೆಯನ್ನು ಗ್ರಾಮಸ್ಥರು ಹಾಗೂ ಬಂಧುಗಳು ಅಭಿನಂದಿಸಿದ್ದಾರೆ. ಶಿವಾನಂದ ಕುರುಬರ, ಶಿವಣ್ಣ ದೊಡ್ಡಮನಿ, ರಾಜು ಗುಬ್ಬಕ್ಕನವರ, ಮಂಜು ಕೋಣನಕೇರಿ, ಸಂತೋಷ ವಾಸನ, ಸಂತೋಷ ಸಣ್ಣಮನಿ, ಎಸ್.ಎಸ್. ಪಾಟೀಲ ಮತ್ತು ರಬ್ಬಾನಿ ಅವರು ಅವರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 