ಒಂದೂವರೆ ತಿಂಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಗ್ರಾಮದ ಪರಿಸ್ಥಿತಿ ಸಧ್ಯ ನಿರಾಳ

ಲೋಕದರ್ಶನ ವರದಿ

ಮುದ್ದೇಬಿಹಾಳ 11: ಅಮರಗೋಳದಲ್ಲಿ ಕಸ ಚಲ್ಲುವ ವಿಷಯಕ್ಕೆ ಸಂಬಂಧಿಸಿದಂತೆ ನಡೆದಿದ್ದ ಜಗಳ ಬಗೆಹರಿದಿದ್ದು ಪರಸ್ಪರ ಶಾಂತಿ ಮತ್ತು ಸೌಹಾರ್ದತೆಯಿಂದ ಮೊದಲಿನಂತೆ ನಿತ್ಯದ ಸಹಕಾರದ ಜೀವನ ನಡೆಸಲು ದಲಿತ ಮತ್ತು ಸವಣರ್ಿಯ ಸಮುದಾಯದವರು ಅಧಿಕಾರಿಗಳು, ಗ್ರಾಮದ ಧುರೀಣರು ಮತ್ತು ದಲಿತ ಮುಖಂಡರ ಸಮ್ಮುಖ ಒಪ್ಪಿಕೊಂಡಿದ್ದು ಕಳೆದ ಒಂದೂವರೆ ತಿಂಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಗ್ರಾಮದ ಪರಿಸ್ಥಿತಿ ಸಧ್ಯ ನಿರಾಳಗೊಂಡಂತಾಗಿದೆ.

                ಗುರುವಾರ ಗ್ರಾಮಕ್ಕೆ 2ನೇ ಬಾರಿ ಭೇಟಿ ನೀಡಿದ್ದ ತಾಲೂಕು ಮಟ್ಟದ ಅಧಿಕಾರಿಗಳ ತಂಡ ಗ್ರಾಮದ ಧುರೀಣರಾದ ಬಿಜೆಪಿ ಮುಖಂಡ ಮಲಕೇಂದ್ರಗೌಡ ಪಾಟೀಲ, ಕಾಂಗ್ರೆಸ್ ಮುಖಂಡ ಸಿದ್ದಣ್ಣ ಮೇಟಿ ಮತ್ತು ದಲಿತ ಮುಖಂಡರ ತಂಡ ಗ್ರಾಮದ ನಾಗಲಿಂಗಮಠದಲ್ಲಿ ಸವಣರ್ಿಯರು ಮತ್ತು ದಲಿತರ ಸಭೆ ನಡೆಸುವ ಮೂಲಕ ಸಂಧಾನ ಯಶಸ್ವಿಗೊಳಿಸಲು ಅವಕಾಶ ಕಲ್ಪಿಸಲಾಗಿತ್ತು.

                ಬಸವನ ಬಾಗೇವಾಡಿ ಡಿವೈಎಸ್ಪಿ ಮಹೇಶ್ವರಗೌಡ, ಸಿಪಿಐ ರವಿಕುಮಾರ ಕಪ್ಪತ್ತನ್ನವರ್, ತಹಸೀಲ್ದಾರ್ ಎಂ.ಎಸ್. ಬಾಗವಾನ, ಬಿಜೆಪಿ ಧುರೀಣ ಮಲಕೇಂದ್ರಗೌಡ ಪಾಟೀಲ, ಕಾಂಗ್ರೆಸ್ ಧುರೀಣ ಅಖಿಲ ಗೋವಾ ಕನ್ನಡಿಗರ ಮಹಾಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ, ದಲಿತ ಮುಖಂಡರಾದ ಡಿ.ಬಿ.ಮುದೂರ, ಸಿ.ಜಿ.ವಿಜಯಕರ್, ಹರೀಶ ನಾಟಿಕಾರ ಮತ್ತಿತರರು ಮಾತನಾಡಿ ಪರಸ್ಪರ ಹೊಂದಿಕೊಂಡು ಸಹಕಾರದಿಂದ ಬಾಳುವುದನ್ನು ಮುಂದುವರೆಸಿದಲ್ಲಿ ಆಗುವ ಪ್ರಯೋಜನ ಮತ್ತು ಅಭಿವೃದ್ಧಿ ಕುರಿತು ಹಲವಾರು ವಿಷಯಗಳನ್ನು ಚಚರ್ಿಸಿ ಎರಡೂ ಸಮುದಾಯದವರಿಗೆ ಬುದ್ದಿವಾದ ಹೇಳಿದರು. ಇನ್ನು ಮುಂದೆ ಯಾವುದೇ ಕಾರಣಕ್ಕೂ ದ್ವೇಷ, ಹಗೆತನ ಬೆಳೆಸಬಾರದು ಎಂದು ಸಲಹೆ ನೀಡಿದರು. ಕೆಲ ದಿನಗಳ ಮಟ್ಟಿಗೆ ಗ್ರಾಮದಲ್ಲಿನ ಸ್ಥಿತಿಗತಿ ಅರಿಯಲು ಪೊಲೀಸ್ ಪೇದೆಗಳನ್ನು ಗ್ರಾಮದಲ್ಲಿರುವಂತೆ ಕ್ರಮ ಕೈಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ತಾಲೂಕು ಆಡಳಿತ ಸೂಚನೆ ನೀಡಿತು.

                ಮೊದಲಿನ ಸಭೆಯಲ್ಲಿ ಚಚರ್ಿಸಿದಂತೆ 100 ದಲಿತರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಕೊಡುವ ಭರವಸೆಯನ್ನು ಜಾರಿಗೊಳಿಸಿ ಮೊದಲ ಹಂತವಾಗಿ 24 ಜನರಿಗೆ ಉದ್ಯೋಗ ಒದಗಿಸಲು, 2-3 ದಿನದಲ್ಲಿ ಉಳಿದವರಿಗೂ ಉದ್ಯೋಗ ಒದಗಿಸಲು ತಂಗಡಗಿ ಗ್ರಾಪಂ ಪಿಡಿಓ ಖೂಬಾಸಿಂಗ್ ಜಾಧವ ಕ್ರಮ ಕೈಕೊಂಡರು. ದಲಿತರ ಜಾನುವಾರುಗಳು ಮೇವಿಲ್ಲದೆ ತೊಂದರೆಗೀಡಾಗಿದ್ದು 2-3 ದಿನದಲ್ಲಿ ಮೇವು ಪೂರೈಸಿ ಸಮಸ್ಯೆ ಬಗೆಹರಿಸುವ ಭರವಸೆಯನ್ನು ತಾಲೂಕು ಆಡಳಿತ ದಲಿತರಿಗೆ ನೀಡಿತು.

                ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕ ಎನ್.ಆರ್.ಉಂಡಿಗೇರಿ, ಪಿಎಸೈ ಮಲ್ಲಪ್ಪ ಮಡ್ಡಿ, ತಂಗಡಗಿ ಗ್ರಾಪಂ ಅಧ್ಯಕ್ಷ ಶಿವಾನಂದ ಮಂಕಣಿ, ಎಸ್.ಎಚ್.ಜೈನಾಪುರ, ಪ್ರಮುಖರಾದ ಸಿದ್ದಪ್ಪ ಕವಡಿಮಟ್ಟಿ, ಮಲಕಾರಿ ನದಾಫ, ಸಂಗಣ್ಣ ಕವಡಿಮಟ್ಟಿ, ಯಮನಪ್ಪ ಮಾದರ, ದಲಿತ ಮುಖಂಡರಾದ ಅಶೋಕ ಇರಕಲ್, ಬಾಲಚಂದ್ರ ಹುಲ್ಲೂರ ಮತ್ತಿತರರು ಇದ್ದರು.