ದೀರ್ಘಾಯುಷ್ಯದ ಗುಟ್ಟು ಎಂದರೆ ಯೋಗ: ವಿ.ಕೃಷ್ಣಮೂರ್ತಿ
The secret to longevity is yoga: V. Krishnamurthy
ಬೆಳಗಾವಿ 13: ಇಂದಿನ ಅಧುನಿಕ ಯುಗದಲ್ಲಿ ನಾವೆಲ್ಲ ಒತ್ತಡದಿಂದ ಬಳಲುತ್ತಿದ್ದು, ಇದರಿಂದ ಅನೇಕ ರೋಗಗಳಿಂದ ಬಳಲುವಂತಾಗಿದೆ. ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ನೂರಾರು ವರ್ಷ, ಬಾಳುತ್ತಿದ್ದು. ಅವರೆಲ್ಲರ ದೀರ್ಘಾಯುಷ್ಯದ ಗುಟ್ಟು ಎಂದರೆ ಯೋಗ. ಯೋಗವು ನಮ್ಮನ್ನೆಲ್ಲ ದೈಹಿಕವಾಗಿ, ಮಾನಸಿಕವಾಗಿ ಹಾಗೂ ಅಧ್ಯಾತ್ಮಿಕವಾಗಿ ಸದೃಢರನ್ನಾಗಿಸುತ್ತದೆ ಹಾಗೂ ಒತ್ತಡ ನಿವಾರಿಸುತ್ತದೆ. ಕಾರಣ ಯೋಗವನ್ನು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಒಂದನ್ನಾಗಿರಸಬೇಕು ಎಂದು ಕಾರಾಗೃಹದ ಪ್ರಭಾರಿ ಮುಖ್ಯ ಅಧೀಕ್ಷಕ ವಿ.ಕೃಷ್ಣಮೂರ್ತಿ ಹೇಳಿದರು.
ಯೋಗ ವಿದ್ಯಾಧಾಮ ಫೌಂಡೇಶನ್, ಬೆಳಗಾವಿ ವತಿಯಿಂದ ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ಕಾರಾಗೃಹ ನಿವಾಸಿಗಳಿಗೆ ದಿ. 12ರಂದು ಆಯೋಜಿಸಲಾಗಿದ್ದ 15 ದಿನಗಳ ಯೋಗ ತರಬೇತಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ, 15 ದಿನಗಳ ಕಾಲ ಯೋಗ ತರಬೇತಿ ಪಡೆದ ಕಾರಾಗೃಹ ವಾಸಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಮಹಾಪೌರ ವಿಜಯ ಮೋರೆ ಅವರು ಮಾತನಾಡಿ ಕಾರಾಗೃಹ ಇಲಾಖೆಯು ನಿವಾಸಿಗಳ ಸರ್ವತೋಮುಖ ಪ್ರಗತಿಗಾಗಿ ಅನೇಕ ಕಾರ್ಯಕ್ರಮ, ತರಬೇತಿಗಳನ್ನು ಆಯೋಜಿಸಿದ್ದು ಸ್ತುತ್ಯಾರ್ಹ ಕಾರಣ ನಿವಾಸಿಗಳಾದ ತಾವು ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದರಿಂದ ತಾವು ಒತ್ತಡದಿಂದ ಮುಕ್ತರಾಗಿ ವಿವಿಧ ಹೊಸ ವಿಷಯಗಳ ಬಗ್ಗೆ ಜ್ಞಾನ ಪಡೆದುಕೊಳ್ಳಬೇಕು ಎಂದು ಹೇಳಿದರು.
ರಾಮಜಿ ಗಡಗಾಂವಿ ಅವರು ಮಾತನಾಡಿ ಯೋಗ ಫೌಂಡೇಶನ ವತಿಯಿಂದ 15 ದಿನಗಳ ಕಾಲ ಆಯೋಜಿಸಲಾದ ಯೋಗ ತರಬೇತಿಯಲ್ಲಿ ಎಲ್ಲ ನಿವಾಸಿಗಳು ಅತ್ಯಂತ ಉತ್ಸಾಹ ಹಾಗೂ ನಿಷ್ಠೆಯಿಂದ ಭಾಗವಹಿಸಿದ್ದು, ಮುಂದಿನ ದಿನಗಳಲ್ಲಿ ಇನ್ನು ಅನೇಕ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವಲ್ಲಿನಮಗೆ ಪ್ರೇರಣೆಯಾಗಿರುವಿರಿ. ತರಬೇತಿಯ ನಂತರ ತಾವು ನಿರಂತರವಾಗಿ ಯೋಗ, ಧ್ಯಾನ, ಪ್ರಾಣಾಯಮ ಇವುಗಳನ್ನು ಮಾಡಿ ಉತ್ತಮ ಆರೋಗ್ಯಕರ ಜೀವನವನ್ನು ಸಾಗಿಸಬೇಕು ಎಂದು ಹೇಳಿದರು.
ವಿಜಯ ಮೋರೆ ಶ್ರೀ 15 ದಿನಗಳ ಕಾಲ ತರಬೇತಿಯಲ್ಲಿ ಯೋಗ ಗುರು ಸುರೇಶ, ಅಶೋಕ, ವಿನೋದ ದೀಪಾ ಬಾಗೇವಾಡಿ, ಸುರೇಖಾ ಕಲಬುರ್ಗಿ ನಿವಾಸಿಗಳಿಗೆ ಯೋಗ ತರಬೇತಿ ನೀಡಿದರು. ತರಬೇತಿಯಲ್ಲಿ ಒಟ್ಟೂ 100 (70 ಪುರುಷ + 30 ಮಹಿಳೆ) ಜನ ನಿವಾಸಿಗಳು ಭಾಗವಹಿಸಿದ್ದರು. ಎಲ್ಲರಿಗೂ ಪ್ರಮಾಣ ಪತ್ರ ಹಾಗೂ ಯೋಗ ಪುಸ್ತಕ ವಿತರಿಸಲಾಯಿತು. ನಿವಾಸಿಗಳಾದ ಪ್ರಿಯಾಂಕಾ, ಮಹಾಂತೇಶ, ಜೈಪಾಲ ತರಬೇತಿಯ ಕುರಿತು ಅನಿಸಿಕೆ ವ್ಯಕ್ತ ಪಡಿಸಿದರು ಹಾಗೂ ಸದಾಶಿವ, ಶ್ರವಣ, ಈರ್ಪ ಈ ನಿವಾಸಿಗರು ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿದರು.
ಜೈಲರಗಳಾದ ರಾಜೇಶ, ಬಸವರಾಜ, ರಮೇಶ ಹಾಗೂ ಶಿಕ್ಷಕ ಶಶಿಕಾಂತ ಎಸ್.ವಾಯ್. ಹಾಗೂ ಯೋಗ ಫೌಂಡೇಶನನ ಗೀರೀಶ ತೆಂಡುಲಕರ ಉಪಸ್ಥಿತರಿದ್ದರು. ನಿವಾಸಿಗಳಾದ ಸುಧಾ ಹಾಗೂ ಪ್ರಿಯಾಂಕಾ ಪ್ರಾರ್ಥಿಸಿದರು. ಎಸ್.ಎಸ್.ಯಾದಗುಡ ನಿರೂಪಿಸಿ ವಂದಿಸಿದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 