ಆರೋಗ್ಯದ ಗುಟ್ಟು ಆಹಾರದಲ್ಲಿದೆ: ಡಾ. ಕುಲಕರ್ಣಿ
The secret to health lies in food: Dr. Kulkarni
ಧಾರವಾಡ 07: ಆರೋಗ್ಯದ ಗುಟ್ಟು ಆಹಾರದಲ್ಲಿದೆ. ದೇಹಕ್ಕೆ ಅಗತ್ಯವಾದ ಆಹಾರವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸರಿಯಾದ ಸಮಯದಲ್ಲಿ ಸೇವಿಸುವುದು ಅಗತ್ಯವೆಂದು ಡಾ. ಅನಿರುಧ್ ಕುಲಕರ್ಣಿ ಹೇಳಿದರು.
ಧಾರವಾಡ ಲಯನ್ಸ್ ಸಂಸ್ಥೆಯು ರೆಡ್ಡಿ ಕಾಲೋನಿಯ ಮಹಿಷಿ ಟ್ರಸ್ಟ್‌ನ ಬನಶಂಕರಿ ವಾನಪ್ರಸ್ಥಾಶ್ರಮದಲ್ಲಿ ಮಂಗಳವಾರದಂದು ಏರಿ್ಡಸಿದ ಹಸಿವಿನ ಸೇವೆಯ ಸಪ್ತಾಹದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಷಿ ಟ್ರಸ್ಟ್ ನ ಆಡಳಿತಾಧಿಕಾರಿ ಗುರುರಾಜ ನಾಡಿಗೇರ ಮಾತನಾಡಿ,ಲಯನ್ಸ್ ಸಂಸ್ಥೆಗಳು ಪ್ರಪಂಚದಾದ್ಯಂತ ಹಸಿವಿನ ವಿರುದ್ಧ ಹೋರಾಡುವ ಕಾರ್ಯವನ್ನು ಶ್ಲಾಘಿಸಿದರು.
ಬನಶಂಕರಿ ವಾನಪ್ರಸ್ಥಾಶ್ರಮದ ಹಿರಿಯರಿಗೆಲ್ಲ ಅನ್ನದಾಸೋಹವನ್ನು ವಲಯ ಅಧ್ಯಕ್ಷೆ ಶೈಲಾ ಕರಗುದರಿ ಮಾಡಿದರು. ಮೀರಾ ರಾವ್ ತಮ್ಮ ಜನ್ಮದಿನದ ಪ್ರಯುಕ್ತ 65 ರಹವಾಸಿಗಳಿಗೆ ದಿನಸಿ ಮತ್ತು ಹಣ್ಣುಗಳನ್ನು ವಿತರಿಸಿದರು.
ಶ್ರೀಕಾಂತ ದೇವಗಿರಿ, ಹರ್ಷ ದೇಸಾಯಿ, ರಾಜೀವ ಪಾಟೀಲ ಕುಲಕರ್ಣಿ, ಶ್ರೀಕಾಂತ .ಸಿ.ಕೆ,ಶೈಲಾ ಡಂಬಳ, ನೀತಾ ಕೊಪ್ಪಿಕರ, ಅನುರಾಧಾ ಕುಲಕರ್ಣಿ, ಕವಿತಾ ಅಂಗಡಿ, ನಮ್ರತಾ ಪಾಟೀಲ, ವನಿತಾ ಹೆಬಸೂರ, ರಾಜಶ್ರೀ ಗುದಗನವರ, ಉಷ್ಮಾ ದೇಸಾಯಿ, ರಶ್ಮೀ ಭಾರದ್ವಾಜ್, ಅಮ್ರತಾ ಜೋಶಿ ಇದ್ದರು.
ಲಯನ್ಸ್ ಅಧ್ಯಕ್ಷ ಅಶ್ವಿನ್ ಕೊಪ್ಪಿಕರ ಸ್ವಾಗತಿಸಿದರು. ಲಯನ್ಸ್ ಕಾರ್ಯದರ್ಶಿ ಸುರೇಶ ಗುದಗನವರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 