ಚೈತ್ರ ನಾಟಕೋತ್ಸವದ ಎರಡನೇ ನಾಟಕ ‘ಭಾನುಮತಿ’
The second play of the Chaitra Drama Festival is 'Bhanumathi'.
ಲೋಕದರ್ಶನ ವರದಿ
ಬೆಳಗಾವಿ 30- ಮಹಾಭಾರತದಲ್ಲಿ ಭಾನುಮತಿ ಪಾತ್ರ ತುಂಬ ಅಲಕ್ಷಿತವಾದಂತಹ ಪಾತ್ರ. ಮಹಾರಾಜ ದುರ್ಯೋಧನನ ಮಡದಿಯೆಂಬ ಪಟ್ಟವನ್ನು ಬಿಟ್ಟರೆ. ಬೇರೆಲ್ಲಿಯೂ ಅವಳು ಕಾಣಿಸಿಕೊಳ್ಳುವುದಿಲ್ಲ. ಈ ವಿಷಯದ ಸುತ್ತಲೂ ನಾಟಕಕಾರ ಎಲ್. ಎಸ್. ಶಾಸ್ತ್ರಿಯವರು ತುಂಬ ಸುಂದರವಾಗಿ ಪ್ರೇಕ್ಷಕರ ಮನಮುಟ್ಟುವಂತೆ ಕತೆಯನ್ನು ಹೆಣೆಯುತ್ತ ಹೋಗಿದ್ದಾರೆ. ಪೂರ್ಣ ಮಹಾಭಾರತ ಕತೆಯನ್ನೇ ಈ ನಾಟಕ ತೆರೆದಿಡುತ್ತದೆ. ನಾಟಕಕಾರರಾಗಿಯೂ ಶಾಸ್ತ್ರಿಯವರು ಗೆದ್ದಿದ್ದಾರೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಡಾ. ಸರಜು ಕಾಟ್ಕರ್, ಶಾಸ್ತ್ರಿಯವರನ್ನು ಅಭಿನಂದಿಸಿದರು.
ಬೆಳಗಾವಿಯ ರಂಗಸಂಪದ ತಂಡದ ಮೂರು ದಿನದ ಚೈತ್ರ ನಾಟಕೋತ್ಸವದ ಎರಡನೇ ದಿನವಾದ ದಿ 27 ಶನಿವಾರದಂದು ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಹಿರಿಯ ಲೇಖಕ, ಪತ್ರಕರ್ತ ಎಲ್. ಎಸ್. ಶಾಸ್ತ್ರಿಯವರು ರಚಿಸಿದ ‘ಭಾನುವತಿ’ ನಾಟಕ ಪ್ರದರ್ಶನಗೊಂಡಿತು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಾ. ಕಾಟ್ಕರ್ ಅವರು ಮೇಲಿನಂತೆ ಅಭಿಪ್ರಾಯಪಟ್ಟರು.
ಮುಂದೆ ಮಾತನಾಡುತ್ತ ಡಾ. ಕಾಟ್ಕರ್ ಅವರು ಚುರಾಕಾದ ಸಂಭಾಷಣೆಯನ್ನು ಈ ನಾಟಕ ಹೊಂದಿದೆ. ಪ್ರಸಕ್ತ ರಾಜಕಾರಣವನ್ನು ಈ ನಾಟಕ ಪ್ರತಿನಿಧಿಸುವಂತಹ ಅಂಶಗಳನ್ನು ಹೊಂದಿದೆ. ದುರ್ಯೋಧನನ ಪಾತ್ರಧಾರಿ ವಿನಯ ಕುಲಕರ್ಣಿ ಹಾಗೂ ಭಾನುಮತಿ ಪಾತ್ರಧಾರಿ ಪದ್ಮಾ ಕುಲಕರ್ಣಿಯವರ ಅಭಿನಯ ತುಂಬ ನೈಜವಾಗಿತ್ತು ಇದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು. ಹೊಸಕೋಟೆಯವರು ಮಾತನಾಡುತ್ತ ನಾಟಕಕಾರ ಶಾಸ್ತ್ರಿಯವರು ಸಾವಿರಾರು ವರ್ಷಗಳ ನಂತರ ಭಾನುಮತಿಗೆ ಬಾಯಿಯನ್ನು ತಂದುಕೊಟ್ಟಿದ್ದಾರೆ. ಆ ಪಾತ್ರಕ್ಕೆ ಕಲಾವಿದೆ ಶ್ರೀಮತಿ ಪದ್ಮಾ ಅವರು ಜೀವ ತುಂಬಿದ್ದಾರೆ. ಡಾ. ಅರವಿಂದ ಕುಲಕರ್ಣಿಯವರ ಅತ್ಯತ್ತುಮ ನಿರ್ದೇಶನದಿಂದ ನಾಟಕ ಗೆಲುವನ್ನು ಕಂಡಿದೆ ಎಂದು ಹೇಳಿದರು.
ಡಾ. ಬಸವರಾಜ ಜಗಜಂಪಿಯವರು, ಶ್ರೀಪತಿ ಮಂಜನಬೈಲು ಮಾತನಾಡಿದರು. ಭಾರತೀಯ ಜೀವ ವಿಮಾ ನಿಗಮ ಬೆಳಗಾವಿ ಘಟಕ ಪ್ರಾಯೋಜಕತ್ವವನ್ನು ವಹಿಸಿಕೊಂಡತ್ತು. ಕಲಾವಿದರಾದ ಶ್ರೀಮತಿ ಪದ್ಮಾ ಕುಲಕರ್ಣಿ, ಎ. ಎಂ. ಕುಲಕರ್ಣಿ, ಅರವಿಂದ ಪಾಟೀಲ, ಎಸ್. ವಿ. ದೀಕ್ಷಿತ, ವಿನಯ ಕುಲಕರ್ಣಿ, ಪ್ರಸಾದ ಕಾರಜೋಳ, ವಿನುತಾ ಗೆಜ್ಜಿ, ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯವನ್ನೊದಗಿಸಿಕೊಟ್ಟರು. ಡಾ. ಅರವಿಂದ ಕುಲಕರ್ಣಿಯವರ ನಿರ್ದೇಶನವಿತ್ತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 