ದ್ವಿತೀಯ ಕನ್ನಡ ಜಾನಪದ ಸಮ್ಮೇಳನಕ್ಕೆ ಅದ್ದೂರಿ ಚಾಲನೆ

ದ್ವಿತೀಯ ಕನ್ನಡ ಜಾನಪದ ಸಮ್ಮೇಳನಕ್ಕೆ ಅದ್ದೂರಿ ಚಾಲನೆ  The second Kannada Folk Conference was launched in a grand manner

ಲೋಕದರ್ಶನ ವರದಿ   

ಇಂಡಿ 18: ತಾಲೂಕಿನ ಸುಕ್ಷೇತ್ರ ಬಂಥನಾಳದ ವೃಷಭಲಿಂಗೇಶ್ವರ ಮಠದಲ್ಲಿ ದ್ವೀತಿಯ ಕನ್ನಡ ಜಾನಪದ ಸಮ್ಮೇಳನ ಅದ್ದೂರಿಯಾಗಿ ಜರುಗಿತು.  ರಾಜ್ಯ ಜನಪದ ಕಾರ್ಯದರ್ಶಿ ಪ್ರೋ ಕೆ.ಎಸ್ ಕೌಜಲಗಿ ಸಮ್ಮೇಳನದ ಮೆರವಣಿಗೆ ಉದ್ಘಾಟಿಸಿದರು. ಸರ್ವಾಧ್ಯಕ್ಷ ಚಿದಾನಂದ ಗೌಡಗಾವಿ ಹಾಗೂ ರಾಜ್ಯಾಧ್ಯಕ್ಷ ಡಾ. ಎಸ್ ಬಾಲಾಜಿ ಅವರ ಎತ್ತುಗಳ ಬಂಡಿಯ ಮೇಲೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಠದವರೆಗೆ ಅದ್ದೂರಿ ಮೆರವಣಿಗೆ ನಡೆಯಿತು. ಅರ್ಜುಣಗಿ ಆಲಮೇಲ ಹಾಗೂ ಮಾಶ್ಯಾಳ ಕೌಂಸಾಳೆ ಮತ್ತು ತಮಟೆ ವಾದ್ಯ ಸಂಗೋಗಿ ಡೊಳ್ಳು ವಾದ್ಯ ಸಾಗರ ಮಾನೆ ಸಂಗಮೇಶ ಹೂಗಾರ ಅವರ ಕರಡಿ ಮಜಲು ಭಜನಾ ಮಂಡಳಿ, ಸಿದ್ದಮ್ಮ ಗೌಡತಿ ಮನಗೂಳಿ ಅವರ ಜೋಗತಿ ನೃತ್ಯ ಮಹಾಲಕ್ಷ್ಮೀ ವಾಲಗ ಮೇಳ ಹೀಗೆ ಅನೇಕ ಕಲಾ ತಂಡಗಳು ಮೆರವಣಿಗೆಗೆ ಆಕರ್ಷಕ ಮೆರಗು ತಂದವು.ಬೆಳಿಗ್ಗೆ 9ಗಂಟೆಗೆ ರಾಷ್ಟ್ರಧ್ವಜ ಅಶೋಕ ಮನಗೂಳಿ ನೆರವೇರಿಸಿದರು. ಚಾನಕೊಟಗಿ ಗೌಡರು ನಾಡಧ್ವಜ ಮತ್ತು ಪರಿಷತ್ ಧ್ವಜವನ್ನು ರಾಜ್ಯಾಧ್ಯಕ್ಷ ಎಸ್ ಬಾಲಾಜಿ ನೆರವೇರಿಸಿದರು. ನಂತರ ಸಮ್ಮೇಳನದ ಉದ್ಘಾಟನೆಯನ್ನು ಡಾ. ಎಸ್ ಬಾಲಾಜಿ ನಡೆಸಿದರು. ಸಾನಿಧ್ಯವನ್ನು  ವೃಷಭಲಿಂಗ ಶಿವಾಚಾರ್ಯರು ಮತ್ತು ಅಭಿನವ ಮುರುಗೇಂದ್ರ ಶಿವಾಚಾರ್ಯರು ಶಿರಶ್ಯಾಡ  ವಹಿಸಿದ್ದರು. ಅಧ್ಯಕ್ಷತೆಯನ್ನು ಪ್ರೊ ಕೆ. ಎಸ್ ಕೌಜಲಗಿ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಶೈಲಜಾ ತಲ್ಲೂರ, ಬಿ  ಸಿ ಗೌಡರ,  ಜೆ. ಎಸ್ ಬೆಣ್ಣಿ,  ದಾನಮ್ಮ ಹಿರೇಪಟ್ಟ ಜ್ಯೋತಿ ಬೆಳಗಿಸಿದರು. ಜಾನಪದ ಅರಳಿದರೆ ಮಾನವ ಜನಾಂಗ ಉಳಿಯುವುದು. ಆದ್ದರಿಂದ ಪಠ್ಯ ಪುಸ್ತಕ ರಚನಾ ಸಭೆಯಲ್ಲಿ ಜನಪದ ಹಾಡು ಕಥೆಗಳು ಅಳವಡಿಸಿಕೊಳ್ಳಬೇಕು ಎಂದು ರಾಜ್ಯಾದ್ಯಕ್ಷರಾದ ಎಸ್ ಬಾಲಾಜಿ ಮಾತನಾಡಿದರು. ಪ್ರೊ ಕೆ. ಎಸ್ ಕೌಜಲಗಿ ಅವರು ಜನಪದ ಸಾಹಿತ್ಯ ಹುಟ್ಟಿನಿಂದ ಸಾಯುವವರೆಗೂ ಹಾಸು ಹೊಕ್ಕಾಗಿದೆ ಜನಪದ ಸೌಂದರ್ಯ ಜನಪದರ ಜೀವನ ಕೃಷಿ ಮದುವೆ ಶೋಭಾನೆ ಜನನ ತೊಟ್ಟಿಲು ತೂಗುವ ಕೈ ಜಗತ್ತನ್ನೇ ಗೆಲ್ಲಬಹುದು ಎಂದು ಹೇಳಿದರು. ಸಾನಿಧ್ಯ ವಹಿಸಿದ ಅಭಿನವ ಮರುಘೇಂದ್ರ ಶಿವಾಚಾರ್ಯರು ಜನಪದರ ಜೀವನ ಸುಖ ದುಃಖಗಳ ಮಿಶ್ರಣ ಜಾನಪದ ಉಳಿಸುವ ನಿಟ್ಟಿನಲ್ಲಿ ಪರಿಷತ್ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.  

ಜಾನಪದ ಗೋಷ್ಠಿಯಲ್ಲಿ ಅಧ್ಯಕ್ಷತೆ ಡಾ. ರಮೇಶ ಕತ್ತಿ ವಹಿಸಿದ್ದರು. ಪ್ರೊ ಎಸ್ ಎಮ್‌.ಉಪ್ಪಾರ ಜಾನಪದ ಮಹಿಳೆಯ ಜೀವನ ಕುರಿತು ಮಾತನಾಡಿದರು. ಎರಡನೆ ಮಹಿಳಾ ಗೋಷ್ಠಿ ಅಧ್ಯಕ್ಷತೆ ಶೈಲಜಾ ತೆಲ್ಲೂರ ವಹಿಸಿದ್ದರು. ಹೇಮಾ ಹಿರೇವರು ಜಾನಪದದಲ್ಲಿ ಮದುವೆ ಸಮಾರಂಭಗಳ ಕುರಿತು ಮಾತನಾಡಿದರು. ಬಹಿರಂಗ ಅಧಿವೇಶನದಲ್ಲಿ ತಾಲೂಕು ಅಧ್ಯಕ್ಷ ಪಂಡಿತ ಅವಜಿ ಅವರ ಅಧ್ಯಕ್ಷತೆಯಲ್ಲಿ ಪ್ರಧಾನ ಕಾರ್ಯದರ್ಶಿ ಜಟ್ಟೆಪ್ಪಾ ಮಾದರ 10 ನಿರ್ಣಯ ಕೈಗೊಂಡರು. ಸರ್ದಾರ್ ಮುಲ್ಲಾ  ಸಿದ್ಧಾರೂಢ ಕೊಳ್ಳರ ಸುಭಾಶ್ಚಂದ್ರ ನಾವಿ, ಸಾಗರ ಮಾನೆ ಇದ್ದರು. ಸುಮಾರು 54 ಕಲಾ ತಂಡಗಳು ತಮ್ಮ ಕಲಾ ಪ್ರದರ್ಶನ ಮಾಡಿದರು. ಸರಸಂಬಿ ಶಿಕ್ಷಕರೂ ನಿರೂಪಿಸಿದರು. ಪಂಡಿತ ಅವಜಿ ಸ್ವಾಗತಿಸಿದರು. ಜಟ್ಟೆಪ್ಪಾ ಮಾದರ ವಂದಿಸಿದರು.