ಶಿಕ್ಷಣದ ಕ್ಷೇತ್ರದಲ್ಲಿ ಮಾಡಿದ ಸೇವೆಗೆ ಸಿಕ್ಕ ತೃಪ್ತಿ ಬೇರೆ ಎಲ್ಲಿ ಸಿಗಲಾರದು - ಎ. ಬಿ. ರತ್ನಮ್ಮ

ಶಿಕ್ಷಣದ ಕ್ಷೇತ್ರದಲ್ಲಿ ಮಾಡಿದ ಸೇವೆಗೆ ಸಿಕ್ಕ ತೃಪ್ತಿ ಬೇರೆ ಎಲ್ಲಿ ಸಿಗಲಾರದು - ಎ. ಬಿ. ರತ್ನಮ್ಮ  The satisfaction I get from my service in the field of education cannot be found anywhere else - A.

ರಾಣೆಬೆನ್ನೂರು 5: ಸಮಾಜದಲ್ಲಿ ಗುರುವಿಗೆ ಇರುವಷ್ಟು ಗೌರವ ಬೇರೆ ಯಾರಿಗೂ ಇಲ್ಲ. ಗುರುವಾಗುವುದೇ ಪೂರ್ವಜನ್ಮದ ಪುಣ್ಯದ ಫಲ. ವೃತ್ತಿಯಿಂದ ನಿವೃತ್ತಿಯಾದರೂ ತಮ್ಮ ಕೈಯಲ್ಲಿ ಕಲಿತ ಮಕ್ಕಳು ಸದಾಕಾಲ ಸ್ಮರಿಸುವಂತಹ ಏಕೈಕ ಕ್ಷೇತ್ರ ಶಿಕ್ಷಣ ಕ್ಷೇತ್ರವಾಗಿದೆ ಎಂದು. ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ಎ. ಬಿ. ರತ್ನಮ್ಮ ಹೇಳಿದರು. ಅವರು, ಇತ್ತೀಚೆಗೆ   ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜಿಲ್ಲಾ ಕ.ಸಾ. ಪ. ಮತ್ತು ಹಳೆ ವಿದ್ಯಾರ್ಥಿಗಳು, ಅಭಿಮಾನಿ ಬಳಗ ಆಯೋಜಿಸಿದ್ದ ನಿವೃತ್ತರ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಲಯನ್ಸ್‌,12, ಸರ್ಕಾರಿ ಶಾಲೆ  -ಕೆಜಿಎಸ್ 14, ಆರೆಮಲ್ಲಾಪುರಹುಣಸಿಕಟ್ಟಿ 10, ಹೀಗೆ ಒಟ್ಟು 40 ವರ್ಷಗಳ ಸೇವೆಯಲ್ಲಿ ತಮಗೆ ಗಟ್ಟಿತನ, ಮಾನಸಿಕ ಸಂತೃಪ್ತಿ ಮತ್ತು ಕ್ಷೇತ್ರದ ಬಗ್ಗೆ ಅಭಿಮಾನ ಮೂಡಿದೆಎಂದು ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾದರೆ,

ತಮ್ಮ ವೃತ್ತಿ ಬದುಕಿನದ್ದಕ್ಕೂ ಕಾಯಾ, ವಾಚಾ,ಮನಸಾ ಮಾಡಿದ ಸೇವೆಯೇ ತಮಗೆ  ಸಿಕ್ಕ ಅಭೂತಪೂರ್ವ  ಗೌರವ ಇದಾಗಿದೆ ಎಂದು ಭಾವಿಸಿದ್ದೇನೆ. ಇಂತಹ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಹಕಾರ ನೀಡಿದ  ಎಲ್ಲರಿಗೂ ತಮ್ಮ ವಿನಮ್ರ  ಕೃತಜ್ಞತೆ ಸಲ್ಲಿಸಿದರು. ಅಭಿನಂದನಾ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರು, ರತ್ನಮ್ಮ ತಾವು ಕಂಡಂತೆ ಶಿಕ್ಷಕಿಯಾಗಿ ಸಾಹಿತಿಯಾಗಿ, ಸಂಘ, ಸಂಸ್ಥೆಗಳ- ಪ್ರತಿನಿಧಿಯಾಗಿ ವಿವಿಧ ಕ್ಷೇತ್ರದ ಮೂಲಕ ಜನನರಾಗಿದ್ದಾರೆ. ಅವರ ಸೇವೆ ಶಿಕ್ಷಣ ಕ್ಷೇತ್ರದ ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಿದೆ ಎಂದು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ  ಕ.ಸಾ ಪ. ಜಿಲ್ಲಾಧ್ಯಕ್ಷ ಲಿಂಗಯ್ಯ ನಗರ ಯೋಜನಾ  ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಕ. ಸಾ.ಪ. ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಏಕೇಶ್ವರ​‍್ಪ, ಮಾಜಿ ಅಧ್ಯಕ್ಷ ವಾಸಣ್ಣ ಕುಸುಗೂರು, ವರ್ತಕರಾದ ಮಲ್ಲೇಶಪ್ಪ ಅರಿಕೇರಿ, ಜಿ.ಜಿ. ಹೊಟ್ಟಿಗೌಡ್ರ, ಏಕನಾಥ ಭಾನುವಳ್ಳಿ , ಎಚ್‌. ಎಲ್‌. ದೊಡ್ಡಗೌಡ್ರ, ವೈ. ಬಿ. ಆಲದಕಟ್ಟಿ, ಬಸವರಾಜ ದೊರೆಹೊಳೆ, ಬಿ.ಪಿ.  ಶಿಡೆನೂರು ಕೊಟ್ರೇಶಪ್ಪ ಎಮ್ಮೆ, ಹೆಚ್‌. ಶಾಂತರಾಜ್, ಗಾಯಿತ್ರಮ್ಮ ಕುರುವತ್ತಿ, ನಿರ್ಮಲಾ ಲಮಾಣಿ, ವಿದ್ಯಾವತಿ ಜಂಗಿನ್  ಸೇರಿದಂತೆ ಮತ್ತಿತರ ಗಣ್ಯರು, ಕ. ಸಾ. ಪ ಪದಾಧಿಕಾರಿಗಳು, ವರ್ತಕರು ಜಂಬಗಿ ಕುಟುಂಬದ ಪರಿವಾರದವರು ಅಭಿಮಾನಿಗಳು ಪಾಲ್ಗೊಂಡಿದ್ದರು. ಕಲಾವಿದೆ ಅನಸೂಯಾ ರಾಠೋಡ ಪ್ರಾರ್ಥಿಸಿದರು. ಪ್ರಭಾಕರ್ ಶಿಗ್ಲಿ ಸ್ವಾಗತಿಸಿ, ವಿದ್ಯಾ ಗುರು ಚಂದ್ರ​‍್ಪ ಹೊಸಳ್ಳಿ ಆಸಯ ನುಡಿಯಾಡಿರು.  ಜಗದೀಶ್ ಮಳಿಮಠ ನಿರೂಪಿಸಿ, ಇಂದಿರಾ ಬಾರಂಗಿ ವಂದಿಸಿದರು.