ಅಕ್ಕ ತಂಗಿ ಅಣ್ಣ ತಮ್ಮಂದಿರ ಪವಿತ್ರ ಪ್ರೀತಿಯೇ ರಕ್ಷಾ ಬಂಧನದ ಸಂಕೇತ- ಬಿಎಸ್ ಹಡಪದ

ಅಕ್ಕ ತಂಗಿ ಅಣ್ಣ ತಮ್ಮಂದಿರ ಪವಿತ್ರ ಪ್ರೀತಿಯೇ ರಕ್ಷಾ ಬಂಧನದ ಸಂಕೇತ- ಬಿಎಸ್ ಹಡಪದ  The sacred bond of love between siblings is the symbol of Raksha Bandhan – B.S. Hadapad


ಲಕ್ಷ್ಮೇಶ್ವರ  29: ರಕ್ಷಾಬಂಧನ ಹಬ್ಬದ ಮುಖ್ಯ ಉದ್ದೇಶ ಅಣ್ಣ-ತಂಗಿಯರ (ಅಕ್ಕ-ತಮ್ಮಂದಿರ) ನಡುವಿನ ಪವಿತ್ರ ಪ್ರೀತಿ, ಸ್ನೇಹ ಮತ್ತು ರಕ್ಷಣೆಯ ಬಾಂಧವ್ಯವನ್ನು ಬೆಸೆಯುವದೆ ಪವಿತ್ರ ರಕ್ಷಣಾ ಬಂಧನದ ಉದ್ದೇಶ ವಾಗಿದೆ ಎಂದು ಪಟ್ಟಣದ ಶಿಕ್ಷಕ ಬಿ ಎಸ್ ಹಡಪದ ಹೇಳಿದರು ಅವರು ಶುಕ್ರವಾರ ತಮ್ಮ ನಿವಾಸದಲ್ಲಿ ತಮ್ಮ ಸೋದರಿಯಿಂದ ರಕ್ಷಾಬಂಧನವನ್ನು ಕಟ್ಟಿಸಿಕೊಂಡು ಮಾತನಾಡಿದ ಅವರು ರಕ್ಷಾ ಬಂಧನ ಹಬ್ಬವು ರಕ್ಷಣೆಯ ಭರವಸೆ ಸಹೋದರಿ ತನ್ನ ಸಹೋದರನ ಮುಂಗೈಗೆ ರಕ್ಷಾಸೂತ್ರವನ್ನು (ರಾಖಿ) ಕಟ್ಟಿ, ಆತನ ಶ್ರೇಯಸ್ಸು ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ. ಪ್ರತಿಯಾಗಿ ಸಹೋದರನು ಆಕೆಯನ್ನು ಜೀವನಪೂರ್ತಿ ರಕ್ಷಿಸುವ ಮತ್ತು ಬೆಂಬಲಿಸುವ ಭರವಸೆ ನೀಡುತ್ತಾನೆ.

ಪರಸ್ಪರ ಪ್ರೀತಿಯ ಸಂಕೇತ ಇದು ಕುಟುಂಬದಲ್ಲಿ ಒಡಹುಟ್ಟಿದವರ ನಡುವಿನ ಪ್ರೀತಿ, ಗೌರವ ಮತ್ತು ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಸಾಮಾಜಿಕ ಸಾಮರಸ್ಯ: ಕೇವಲ ರಕ್ತಸಂಬಂಧಿಗಳಿಗೆ ಮಾತ್ರವಲ್ಲದೆ, ಸಮಾಜದಲ್ಲಿ ಯಾವುದೇ ವ್ಯಕ್ತಿಯನ್ನು ಸಹೋದರನಾಗಿ ಸ್ವೀಕರಿಸಿ ರಾಖಿ ಕಟ್ಟುವ ಮೂಲಕ ಸೋದರತ್ವ ಮತ್ತು ಶಾಂತಿಯನ್ನು ಬೆಳೆಸಬಹುದು.ಸಾಂಸ್ಕೃತಿಕ ಮೌಲ್ಯ: ಈ ಹಬ್ಬವು ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬ ಮತ್ತು ಬಾಂಧವ್ಯಗಳಿಗೆ ನೀಡುವ ಉನ್ನತ ಗೌರವವನ್ನು ಹಿಡಿಯುವ ಹಬ್ಬವೇ ರಕ್ಷಾಬಂಧನ ಹಬ್ಬ ಎಂದು ತಿಳಿಸಿದರು ಈ ಸಮಯದಲ್ಲಿ ಕುಟುಂಬಸ್ಥರು ಬಾಂಧವರು ಇದ್ದರು