ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ರೂಪಗೊಳ್ಳುವಲ್ಲಿ ಸಮಾಜದ ಪಾತ್ರವೂ ಬಹಳ ಮುಖ್ಯ: ಹನುಮಂತಗೌಡ

ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ರೂಪಗೊಳ್ಳುವಲ್ಲಿ ಸಮಾಜದ ಪಾತ್ರವೂ ಬಹಳ ಮುಖ್ಯ: ಹನುಮಂತಗೌಡ  The role of society is also very important in shaping the personality of each individual: Hanumantha

ಹಾವೇರಿ 22: ಸಮಾಜದ ಸರ್ವತೋಮುಖ ಬೆಳವಣಿಗೆಯಲ್ಲಿ ಸಕ್ರಿಯವಾಗಿ, ಕ್ರಿಯಾತ್ಮಕವಾಗಿ ಪಾಲ್ಗೊಳ್ಳುವುದು ಉತ್ತಮ ವ್ಯಕ್ತಿತ್ವದ ಲಕ್ಷಣಗಳೆಲ್ಲೊಂದು, ಸಮಾಜದಲ್ಲಿ ಹುಟ್ಟಿ ಬೆಳೆಯುವ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ರೂಪಗೊಳ್ಳುವಲ್ಲಿ ಸಮಾಜದ ಪಾತ್ರವೂ ಬಹಳ ಮುಖ್ಯ ಎಂದು ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.      

ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಿರಸಿಯ ಸ್ಕೋಡಾವೇಸ್ ಸಂಸ್ಥೆ ಹಾಗೂ ಗುಜರಾತ್ ದೇಸಾಯಿ ಪೌಂಡೇಶನ್ ಶನಿವಾರ ಏರಿ​‍್ಡಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.   ಚಿಪ್ಪಿನಂತಿದ್ದರು ಪರವಾಗಿಲ್ಲ, ವ್ಯಕ್ತಿತ್ವ ಚಿಪ್ಪ ಒಳಗಿನ ಮುತ್ತಂತೆ ಇರಬೇಕು. ಒಂದು ಸಣ್ಣ ನಗು  

 ಸ್ನೇಹವನ್ನು ಪ್ರಾರಂಭಿಸುತ್ತದೆ, ಒಂದು ಒಳ್ಳೆಯ ಮಾತು ದ್ವೇಷವನ್ನು ಕೊನೆಗೊಳಿಸುತ್ತದೆ. ಒಳ್ಳೆಯ ಮನಸ್ಸು ಸಂಬಂಧಗಳನ್ನು ಕಾಪಾಡುತ್ತದೆ, ಒಳ್ಳೆಯ ವ್ಯಕ್ತಿತ್ವ ಜೀವನವನ್ನೇ ಬದಲಾಯಿಸುತ್ತದೆ. ಆಕರ್ಷಕ ನಿಲುವು, ನಗುಮುಖ, ಕಷ್ಟ ಸಹಿಷ್ಣತೆ, ಗಾಂಭೀರ್ಯ, ಅಚಲ ನಿರ್ಧಾರ, ನಿಸ್ವಾರ್ಥತೆ, ದೇಶ ಪ್ರೇಮ, ಬುದ್ಧಿವಂತಿಕೆ, ಸಂವಹನ, ತಾಳ್ಮೆ, ಜಾಣ್ಮೆ ಇವೆಲ್ಲ ಉತ್ತಮ ವ್ಯಕ್ತಿತ್ವದ ಲಕ್ಷಣಗಳು ಎಂದು  ವಿದ್ಯಾರ್ಥಿನಿಯರಿಗೆ ಸಂವಾದದ ಮೂಲಕ ಸಂಪನ್ಮೂಲ ವ್ಯಕ್ತಿಯಾಗಿ ಅವರು ತಿಳಿಸಿದರು. 

ಒಂದು ದೇಶದ ಶಕ್ತಿಯನ್ನು ಪರಿಗಣಿಸಬೇಕಾದರೆ ನಾವು ಗಮನಿಸಬೇಕಾದದ್ದು ಆ ದೇಶದ ಸೈನ್ಯ ಬಲವನ್ನಲ್ಲ, ಅದಕ್ಕೆ ಬದಲಾಗಿ ಆ ದೇಶದಲ್ಲಿರುವ ಉತ್ತಮ ವ್ಯಕ್ತಿತ್ವವುಳ್ಳ ಜನರ ನಾಗರೀಕರ ಸಂಖ್ಯೆಯನ್ನು, ಸೈನ್ಯ ಬಲವನ್ನು ಹೇಗಾದರೂ ಕುಂಠಿತಗೊಳಿಸಬಹುದು,ಆದರೆ ಉತ್ತಮ ನಾಗರಿಕರುಳ್ಳ ದೇಶದ ಪ್ರಗತಿಯನ್ನು ತಡೆಯಲಾಗುವುದಿಲ್ಲ. ಒಬ್ಬ ವ್ಯಕ್ತಿ ಸರ್ವಾಂಗ ಸುಂದರ ವ್ಯಕ್ತಿಯಾಗಿ ಬೆಳೆಯಬೇಕಾದರೆ, ಅವನ ಸರ್ವಾಂಗೀಣ ಬೆಳವಣಿಗೆ ಅತ್ಯವಶ್ಯ ಎಂದು ಹನುಮಂತಗೌಡ ತಿಳಿಸಿದರು. 

ಸಂಸ್ಥೆಯ ಸಮುದಾಯ ಸಂಘಟನೆ ಶಿವದೇವಿ ಕುಂಬಾರ ಮಾತನಾಡಿ ವಿದ್ಯಾರ್ಥಿನಿಯರು ಉತ್ತಮ ಹವ್ಯಾಸಗಳನ್ನು ರೂಡಿಸಿಕೊಂಡು ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳಬೇಕು ಎಂದರು. ವಿದ್ಯಾರ್ಥಿನಿ ಅನಿತಾ ಕೋಣೆಯವರ ಇದೊಂದು ಅಪರೂಪದ ಕಾರ್ಯಕ್ರಮ, ನಮಗೆಲ್ಲ ಪ್ರೇರಣೆ ನೀಡಿತು ಎಂದು ಅನಿಸಿಕೆ ವ್ಯಕ್ತಪಡಿಸಿದರು.ವೇದಿಕೆಯಲ್ಲಿ ಯೋಜನಾ ಸಂಯೋಜಕ ಶಂಭುಲಿಂಗ ಹಿರೇಮಠ, ರಾಜೇಶ್ವರಿ, ಉಪನ್ಯಾಸಕರಾದ ಪರಮೇಶಪ್ಪ ಬಾರಂಗಿ, ವಿಶ್ವನಾಥ್ ಪಾಟೀಲ್,ಲಕ್ಷ್ಮೀ ಇಟಗಿ ಹಾಗೂ ತಾಸಿನ್ ಡಂಬಳ ಇದ್ದರು.