ವಿದ್ಯಾಥರ್ಿಗಳ ಶೈಕ್ಷಣಿಕ ಬೆಳವಣಿಗೆಗೆ ಅಡುಗೆಯವರ ಪಾತ್ರವೂ ಪ್ರಮುಖ

ಹಾವೇರಿ 22: ವಿದ್ಯಾಥರ್ಿಗಳ ಶೈಕ್ಷಣಿಕ ಬೆಳವಣಿಗೆಗೆ ಶಿಕ್ಷಕರಂತೆ ವಿದ್ಯಾಥರ್ಿ ನಿಲಯಗಳ ಅಡುಗೆ ತಯಾಕರು ಹಾಗೂ ಅಡುಗೆ ಸಹಾಯಕರ ಪಾತ್ರವು ಮಹತ್ವದ್ದಾಗಿದೆ ಎಂದು ವಾತರ್ಾಧಿಕಾರಿ ಡಾ.ಬಿ.ಆರ್.ರಂಗನಾಥ್ ಅವರು ಹೇಳಿದರು.

                ನಗರದ ಡಿ.ದೇವರಾಜ ಅರಸು ಭವನದಲ್ಲಿ ಸೋಮವಾರ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾಥರ್ಿ ನಿಲಯಗಳಿಗೆ ನೂತನವಾಗಿ ನೇಮಕಗೊಂಡಿರುವ ಅಡುಗೆಯವರು ಹಾಗೂ ಅಡುಗೆ ಸಹಾಯಕರಿಗೆ ಆಯೋಜಿಸಲಾದ ಎರಡು ದಿನಗಳ ತರಬೇತಿ ಕಾಯರ್ಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

                ವಿದ್ಯಾಭ್ಯಾಸಕ್ಕಾಗಿ ದೂರದ ಊರಿನಿಂದ ಮನೆಯ ವಾತಾವರಣ ಬಿಟ್ಟು ವಿದ್ಯಾಥರ್ಿ ನಿಲಯಗಳಿಗೆ ಬರುವ ವಿದ್ಯಾಥರ್ಿಗಳನ್ನು ಅಕ್ಕರೆಯಿಂದ ಕಾಣುವ ಮನೋಭಾವವನ್ನು ರೂಢಿಸಿಕೊಳ್ಳಿ. ಕೆಲಸದಲ್ಲಿ ತಾಳ್ಮೆ, ಶ್ರದ್ಧೆ, ಬದ್ಧತೆ, ಪ್ರಮಾಣಿಕತೆ ಜೊತೆಗೆ ನಿಮಗೆ ಮಾತೃಹೃದಯದಿಂದ ನಡೆದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ ಎಂದು ಹೇಳಿದರು.

                ಅಡುಗೆ ತಯಾರಿಕೆ ಹುದ್ದೆಗೆ ಬಹಳಷ್ಟು ಜನ ಪದವೀಧರರು, ಸ್ನಾತಕೋತ್ತರ ಪದವೀಧರರು ನೇಮಕವಾಗಿದ್ದೀರಿ. ಹುದ್ದೆಯ ಬಗ್ಗೆ ಯಾವುದೇ ಕೀಳರಿಮೆ ಬೇಡ. ಯಾವುದೇ  ಹುದ್ದೆಗೆ ಘನತೆಬರುವುದು ಹುದ್ದೆ ಅಲಂಕರಿಸಿದ ವ್ಯಕ್ತಿಗಳು ಮಾಡುವ ಕ್ರಿಯಾತ್ಮಕವಾದ ಕೆಲಸದಿಂದ ಮಾತ್ರ. ಕೆಲಸದಲ್ಲಿ  ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಹೊಂದಿದರೆ ಯಾವುದೇ ಹುದ್ದೆಯಲ್ಲಿದ್ದರೂ ನಿಮ್ಮ ವ್ಯಕ್ತಿತ್ವಕ್ಕೆ ಘನತೆ ಬರುತ್ತದೆ. ವಿದ್ಯಾಥರ್ಿಗಳ ಭವಿಷ್ಯ ರೂಪಿಸುವಲ್ಲಿ ಅಡುಗೆಯವರ ಪಾತ್ರ ಎಲ್ಲರಿಗಿಂತ ಮಹತ್ವದ್ದಾಗಿದೆ. ತಾಯಿ ಸ್ಥಾನದ ಗೌರವವಿದೆ. ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದಗೇರಿದರು ನಿಮ್ಮನ್ನು ವಿದ್ಯಾಥರ್ಿಗಳು ನೆನಪಿನಲ್ಲಿಟ್ಟುಕೊಳ್ಳುತ್ತಾರೆಂದು ಹೇಳಿದರು

                ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸುರೇಶ ರೆಡ್ಡಿ ಅವರು ಮಾತನಾಡಿ, ಅಡುಗೆ ತಯಾರಿಕರ ಹುದ್ದೆಗಳು ಮೊದಲಬಾರಿಗೆ ಖಾಯಂ ನೇಮಕಾತಿಗಳಿವೆ.

 ವಿದ್ಯಾಥರ್ಿ ನಿಲಯಗಳಲ್ಲಿ ಬರುವ ಒತ್ತಡಗಳನ್ನು ನಿಭಾಯಿಸಿಕೊಂಡು ವಿದ್ಯಾಥರ್ಿಗಳ ಮನಸ್ಸನ್ನು ಗೆಲ್ಲುವ ಮೂಲಕ ವೃತ್ತಿಯಲ್ಲಿ ಯಶಸ್ಸು ಕಾಣುವಂತೆ ಹಾರೈಸಿದರು.

                ಅಲ್ಪ ಸಂಖ್ಯಾತರ ಕಲ್ಯಾಣಾಧಿಕಾರಿ ಗೋಪಾಲ ಲಮಾಣಿ ಅವರು ಮಾತನಾಡಿ, ಉನ್ನತ ವ್ಯಾಸಂಗ ಮಾಡಿದವರು ಬಹಳಜನ ಅಡುಗೆ ತಯಾರಕರು ಹಾಗೂ ಸಹಾಯಕರಾಗಿ ನೇಮಕಗೊಂಡಿದ್ದೀರಿ.

 ಯಾವುದೇ ಕೀಳರಿಮೆ ಇಲ್ಲದೆ ಕಾರ್ಯನಿರ್ವಹಿಸಿ. ಸಮನ್ವಯತೆಯಿಂದ ವಿದ್ಯಾಥರ್ಿಗಳ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಿ ಎಂದು ಹಾರೈಸಿದರು.

                ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ ಅವರು ಮಾತನಾಡಿ, ಇಲಾಖೆಯಲ್ಲಿ ಅಡುಗೆ ತಯಾರಕರು ಹಾಗೂ ಸಹಾಯಕರಾಗಿ ನೇಮಕಗೊಂಡವರಿಗೆ ಎರಡು ದಿನಗಳ ವೃತ್ತಿಪರ ಕಾಯರ್ಾಗಾರಗಳನ್ನು ಆಯೋಜಿಸಲಾಗಿದೆ. 141 ಜನ ನೇಮಕಗೊಂಡಿದ್ದಾರೆ.

    ಬಹುಪಾಲು ಉನ್ನತವ್ಯಾಸಂಗ ಮಾಡಿದವರಾಗಿದ್ದಾರೆ. ತಾವು ಕೇವಲ ಅಡುಗೆ ತಯಾರಕರು ಹಾಗೂ ಸಹಾಯಕರು ಎಂದು ಭಾವಿಸದೇ ಮಕ್ಕಳ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿ ಎಂದು ಹಾರೈಸಿದರು.

                ಕಾಯರ್ಾಗಾರದಲ್ಲಿ ಜಿಲ್ಲಾ ತರಬೇತಿ ಕೇಂದ್ರ ಪ್ರಾಚಾರ್ಯ ಬಸವರಾಜ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.