ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಹಾಗೂ ದಲಿತರನ್ನು ಕಡೆಗಣಿಸಿದ್ದು ಕುರುಬ ಮತ್ತು ದಲಿತ ಸಮಾಜಕ್ಕೆ ಮಾಡಿದ ಘೋರ ಅನ್ಯಾಯ: ಕೇಂದ್ರ ಕಾಂಗ್ರೆಸ್ ವಿರುದ್ಧ ಕುರುಬ ಸಮಾಜದವರಿಂದ ತೀವ್ರ ವಾಗ್ದಾಳಿ
The removal of Siddaramaiah from the CM post and the neglect of Dalits is a grave injustice to the K
ಲೋಕದರ್ಶನ ವರದಿ
ವಿಜಯಪುರ 29: ರಾಜ್ಯದ ಜನಪ್ರಿಯ ನಾಯಕ ಹಾಗೂ ಹಿಂದುಳಿದ ವರ್ಗದ ಕಣ್ಮಣಿ ಶ್ರೀ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಕುರುಬ ಸಮಾಜ ಹಾಗೂ ಹಿಂದುಳಿದ ವರ್ಗಗಳಿಗೆ ಘೋರ ಅನ್ಯಾಯ ಮಾಡಿದೆ. ಇದಲ್ಲದೆ, ಕನಿಷ್ಠ ಪಕ್ಷ ದಲಿತ ನಾಯಕರನ್ನಾದರೂ ಮುಖ್ಯಮಂತ್ರಿ ಮಾಡದೆ ಆ ಸಮುದಾಯಕ್ಕೂ ವಂಚನೆ ಮಾಡಿದೆ ಎಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕುರುಬ ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಸಂತೋಷ ಕುರದಡ್ಡಿ ್ಘ ಭೀಮನಗೌಡ ಬಿರಾದಾರ ಅವರು ಕೇಂದ್ರ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರವಾಗಿ ಹರಿಹಾಯ್ದಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾಂಗ್ರೆಸ್ ಪಕ್ಷದ ದ್ವಂದ್ವ ನೀತಿ, ದಲಿತ ಹಾಗೂ ಹಿಂದುಳಿದ ವರ್ಗಗಳ ವಿರೋಧಿ ಮನಸ್ಥಿತಿಯನ್ನು ತೀವ್ರ ಶಬ್ದಗಳಲ್ಲಿ ಖಂಡಿಸಿದ್ದಾರೆ.
ಪತ್ರಿಕಾ ಪ್ರಕಟಣೆಯ 5 ಪ್ರಮುಖ ಅಂಶಗಳು: ಕಾಂಗ್ರೆಸ್‌ನ ದ್ರೋಹದ ಮನಸ್ಥಿತಿ: ಸಿದ್ದರಾಮಯ್ಯನವರಂತಹ ಪ್ರಶ್ನಾತೀತ ಹಾಗೂ ಸಮರ್ಥ ನಾಯಕರನ್ನು ಕೆಳಗಿಳಿಸಿರುವುದು ಇಡೀ ಕುರುಬ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ. ನಮ್ಮ ಸಮಾಜವನ್ನು ಕೇವಲ ಓಟ್ ಬ್ಯಾಂಕ್ ಆಗಿ ಮಾತ್ರ ಬಳಸಿಕೊಳ್ಳುವ ಕಾಂಗ್ರೆಸ್‌ನ ಈ ಕೀಳು ಮಟ್ಟದ ಮನಸ್ಥಿತಿಯನ್ನು ಇಡೀ ಕುರುಬ ಸಮಾಜ ಒಕ್ಕೊರಲಿನಿಂದ ಖಂಡಿಸುತ್ತದೆ." ದಲಿತರಿಗೂ ಅವಕಾಶ ನೀಡದ ವಂಚನೆ: "ಸಿದ್ದರಾಮಯ್ಯನವರನ್ನು ಕೆಳಗಿಳಿಸಿದ ಹೈಕಮಾಂಡ್, ಕನಿಷ್ಠಪಕ್ಷ ದಲಿತ ಸಮುದಾಯದ ನಾಯಕರನ್ನಾದರೂ ಮುಖ್ಯಮಂತ್ರಿ ಮಾಡಬಹುದಿತ್ತು. ಆದರೆ ಅದನ್ನೂ ಮಾಡದೆ, ದಲಿತ ಹಾಗೂ ಹಿಂದುಳಿದ ವರ್ಗಗಳನ್ನು ಕೇವಲ ಅಧಿಕಾರದ ಮೆಟ್ಟಿಲಾಗಿ ಬಳಸಿಕೊಂಡಿರುವುದು ಜಗಜ್ಜಾಹೀರಾಗಿದೆ. ಕಾಂಗ್ರೆಸ್‌ನ 'ಸಾಮಾಜಿಕ ನ್ಯಾಯ'ದ ಭಾಷಣ ಕೇವಲ ಬೂಟಾಟಿಕೆ ಎಂಬುದು ಸಾಬೀತಾಗಿದೆ."
ಹಿಂದುಳಿದ ವರ್ಗಕ್ಕೆ ಆಘಾತ: "ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರುವಲ್ಲಿ ಸಿದ್ದರಾಮಯ್ಯನವರ ಶ್ರಮ ಮತ್ತು ವರ್ಚಸ್ಸು ಕಾರಣ. ಅವರ ಬೆನ್ನಿಗೆ ನಿಂತು ಪಕ್ಷಕ್ಕೆ ಆಶೀರ್ವಾದ ಮಾಡಿದ ಕುರುಬ ಸೇರಿದಂತೆ ಎಲ್ಲಾ ಶೋಷಿತ, ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಕೇಂದ್ರ ಕಾಂಗ್ರೆಸ್ ನಾಯಕರು ಬೆನ್ನಿಗೆ ಚೂರಿ ಹಾಕಿದ್ದಾರೆ." ಮಲತಾಯಿ ಧೋರಣೆ: "ಅಧಿಕಾರ ಮತ್ತು ಉನ್ನತ ಸ್ಥಾನಮಾನ ನೀಡುವಾಗ ಕಾಂಗ್ರೆಸ್ ಪಕ್ಷವು ಹಿಂದುಳಿದ ಹಾಗೂ ದಲಿತ ಸಮಾಜದ ವಿರುದ್ಧ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕಷ್ಟಕಾಲದಲ್ಲಿ ಪಕ್ಷ ಸಂಘಟನೆ ಮಾಡಿದ ನಾಯಕರನ್ನು ಮೂಲೆಗುಂಪು ಮಾಡುವ ಹುನ್ನಾರ ಇದರ ಹಿಂದೆ ಅಡಗಿದೆ ಎಂಬುದು ಸ್ಪಷ್ಟವಾಗಿದೆ."
ತಕ್ಕ ಪಾಠ ಕಲಿಸುವ ಎಚ್ಚರಿಕೆ: "ಸಿದ್ದರಾಮಯ್ಯನವರಿಗೆ ಹಾಗೂ ದಲಿತ ಸಮಾಜಕ್ಕೆ ಆಗಿರುವ ಈ ಅನ್ಯಾಯವನ್ನು ಬಬಲೇಶ್ವರ ಮತಕ್ಷೇತ್ರ ಸೇರಿದಂತೆ ಇಡೀ ರಾಜ್ಯದ ಅಹಿಂದ ವರ್ಗ ಎಂದಿಗೂ ಸಹಿಸುವುದಿಲ್ಲ. ಮುಂಬರುವ ದಿನಗಳಲ್ಲಿ ನಮ್ಮ ಒಗ್ಗಟ್ಟಿನ ಶಕ್ತಿ ಏನು ಎಂಬುದನ್ನು ತೋರಿಸುತ್ತೇವೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ.” ಕಾಂಗ್ರೆಸ್ ಪಕ್ಷದ ಇಚಿತಹ ಒಡೆದು ಆಳುವ ಮತ್ತು ನಾಯಕರನ್ನು ತುಳಿಯುವ ಸಂಸ್ಸೃತಿಯ ವಿರುದ್ಧ ಸಮಾಜದ ಯುವಕರು, ಮುಖಂಡರು ಯೋಚಿಸಬೇಕಾಗಿದೆ ಎಚಿದು ಅವರು ಕರೆ ನೀಡಿದ್ದಾರೆ.
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು 