ರೇವಣಸಿದ್ದೇಶ್ವರ ವಿರಕ್ತಮಠ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಶಿವಾನುಭವ ಕಾರ್ಯಕ್ರಮ

ರೇವಣಸಿದ್ದೇಶ್ವರ ವಿರಕ್ತಮಠ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಶಿವಾನುಭವ ಕಾರ್ಯಕ್ರಮ The religious Shiva experience program was organized as part of the Revanasiddheshwara Viraktamath J

ರಾಯಬಾಗ 03: ಸದ್ಭಕ್ತರು ತನು, ಮನ, ಧನಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸಿದರೆ ಮಠಗಳು ಬೆಳೆಯಲು ಸಾಧ್ಯ ಎಂದು ಬೆಲ್ಲದ ಬಾಗೇವಾಡಿ ಮಹಾಂತೇಶ್ವರ ವಿರಕ್ತಮಠದ ಶಿವಾನಂದ ಸ್ವಾಮೀಜಿ ಹೇಳಿದರು. ಗುರುವಾರ ರಾತ್ರಿ ತಾಲೂಕಿನ ಭೆಂಡವಾಡ ಗ್ರಾಮದ (ಗುಡ್ಡದ) ರೇವಣಸಿದ್ದೇಶ್ವರ ವಿರಕ್ತಮಠ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಇಲ್ಲಿನ ರೇವಣಸಿದ್ದೇಶ್ವರ ವಿರಕ್ತಮಠ ಪುಣ್ಯಕ್ಷೇತ್ರ ಅಭಿವೃದ್ಧಿಗಾಗಿ ಗುರುಸಿದ್ಧ ಶ್ರೀಗಳ ಕೊಡುಗೆ ಅಪಾರವಾಗಿದೆ ಎಂದರು. ಕಂಕಣವಾಡಿ ಮಾರುತಿ ಶರಣರು ಮಾತನಾಡಿ, ಪರಮಾತ್ಮ ಶುದ್ಧ ಕಾಯಕ, ಭಕ್ತಿ ಒಲಿಯುತ್ತಾನೆ.

ಗುರುವಿನ ಮಾರ್ಗದರ್ಶನದಲ್ಲಿ ನಡೆದರೆ ಮಾನವನ ಜನ್ಮ ಸಾರ್ಥಕವಾಗುವುದು ಎಂದರು.ಭೆಂಡವಾಡ ರೇವಣಸಿದ್ದೇಶ್ವರ ವಿರಕ್ತಮಠದ ಗುರುಸಿದ್ಧ ಸ್ವಾಮಿಜೀಯವರು ಅಧ್ಯಕ್ಷತೆಯನ್ನು ವಹಿಸಿದ್ದರು.ಕಾರ್ಯಕ್ರಮದಲ್ಲಿ ಘಟಪ್ರಭಾ ಹೊಸಮಠದ ವಿರೂಪಾಕ್ಷ ಸ್ವಾಮೀಜಿ, ವಕೀಲ ವಿ.ಎಸ್‌.ಪೂಜೇರಿ, ಸಂಗಪ್ಪ ಬೆನ್ನಾಳೆ, ರೇವಣು ಶಿವಾಪೂರೆ, ರೇವಣು ದುಪದಾಳೆ, ಅಳಗೊಂಡ ತಟ್ಟಿಮನಿ, ಸಾಗರ ಪೂಜೇರಿ, ಮಹಾದೇವ ಲಕ್ಷ್ಮೇಶ್ವರ, ಸಂಜಯ ಹಂಜೆ, ರವಿ ಪೂಜಾರಿ, ಹನುಮಂತ ಪಿಡಾಯಿ ಸೇರಿ ಸೇರಿ ಭೆಂಡವಾಡ, ಕಟಕಭಾವಿ, ಮಂಟೂರ, ಮಾವಿನಹೊಂಡ, ದೇವಾಪೂರಹಟ್ಟಿ ಗ್ರಾಮಗಳ ಭಕ್ತಾದಿಗಳು ಇದ್ದರು.