ವೈರಾಗ್ಯದ ಸಿರಿ ಶರಣೆ ಅಕ್ಕಮಹಾದೇವಿ-ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು

ವೈರಾಗ್ಯದ ಸಿರಿ ಶರಣೆ ಅಕ್ಕಮಹಾದೇವಿ-ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು The refuge of renunciation, Akkamahadevi - Dr. Odeyara Chennamallikarjuna Shivacharya

ರಾಣೇಬೆನ್ನೂರ 04 :  ಜಗತ್ತಿನ ಶರಣ ಸಂಪ್ರದಾಯದಲ್ಲಿ ಪ್ರಕಾಶಮಾನ ತಾರೆಯಾಗಿರುವ ಶರಣಿ ಅಕ್ಕಮಹಾದೇವಿಯ ಬದುಕು ಜೀವನ ಮತ್ತು ಆಧ್ಯಾತ್ಮಿಕತೆ ಸೂರ್ಯ ಚಂದ್ರರು ಇರುವವರೆಗೂ ಸದಾ ಸ್ಮರಣೀಯವಾಗಿರುತ್ತದೆ ಎಂದು ಹೊನ್ನಾಳಿ ಹಿರೇಕಲ್ಮಮಠದ  ಶ್ರೀ ಷ. ಭ್ರ. ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು. ಅವರು ಗುರುವಾರ ರಾತ್ರಿ ಮೃತ್ಯುಂಜಯ ನಗರದ ಶ್ರೀ ಚೆನ್ನೇಶ್ವರ ಮಠದ ಚೆನ್ನಮಲ್ಲಿಕಾರ್ಜುನ  ಸಂಸ್ಕೃತಿ ಪ್ರಸಾರ ಪರಿಷತ್ತು ಆಯೋಜಿಸಿದ್ದ, 304ನೇ ದವನದ ಹುಣ್ಣಿಮೆ ಜ್ಞಾನವಾಹಿನಿ ಮಾಸಿಕ ಧರ್ಮ ಸಭೆ ದಿವ್ಯ ಸಾನಿಧ್ಯ ಮಾತನಾಡಿದರು.

ಧರ್ಮ ಸಂಸ್ಕೃತಿ ಇಂದು ಮರೆಯಾಗುತ್ತಲ್ಲಿದೆ, ಧರ್ಮ ಮತ್ತು ಆಧ್ಯಾತ್ಮಿಕ ಆರಾಧನೆಯಲ್ಲಿ ಜೀವನವನ್ನು ಕಟ್ಟಿಕೊಂಡರೆ ಮಾತ್ರ ಭವಿಷ್ಯದ ಬದುಕು ಸುಂದರವಾಗಲಿದೆ. ಇಂತಹ ಶರಣರ ವಾಣಿ ಕೇಳುವುದೇ ನಮ್ಮೆಲ್ಲರ ಸೌಭಾಗ್ಯವಾಗಬೇಕು ಎಂದು ಶ್ರೀಗಳು ಭಕ್ತ ಸಮುದಾಯಕ್ಕೆ ಕರೆ ನೀಡಿದರು. ವಿಶೇಷ ಉಪನ್ಯಾಸ ನೀಡಿದ ಗಾಯಿತ್ರಿ ಪಾಟೀಲ ಅವರು, ಅಕ್ಕನ ಜೀವನ ಚರಿತ್ರೆ ಮಾನವ ಕುಲಕ್ಕೆ ಮಾರ್ಗದರ್ಶನವಾಗಿದೆ. ಅಕ್ಕನ ವೈರಾಗ್ಯಮಯ ಬದುಕು ಮತ್ತು ಜೀವನ ಅವರ ವಚನಗಳಲ್ಲಿ ತಿಳಿಯಬಹುದಾಗಿದೆ.

ಆಧ್ಯಾತ್ಮಿಕ ಅವರ ಹಾಸು ಹೊಕ್ಕಾಗಿ  ಪ್ರತಿಯೊಬ್ಬ ಮಾನವ ಜೀವಿಗೆ ಪ್ರೇರಣೆಯಾಗಿದೆ ಅಂಥವರ ಜೀವನ ಮತ್ತು ಸಾಧನೆ ನಮ್ಮೆಲ್ಲರ ಬದುಕಿಗೆ ಇಂದು ಆದರ್ಶವಾಗಲಿದೆ ಎಂದರು. ಲಿಂಗೈಕ್ಯರಾದ, ಅ.ಸಿ ಹಿರೇಮಠ, ಲೀಲಾವತಿ ಹಿರೇಮಠ, ಮುರುಗೆಪ್ಪ ಮುಂಡಾಸದ ಅವರ ಸ್ಮರಣೆಯಲ್ಲಿ ವಾಗೀಶ ಮಳಿಮಠ, ಸುನಂದಮ್ಮ ತಿಳುವಳ್ಳಿ ಮತ್ತು ವಿಜಯಾ ಮುಂಡಾಸದ ಮತ್ತು ಮಕ್ಕಳು ಮೊಮ್ಮಕ್ಕಳು  ತಮ್ಮ ಭಕ್ತಿ ಸೇವೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರ ಸಾಧಕರಾದ ಅಂಕಿತಾ ಶಿವರಾಜ ಮುಂಡಾಸದ, ಬಸವರಾಜ  ಹಾ ಶಿವಲಿಂಗಪ್ಪನವರ ಹನುಮಂತಪ್ಪ  ಹಾ ಶಿವಲಿಂಗಪ್ಪನವರ ಅವರನ್ನು ಶ್ರೀಗಳು ಗೌರವ ರಕ್ಷೆ ನೀಡಿ ಸನ್ಮಾನಿಸಿದರು. ವೇದಿಕೆಯಲ್ಲಿ ಬಸವರಾಜಪ್ಪ ಕುರುವತ್ತಿ, ಸೋಮನಾಥ ಒಡೆಯರ್, ಬಸವರಾಜ ಪಟ್ಟಣಶೆಟ್ಟಿ, ಎಂ. ಕೆ. ಹಾಲಸಿದ್ದಯ್ಯ ಶಾಸ್ತ್ರಿಗಳು, ಗೌರೀಶ ನೆಗಳೂರಮಠ, ಉಮೇಶ ಗುಂಡಗಟ್ಟಿ, ಬಿ

ದ್ದಾಡೆಪ್ಪ ಚಕ್ರಸಾಲಿ, ಡಾಕ್ಟರ್ ಎಮ್‌. ಆರ್‌.ಸಾಲ್ಮನಿ, ನಿಂಗನಗೌಡ ಪಾಟೀಲ, ಜಗದೀಶ್ ಮಳಿಮಠ, ಶಕುಂತಲಮ್ಮ, ಭಾಗ್ಯಶ್ರೀ ಗುಂಡಗಟ್ಟಿ, ಪಾರ್ವತಿ ಹೊಸಗೌಡರ, ಮಾಲಾ ಮುದಿಗೌಡರ, ಶಕುಂತಲಾ ಪಾಟೀಲ, ಉಜ್ವಲ ದಾನಣ್ಣನವರ, ಉಮಾ ಬಿಳಿಗಿ ಮತ್ತಿತರರು ಉಪಸ್ಥಿತರಿದ್ದರು.  ಸ್ಥಳೀಯ ಕಲಾವಿದರು ಸಂಗೀತ ಸೇವೆ ಸಲ್ಲಿಸಿದರು.   ವಸಂತಾ ಹುಲ್ಲತಿ ಸ್ವಾಗತಿಸಿ, ಕಸ್ತೂರೆಮ್ಮ ಪಾಟಿಲ್ ನಿರೂಪಿಸಿ, ಮಠದ ಕಾರ್ಯದರ್ಶಿ ಅಮೃತ ಗೌಡ ಪಾಟೀಲ್ ವಂದಿಸಿದರು.