ಲೋಕದರ್ಶನ ವರದಿ
ಕಾರವಾರ 11: ನಗರದ ಸೇಂಟ್ ಮೈಕೆಲ್ ಕಾನ್ವೆಂಟ್ ಬಳಿ ಕಾಣಿಸಿಕೊಂಡ ಅಪರೂಪ ಬಿಳಿ ಗೂಬೆಯ ಮರಿ ಪ್ರತ್ಯಕ್ಷವಾಗಿತ್ತು. ಬಿಳಿಗೂಬೆ ವೀಕ್ಷಿಸಲು ಜನರು ಜಮಾಯಿಸಿರುವುದು ಕಂಡುಬಂತು.
ಶಾಲೆಯ ಪ್ರವೇಶ ದ್ವಾರದ ಬಳಿ ಕಂಡು ಬಂದ ಬಿಳಿ ಗೂಬೆಯನ್ನು ರಕ್ಷಿಸಿದ ಶಾಲೆಯ ಸಿಬ್ಬಂದಿ, ಪಂಜರದೊಳಗೆ ಸುರಕ್ಷಿತವಾಗಿಟ್ಟಿದ್ದರು. ಇದನ್ನು ಗಮನಿಸಿದ ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಬಿಳಿಗೂಬೆಯ ಪೋಟೋ ಕ್ಲಿಕ್ಕಿಸಿಕೊಂಡರು.
ನಂತರ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಮೋಹನ ನಾಯ್ಕ ಹಾಗೂ ಪಕ್ಷಿ ತಜ್ಞ ಗೋಪಾಲ ನಾಯ್ಕ ಅದನ್ನು ಮೊದಲಿದ್ದ ಜಾಗಕ್ಕೆ ತಂದು ಬಿಟ್ಟರು. ರಾತ್ರಿಯ ವೇಳೆಯಲ್ಲಿ ಇವುಗಳು ಹೆಚ್ಚು ಚುರುಕಾಗಿರುತ್ತವೆ. ಅದರ ತಾಯಿ ರಾತ್ರಿ ಸಮಯದಲ್ಲಿ ಬರಬಹುದು. ಹೀಗಾಗಿ ಮರಿಯು ಇದ್ದ ಜಾಗದಲ್ಲೇ ಇದ್ದರೆ ಅದನ್ನು ಕೊಂಡೊಯ್ಯಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಸುಮಾರು ಒಂದು ವಾರದ ಮರಿ ಇದಾಗಿದೆ. `ಬಾರನ್ ಔಲ್ (ಃಚಿಡಿಟಿ ಔತಿಟ) ಎಂದು ಇದಕ್ಕೆ ಕರೆಯಲಾಗುತ್ತದೆ. ಬಿಳಿ ಗೂಬೆ ಇಲಿ, ಏಡಿ, ಸಣ್ಣಪುಟ್ಟ ಕೀಟಗಳನ್ನು ಹಿಡಿದು ತಿನ್ನುತ್ತಾ ಬದುಕುತ್ತವೆ ಎಂದು ಗೋಪಾಲ್ ನಾಯ್ಕ ಮಾಹಿತಿ ನೀಡಿದರು.