ಬಿಸಿಲಿನ ತಾಪಕ್ಕೆ ತಂಪು ತಂದ ಮಳೆ
The rain brought coolness to the hot sun
ಹನಮಸಾಗರ 25: ಸಂಜೆ ಗುಡುಗು ಸಹಿತ ಅರ್ಧಗಂಟೆ ಮಳೆಯ ಆನಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಬೆಳಗ್ಗಿನಿಂದಲೇ ಬಿಸಿಲಿನ ತಾಪ ವಿಪರೀತವಾಗಿ ಹೆಚ್ಚಾಗಿ ಜನಜೀವನಕ್ಕೆ ತೊಂದರೆಯನ್ನುಂಟುಮಾಡಿತ್ತು. ಉರಿ ಬಿಸಿಲಿನಿಂದ ಜನರು ತತ್ತರಿಸಿ ನೆರಳು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಧ್ಯಾಹ್ನ ವೇಳೆಗೆ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಾಗಿ ರಸ್ತೆಗಳು ಸುಮ್ಮನೆ ಖಾಲಿಯಾಗಿದ್ದವು.ಆದರೆ ಸಂಜೆ ಸುಮಾರು 4:00 ಗಂಟೆಯ ಸುಮಾರಿಗೆ ವಾತಾವರಣದಲ್ಲಿ ಆಕಸ್ಮಿಕ ಬದಲಾವಣೆ ಕಂಡುಬಂದಿತು. ಆಕಾಶದಲ್ಲಿ ಮೋಡಗಳು ಕವಿದು, ಗುಡುಗು-ಸಿಡಿಲಿನೊಂದಿಗೆ ಮೊದಲಿಗೆ ಜಿಟಿ ಜಿಟಿಯಾಗಿ ಮಳೆ ಸುರಿಯಲು ಪ್ರಾರಂಭವಾಯಿತು.
ಬಳಿಕ ಮಳೆಯ ತೀವ್ರತೆ ಸ್ವಲ್ಪ ಹೆಚ್ಚಾಗಿ, ಸಾಧಾರಣ ಮಳೆಯಾಗಿ ಸುಮಾರು ಅರ್ಧ ಗಂಟೆಯ ಕಾಲ ನಿರಂತರವಾಗಿ ಸುರಿಯಿತು.ಈ ಮಳೆಯಿಂದ ದಿನಪೂರ್ತಿ ಕಾಡಿದ ಬಿಸಿಲಿನ ತಾಪಕ್ಕೆ ತಂಪು ತಂದುಕೊಟ್ಟಿತು. ತಾಪಮಾನ ಇಳಿಕೆಯಾಗಿದ್ದು, ವಾತಾವರಣ ಸುಸಹ್ಯವಾಗಿ ಮಾರ್ಪಟಟಿತು. ಜನರು ಉಸಿರಾಡುವಂತೆ ತಂಪಾದ ಹವಾಮಾನ ಅನುಭವಿಸಿದರು. ರೈತರು ಸಹ ಈ ಮಳೆಯಿಂದ ಸಂತಸಗೊಂಡಿದ್ದು, ಬೆಳೆಗಳಿಗೆ ಇದು ಅನುಕೂಲಕರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪೋಟೊ ಬುಧುವಾರ ಸಾಯಂಕಾಲ ಹನುಮಸಾಗರದಲ್ಲಿ ಮಳೆಬರುತ್ತಿರುವಾಗ ಪುಟ್ಟ ಮಗು ಕೊಡೆ ಹಿಡಿದು ಆಟವಾಡುತ್ತಿರುವದು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 