ಸದೃಢ ಭಾರತವನ್ನು ನಿರ್ಮಿಸುವುದೇ ಕ್ರೀಡಾಕೂಟಗಳ ಉದ್ದೇಶ : ನಾರಗೊಂಡ
The purpose of sports events is to build a strong India: Nargonda
ಹಾರೂಗೇರಿ, 25 : ಭಾರತೀಯ ಗ್ರಾಮೀಣರ ಅಚ್ಚುಮೆಚ್ಚಿನ ಕ್ರೀಡೆಯಾದ ಕಬಡ್ಡಿ, ಮನಸ್ಸುಗಳ ಸೌಹಾರ್ದತೆಯ ಬೆಸುಗೆ ಹಾಕುವ ಸಾಧನವಾಗಿದೆ. ಸದೃಢ ಭಾರತವನ್ನು ನಿರ್ಮಿಸುವುದೇ ಕ್ರೀಡಾಕೂಟಗಳ ಮುಖ್ಯ ಉದ್ದೇಶವಾಗಿದೆ ಎಂದು ಎಸ್‌ಎಂಎನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿವೇಕ ನಾರಗೊಂಡ ಹೇಳಿದರು.
ಪಟ್ಟಣ ಸಮೀಪದ ಹಾರೂಗೇರಿ ಕ್ರಾಸ್‌ದ ಎಸ್.ಎಂ.ನಾರಗೊಂಡ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಕಬಡ್ಡಿ ಕ್ರೀಡಾಕೂಟಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ಪಠ್ಯೇತರ ಚಟುವಟಿಕೆಗಳು ಅವಜ್ಞೆಗೆ ಒಳಗಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ವಿಕಾಸ ಸಾಧ್ಯವಾಗುತ್ತಿಲ್ಲ. ಪಠ್ಯದಷ್ಟೇ ಪಠ್ಯಪೂರಕ ಮತ್ತು ಪಠ್ಯೇತರ ಚಟುವಟಿಕೆಗಳು ಮಹತ್ವದ್ದಾಗಿವೆ. ರಾಜ್ಯಮಟ್ಟದ ಕ್ರೀಡಾಕೂಟಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳುವುದರಿಂದ ಜನರಲ್ಲಿ ಕ್ರೀಡಾಸಕ್ತಿ, ಕ್ರೀಡಾಪ್ರೇಮ ಹೆಚ್ಚಲಿದೆ ಎಂದು ಹೇಳಿದರು.
ಜಿಲ್ಲಾ ಕ್ರೀಡಾ ಸಂಯೋಜಕ ಅಜಯ ಮೋನೆ ಮಾತನಾಡುತ್ತ ಕ್ರೀಡೆಗಳು ದೇಶದ ಐಕ್ಯತೆಯನ್ನು ವೃದ್ಧಿಸುತ್ತಿದ್ದು, ಕಾಲೇಜುಗಳು ಕ್ರೀಡೆಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಸ್ಪರ್ಧಾಳುಗಳು ಕ್ರೀಡಾಮನೋಭಾವ ಮತ್ತು ಕ್ರೀಡಾ ನಿಯಮಗಳನ್ನು ಪಾಲಿಸಬೇಕೆಂದು ಹೇಳಿದರು.
ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಸಸಿಗೆ ನೀರೆರೆದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 8 ತಾಲೂಕುಗಳ ಮಹಿಳಾ ಮ್ತತು ಪುರುಷ ಕಬಡ್ಡಿ ಕ್ರೀಡಾಪಟುಗಳು ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡಾ.ಗೀರೀಶ ನಾರಗೊಂಡ, ರಾಯಬಾಗ ತಾಲೂಕು ಕ್ರೀಡಾ ಸಂಯೋಜಕ ಕುಶಲ ಶೆಟ್ಟಿ, ಜಿಲ್ಲಾಮಟ್ಟದ ಕಬಡ್ಡಿ ಕ್ರೀಡಾಕೂಟದ ಪರೀವೀಕ್ಷಕ ಬಾಳೇಶ ನಾಯಿಕ, ಪ್ರಾಚಾರ್ಯ ಪ್ರಶಾಂತ ಎಲ್.ಎಚ್. ದೈಹಿಕ ಉಪನ್ಯಾಸಕ ಸಿದ್ದು ಕಿರೆಸೂರ, ವರ್ಧಮಾನ ಶಿರಹಟ್ಟಿ, ಪ್ರದೀಪ ಹಾಲ್ಗುಣಿ, ಆನಂದ ಪಾಟೀಲ, ಬಾಬು ನಡೋಣಿ ವೇದಿಕೆಯಲ್ಲಿದ್ದರು.
ಕಿರಣ ಯಲ್ಲಟ್ಟಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮಹಾಂತೇಶ ಮುಗಳಖೋಡ ಕಾರ್ಯಕ್ರಮ ನಿರೂಪಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 