ಜೈನ ಧರ್ಮದ ಬಡವರಿಗೆ ಆರ್ಥಿಕ ಸಹಾಯ ನೀಡುವುದೇ ವರ್ಧಮಾನ ಪರಿವಾರದ ಉದ್ದೇಶೆ: ಅಶೋಕ ಜೈನ
The purpose of Vardhamana Parivar is to provide financial assistance to the poor of Jainism: Ashok J
ಕಾಗವಾಡ 21: ಆರ್ಥಿಕವಾಗಿ ಹಿಂದೂಳಿದ ಸಹಧರ್ಮಿಯರನ್ನು ಸಧೃಡ ಮಾಡುವುದೇ ನಮ್ಮ ವರ್ಧಮಾನ ಪರಿವಾರ ಸೇವಾ ಟ್ರಸ್ಟದ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ನಾವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಜೈನ ಧರ್ಮದ ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ವರ್ಧಮಾನ ಪರಿವಾರ ಸೇವಾ ಟ್ರಸ್ಟ್ ಸಂಸ್ಥಾಪಕ ಅಶೋಕ ಜೈನ ಹೇಳಿದ್ದಾರೆ.
ಅವರು, ಶನಿವಾರ ದಿ. 19 ರಂದು ತಾಲೂಕಿನ ಶಿರಗುಪ್ಪಿ ಗ್ರಾಮದ ಶ್ರೀ 1008 ಪಾರ್ಶ್ವನಾಥ ದಿಗಂಬರ ಜೈನ ಭವನದಲ್ಲಿ ಸಧರ್ಮಿಯ ವಿದ್ಯಾರ್ಥಿ ವೇತನ ಸಂದರ್ಶನ, ಕರಿಯರ್ ಗೈಡನ್ಸ್ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಈ ವೇಳೆ ನ್ಯಾಯವಾದಿ ಅಭಯ ಅಕಿವಾಟೆ ಮಾತನಾಡಿ, ವರ್ಧಮಾನ ಪರಿವಾರದ ಸೇವೆಯನ್ನು ಕೊಂಡಾಡಿದರು. ಋಷಭ ಬಾಳಿಕಾಯಿ ಪ್ರಾಸ್ಥಾವಿಕವಾಗಿ ಮಾತನಾಡಿ, ವರ್ಧಮಾನ ಪರಿವಾರದ ಧ್ಯೆಯ ಮತ್ತು ಉದ್ದೇಶಗಳನ್ನು ತಿಳಿಸಿದರು. ಶಿರಗುಪ್ಪಿ ಸುತ್ತಮುತ್ತಲಿನ ಗ್ರಾಮಗಳ ಜೈನ ಧರ್ಮದ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಹೆಸರು ನೊಂದಾಯಿಸಿಕೊಂಡರು.
ಈ ಸಮಯದಲ್ಲಿ ಅತಿಥಿಗಳಾಗಿ ವರ್ಧಮಾನ ಪರಿವಾರದ ಸುಶೀಲ ಜೈನ, ಪ್ರದೀಪ ಜೈನ, ಸಂಜಯ ಜೈನ, ವಿಕಾಸ ಜೈನ, ಶ್ರೀಮತಿ ರಾಣಿ ಜೈನ, ಶ್ರೀಮತಿ ಮೀನಾ ಜೈನ, ವಿಪಿನ ಜೈನ, ಶ್ರೀನಿಧಿ ಜೈನ, ಬಬಿತಾ ಪ್ರೇಮಕುಮಾರ, ಡಾ. ಮಹಾಧವಲ ಭೋಮಾಜ, ಭಮ್ಮಣ್ಣಾ ಚೌಗುಲೆ, ಮಹಾವೀರ ಕಾತ್ರಾಳೆ, ಅಮೀತ ಚೌಗುಲೆ, ಭಾವುಸಾಬ ಕಾಗವಾಡೆ, ಕಿರಣ ಭೋಲೆ, ಬಾಬು ಕರಡಗೆ, ವಿಜಯ ಅಕಿವಾಟೆ, ವಿದ್ಯಾಸಾಗರ ಚೌಗುಲೆ ಸೇರಿದಂತೆ ಜೈನ ಧರ್ಮದ ವಿದ್ಯಾರ್ಥಿಗಳು, ಪಾಲಕರು, ಮತ್ತು ಸುತ್ತಮುತ್ತಲಿನ ಗ್ರಾಮಗಳ ಜೈನ ಧರ್ಮಿಯರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 