ಲೋಕದರ್ಶನ ವರದಿ
ಹಾವೇರಿ 07: ಈ ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳಲ್ಲಿ ಅಸಾಧ್ಯವನ್ನೂ ಸಾಧ್ಯವಾಗಿಸುವ ಶಕ್ತಿ ಯುವಕರಿಗಿದೆ. ಎಂತಹ ಪರಿಸ್ಥಿತಿಯಲ್ಲಿಯೂ ಸಮಾಜದ ಪರಿವರ್ತನೆಗೆ ಮುಂಚೂಣಿ ಕಾರ್ಯ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ಧಾರವಾಡ ಸಿಡೋಕ್ನ ನಿದರ್ೇಶಕ ಮಾಲತೇಶ ಜೀವಣ್ಣವರ ಅಭಿಪ್ರಾಯಪಟ್ಟರು.
ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಜರುಗಿದ 2018-19 ನೇ ಶೈಕ್ಷಣಿಕ ಸಾಲಿನ ಕಾಲೇಜು ಒಕ್ಕೂಟ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಪ್ರತಿಯೊಬ್ಬ ವಿದ್ಯಾಥರ್ಿಯೂ ಕಲಿಕಾಸಕ್ತಿಯನ್ನು ಮೂಡಿಸಿಕೊಂಡು ಉತ್ತಮ ಹಾದಿಯಲ್ಲಿ ನಡೆಯಬೇಕಾಗಿದೆ.
ಸಾಧನೆ ಸುಲಭದ ಮಾತಲ್ಲ. ಸಾಧನೆಯ ಹಾದಿಯಲ್ಲಿ ಸಾಗುವಾಗ ಹಲವು ಹಂತಗಳ ಪರಿಶ್ರಮ, ಪಕ್ವತೆ, ಪ್ರಭುದ್ಧತೆ, ಪ್ರಾಮಾಣಿಕತೆ ಬಹಳ ಮುಖ್ಯವಾಗಿ ಇರಬೇಕಾಗುತ್ತದೆ. ಒಮ್ಮೆ ಸಾಧಿಸಿದರೆ ಎಲ್ಲವೂ ಸಾಧಕನದಾಗುತ್ತದೆ. ವ್ಯಕ್ತಿ ಜೀವನದಲ್ಲಿ ನಿಸ್ವಾರ್ಥ ಮನೋಭಾವ, ಪರೋಪಕಾರ ಮತ್ತು ವಿಶಾಲ ಮನಸ್ಥಿತಿಯನ್ನು ಕಾಯ್ದುಕೊಂಡು ಬದುಕಬೇಕಿದೆ. ಉದ್ಯಮ ಕ್ಷೇತ್ರವಿಂದು ಎಲ್ಲೆಡೆಗೂ ವ್ಯಾಪಿಸಿ ಹಲವಾರು ಪ್ರಯೋಜನಗಳನ್ನು ಸಾಧ್ಯಂತತೆಗೊಳಿಸಿದೆ. ಪ್ರಸ್ತುತದಲ್ಲಿ ಕೈಗಾರಿಕೆಗಳ ಕುರಿತಾದ ಜಾಗೃತಿ ಮತ್ತು ಅರಿವು ಮೂಡಿಸುವ ಅಗತ್ಯವಿದೆ. ಕಾರಣ ಉದ್ಯಮಾಶೀಲರಾಗುವವರು ಸೂಕ್ತತೆಯ ನಿಧರ್ಾರ ಮತ್ತು ಅಭಿವೃದ್ಧಿಯ ಕಾಯರ್ೋನ್ನತಿಯನ್ನು ಬಯಸಬೇಕಿದೆ. ಇರುವ, ಬರುವ ಸಂಬಂಧಗಳಲ್ಲಿ ಉತ್ತಮ ಮಾದರಿಯಾದ ಜೀವನವನ್ನು ನಡೆಯಿಸಿಕೊಂಡು ಸಾಧನೆಯ ಶ್ರೇಣಿಯನ್ನೇರಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಪಿ. ಡಿ. ಶಿರೂರ ವಹಿಸಿದ್ದರು. ವೇದಿಕೆಯಲ್ಲಿ ಸದಸ್ಯರಾದ ಸಿ. ಬಿ. ಹಿರೇಮಠ, ಎಸ್. ಜೆ. ಹೆರೂರ, ಬಸವರಾಜ ಮಾಸೂರ ಇದ್ದರು. ಕಾರ್ಯಕ್ರಮದನ್ವಯ ಪಿಹೆಚ್ಡಿ, ನೆಟ್-ಕೆಸೆಟ್ ಹಾಗೂ ರ್ಯಾಂಕ್ ಪಡೆದ ಸಾಧಕರನ್ನು ಸನ್ಮಾನಿಸಲಾಯಿತು.
ಆರಂಭದಲ್ಲಿ ಮೇಘಾ ಪಾಟೀಲ ಸಂಗಡಿಗರು ಪ್ರಾಥರ್ಿಸಿದರು. ಪ್ರಾಚಾರ್ಯ ಪ್ರೊ. ಎಸ್. ಬಿ. ನಾಡಗೌಡ ಸ್ವಾಗತಿಸಿದರು. ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಪ್ರೊ. ಜಿ. ಎಮ್. ಎಣ್ಣಿ ಪರಿಚಯಿಸಿದರು. ಪ.ಪೂ. ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ. ದೀಪಕ ಕೊಲ್ಲಾಪುರೆ ನಿರೂಪಿಸಿದರು. ಪ್ರಾಚಾರ್ಯ ಪ್ರೊ. ಜೆ. ಆರ್. ಸಿಂಧೆ ವಂದಿಸಿದರು. ಸಮಾರಂಭದಲ್ಲಿ ಪಾಲಕರು, ಬೋಧಕ-ಬೋಧಕೇತರ ಸಿಬ್ಬಂಧಿ ಹಾಗೂ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.