ಸಮಾಜದ ಕಡು ಬಡವರು ಆನಂದದಿಂದ ಹಬ್ಬ ಆಚರಿಸುವಂತಾಗಬೇಕು: ಹಿಟ್ನಾಳ್
ಲೋಕದರ್ಶನ
ವರದಿ
ಕೊಪ್ಪಳ 12: ಉಳ್ಳವರು ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಅದೇ ರೀತಿ ಸಮಾಜದ ಕಡು ಬಡವರು ಸಹಿತ ಹಬ್ಬವನ್ನು ಆನಂದದಿಂದ ಆಚರಿಸಲಿ ಎನ್ನುವ ಉದ್ದೇಶ ಭಾಗ್ಯನಗರದ ಎಸ್.ಎಸ್.ಕೆ ಸಮಾಜದ ಕಾರ್ಯಕ್ರಮಶ್ಲಾಘನಿಯ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಹಿರಿಯ ಮುಂಖಂಡ ಕೆ.ಬಸವರಾಜ್ ಹಿಟ್ನಾಳ್ ಹೇಳಿದರು.
ಅವರು ಇಲ್ಲಿಗೆ ಸಮಿಪದ ಭಾಗ್ಯನಗರ ಪಟ್ಟಣದ ಅಂಬಾಭವಾನಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ
ಎಸ್.ಎಸ್.ಕೆ ಸಮಾಜದ
ಭಾಗ್ಯನಗರ ವತಿಯಿಂದ ಸಮಾಜದ ಬಡ ಮಹಿಳೆಯರಿಗೆ ಸೀರಿ
ಹಂಚುವ ಹಾಗೂ ಸಮಾಜದ ಪ್ರತಿಭಾವಂತ
ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಮುಂದುವರಿದು ಮಾತನಾಡುತ್ತಾ
ಉಳ್ಳವರು ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಅದೇ ರೀತಿ ಸಮಾಜದ
ಕಡು ಬಡವರು ಸಹಿತ ಹಬ್ಬವನ್ನು ಆನಂದದಿಂದ
ಆಚರಿಸಲಿ ಎನ್ನುವ ಉದ್ದೇಶ ಭಾಗ್ಯನಗರದ ಎಸ್.ಎಸ್.ಕೆ
ಸಮಾಜದ ಕಾರ್ಯಕ್ರಮ ಶ್ಲಾಘನಿಯ ಎಂದರು. ಅಲ್ಲದೆ ಇದೆ ಸಂದರ್ಭದಲ್ಲಿ ಶಾಸಕರ
ನಿಧಿಯಿಂದ ಗುಡಿಯ ಪಕ್ಕದಲ್ಲಿ ಐವತ್ತು ಲಕ್ಷ ರೂಗಳ ವೆಚ್ಚದಲ್ಲಿ
ನಿಮರ್ಿಸುತ್ತಿರುವ ಸಮುದಾಯದ ಭವನದ ಕಾರ್ಯ ಪ್ರಗತಿಯನ್ನು
ಸಹ ಕೆ.ಬಸವರಾಜ್ ಹಿಟ್ನಾಳ್
ವೀಕ್ಷಿಸಿದರು.
ಈ ಕಾರ್ಯಕ್ರಮದಲ್ಲಿ ಸಮಾಜದ
ಅಧ್ಯಕ್ಷ ಎನ್.ಯು. ಮೇಘರಾಜ,
ಉಪಾಧ್ಯಕ್ಷ ದೇವೇಂದ್ರಸಾ ಮಗಜಿ, ಉದ್ಯಮಿ ಶ್ರೀನಿವಾಸ್ ಗುಪ್ತಾ, ಮಾಜಿ ಜಿ.ಪಂ
ಸದಸ್ಯ ಯಮನಪ್ಪ ಕಬ್ಬೇರ, ಕಾಂಗ್ರೆಸ ಮುಖಂಡರಾದ ಕೃಷ್ಣಾ ಇಟ್ಟಂಗಿ, ಅರ್ಜನಸಾ ಕಾಟವಾ, ಸಮಾಜದ ಪ್ರಮುಖರಾದ ಉಮಾಕಾಂತಸಾ ಕಠಾರೆ, ನಾರಾಯಣ ಸಾ, ಕಠಾರೆ, ಕೃಷ್ಣಸಾ,
ವೈದಲಬಂಜನ್, ಶತಿಷ ಮೇಘರಾಜ, ಮಹಿಳಾ
ಸಮಾಜದ ಲಕ್ಷ್ಮೀಬಾಯಿ ಮೇಘರಾಜ್, ಸರೋಜಾ ಬಾಕಳೆ ಇತರರು ಇದ್ದರು.ಪರಶುರಾಮ ಪವರಾರ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 