ಪ್ರೇಕ್ಷಕರ ಕಣ್ಣುಗಳನ್ನು ತೇವಗೊಳಿಸಿದ ’ರಮಾಭಾಯಿ ಅಂಬೇಡ್ಕರ್’ ನಾಟಕ...!
The play 'Ramabhai Ambedkar' brought tears to the eyes of the audience..
ಪ್ರೇಕ್ಷಕರ ಕಣ್ಣುಗಳನ್ನು ತೇವಗೊಳಿಸಿದ ’ರಮಾಭಾಯಿ ಅಂಬೇಡ್ಕರ್’ ನಾಟಕ...!
ಕೊಪ್ಪಳ 13 :ಅಂಬೇಡ್ಕರ್‌ರವರುಉನ್ನತ ವ್ಯಾಸಂಗಕ್ಕೆಂದು ಛತ್ರಪತಿ ಶಾಹು ಮಹಾರಾಜರಿಂದ ವಿದ್ಯಾರ್ಥಿ ವೇತನ ಪಡೆದುಅಮೇರಿಕಕ್ಕೆ ಹೋಗುವ ಸಂದರ್ಭದಲ್ಲಿಅವರ ಹೆಂಡತಿರಮಾಬಾಯಿತುಂಬುಗರ್ಭಿಣಿ. ಹೆರಿಗೆ ನಂತರ ಕೆಲವೇ ದಿನಗಳಲ್ಲಿ ಆ ಮಗು ತೀರಿ ಹೋಗುತ್ತೆ. ಈ ವಿಷಯತಿಳಿಸಿದರೆ ಎಲ್ಲಿಗಂಡನಅಧ್ಯಯನಕ್ಕೆತೊಂದರೆಯಾಗುತ್ತೋ ಏನೊ ಅಂಥ ಭಾವಿಸಿ ವಿಷಯ ತಿಳಿಸದೆ ಮಗುವಿನ ಅಂತ್ಯ ಸಂಸ್ಕಾರ ಮಾಡುತ್ತಾಳೆ. ತಾಯಿಯ ಸಂಕಟ, ವೇದನೆ, ಆಕ್ರಂದನರಂಗದ ಮೇಲೆ ನಡೆಯುತ್ತಿದ್ದರೆಇತ್ತ ಪ್ರೇಕ್ಷಕರ ಕಣ್ಣುಗಳು ಸದ್ದಿಲ್ಲದೇ ತೇವಗೊಳ್ಳುತ್ತಿದ್ದವು.ಇದು ಶನಿವಾರ ಸಂಜೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆದ ’ರಮಾಬಾಯಿಅಂಬೇಡ್ಕರ್ ’ನಾಟಕದಲ್ಲಿ ಕರುಳು ಹಿಂಡಿದದೃಶ್ಯ. ಇಂತಹ ಅನೇಕ ದೃಶ್ಯಗಳು ಜನರ ಮನ ಕಲುಕಿದವು.ಕುಟುಂಬದಲ್ಲಿ ಸರಣಿ ಸಾವುಗಳು, ಆರ್ಥಿಕ ಮುಗ್ಗಟ್ಟು, ಸಮಾಜದಲ್ಲಿ ಅವಮಾನಗಳು.
ಹೀಗೆ ಎಲ್ಲವನ್ನು ಸಹಿಸಿಕೊಂಡ ರಮಾಭಾಯಿಗಂಡನಅಧ್ಯಯನಕ್ಕೆ, ದೇಶದ ಪ್ರಗತಿಗೆಅಂಬೇಡ್ಕರ್ ಹಾಕಿಕೊಂಡು ಯೋಜನೆಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾಳೆ. ವಸತಿ ನಿಲಯದ ಮಕ್ಕಳ ಊಟಕ್ಕೆಆರ್ಥಿಕ ಮುಗ್ಗಟ್ಟುಎದುರಾದಾಗತನ್ನಕೈಯಲಿದ್ದ ಬಳೆಗಳನ್ನೇ ಬಿಚ್ಚಿ ಕೊಡುತ್ತಾಳೆ. ನಾಟಕಆರಂಭದಿಂದ ಹಿಡಿದುಕೊನೆಯದೃಶ್ಯದವರೆಗೂ ಪ್ರೇಕ್ಷಕರನ್ನು ಹಿಡಿಯುತ್ತೆ. ನಾಟಕದ ಪ್ರದರ್ಶನಕ್ಕೆ ಚಾಲನೆ ನೀಡಿ ವಿಧಾನಪರಿಷತ್ ಸದಸ್ಯರಾದ ಹೇಮಲತಾ ನಾಯಕ್ ಮಾತನಾಡಿ " ದೇಶದ ಆಡಳಿತದ ವ್ಯವಸ್ಥೆಯಾವ ದಿಕ್ಕಿನಲ್ಲಿಇರಬೇಕು, ಬಹುತ್ವ ಭಾರತದಲ್ಲಿಎಲ್ಲಾ ವರ್ಗದಜನರಿಗೆ ನ್ಯಾಯ ಸಿಗಬೇಕು ಅಂಥ ಯೋಚಿಸಿ ಶ್ರೇಷ್ಠ ವಾದ ಸಂವಿಧಾನ ವನ್ನುಕೊಟ್ಟಿದ್ದಾರೆ. ಅನೇಕ ಕಷ್ಟ ಕೋಟಲೆಗಳು, ಅವಮಾನಗಳನ್ನು ಎದುರಿಸಿ ಉನ್ನತ ಸ್ಥಾನ ತಲುಪಿದ ವ್ಯಕ್ತಿ ಬಾಬಾ ಸಾಹೇಬ್‌ಅಂಬೇಡ್ಕರ್.ಅವರುಕೊಟ್ಟ ಸಂವಿಧಾನ ದಿಂದಲೇ ನಾನು ಇಂದು ವಿಧಾನ ಪರಿಷತ್ ನ ಸದಸ್ಯೆಯಾಗಿದ್ದೇನೆ "ಎಂದರು. ನಗರಸಭೆಯಅಧ್ಯಕ್ಷರಾದಅಮ್ಜದ್ ಪಟೇಲ್, "ಅಂಬೇಡ್ಕರ್‌ಎಲ್ಲಾ ವರ್ಗದಜನರ ಹಿತವನ್ನು ಬಯಸಿದವರು.
ಮಹಿಳೆಯರು,ಶೋಷಿತರು, ಕಾರ್ಮಿಕರುಅನುಭವಿಸುವ ನೋವನ್ನು ಅರ್ಥೈಸಿಕೊಂಡು ಅವರ ಹಕ್ಕುಗಳಿಗಾಗಿ ಹೋರಾಟ ಮಾಡಿದ ಮಹಾ ಮಾನವತಾವಾದಿ ಅಂಬೇಡ್ಕರ್ ಎಂದು ಸ್ಮರಿಸಿದರು.ಸಾನಿಧ್ಯ ವಹಿಸಿದ್ದ ದದೆಗಲ್ ಸಿದ್ದರೂಢ ಮಠದಆತ್ಮಾನಂದ ಭಾರತಿ ಸ್ವಾಮೀಜಿರವರು " ನಾಟಕದಲ್ಲಿ ಒಳ್ಳೆ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕ ಅನಿಸುತ್ತೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪ ಜಾತಿ ಮತ್ತು ಪ ವರ್ಗಗಳ ನೌಕರಒಕ್ಕೂಟದಜಿಲ್ಲಾಧ್ಯಕ್ಷರಾದ ಮಂಜುನಾಥ್ ಮ್ಯಾಗಳಮನಿ ರವರು "ಸದಭಿರುಚಿಯ, ಆದರ್ಶ ಮೌಲ್ಯ ವುಳ್ಳ ನಾಟಕಗಳು ಸಮಾಜವನ್ನು ಬದಲಿಸುವ ಶಕ್ತಿಯನ್ನು ಹೊಂದಿವೆ. ಹೀಗಾಗಿ ಈ ನಾಟಕವನ್ನು ಆಯೋಜಿಸಿದ್ದೇವೆ " ಎಂದರು.ಇದೆ ಸಂದರ್ಭದಲ್ಲಿಐದು ಮಹಿಳಾ ಪೌರಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಚಿತ್ರಕಲಾ ಶಿಕ್ಷಕರಾದ ತಿರುಪತಿ ಶಿವನಗುತ್ತಿ ಅವರ ’ಅಣುಅಣುವಿನಲ್ಲೂಅಂಬೇಡ್ಕರ್ ’ ಚಿತ್ರ ಕಲಾ ಪ್ರದರ್ಶನಜನಮನ ಸೆಳೆಯಿತು.ವೇದಿಕೆ ಮೇಲೆ ಹನುಮಂತಪ್ಪಛಲವಾದಿ, ಕ್ಷೇತ್ರ ಶಿಕ್ಷಣಾ ಧಿಕಾರಿ ಪ್ರಕಾಶ್‌ತಗಡಿನ ಮನಿ, ಪ್ರಾಥಮಿಕ ಶಾಲಾ ಶಿಕ್ಷಕರಸಂಘದ ಅಧ್ಯಕ್ಷರಾದ ಹೋಳಿಬಸಯ್ಯ, ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ, ಪಿ. ಎಲ್. ಡಿ. ಬ್ಯಾಂಕ್‌ಅಧ್ಯಕ್ಷರಾದರಾಮಣ್ಣಕಲ್ಲಣ್ಣವರ, ಚಾಂದ ಪಾಷಾ ಕಿಲೆದಾರ, ಗುರುರಾಜ್‌ಕುಲಕರ್ಣಿ, ಲಾಯಕ್ಕಲಿ, ಮಾಜಿದ, ಯುವರಾಜ್ ಬಡಿಗೇರ್, ಬಾಳಪ್ಪ ಕಾಳೆ,ನಫೀಸ್ ಖಾನ್, ಹನುಮಂತಕುರಿ, ಅಣ್ಣಪ್ಪ ಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 