ಸಾಧನೆಯ ಹಾದಿ ಸುಗಮವಲ್ಲ, ಛಲವಿರಬೇಕು: ಡಾ.ಎ.ಬಿ.ರಾಮಚಂದ್ರ​ಪ್ಪ

ಸಾಧನೆಯ ಹಾದಿ ಸುಗಮವಲ್ಲ, ಛಲವಿರಬೇಕು: ಡಾ.ಎ.ಬಿ.ರಾಮಚಂದ್ರ​ಪ್ಪ The path to success is not easy, one must be persistent: Dr. A.B. Ramachandrappa

ತಾವರಗೇರಾ 09: ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇತರೆ ವಿದ್ಯಾರ್ಥಿಗಳಿಗೆ ಇದು ಪ್ರೇರಣೆಯಾಗುತ್ತದೆ ಸಾಧನೆಯ ಹಾದಿ ಸುಗಮವಲ್ಲ. ಛಲವಿದ್ದವರು ಮಾತ್ರ ಆ ಹಾದಿಯಲ್ಲಿ ಸಾಗಲು ಸಾಧ್ಯ ಎಂದು ಮಾನವ ಬಂಧುತ್ವ ವೇದಿಕೆ ಕರ್ನಾಟಕ  ಸಂಚಾಲಕರಾದ ಡಾ. ಎ.ಬಿ.ರಾಮಚಂದ್ರಪ್ಪನವರು ಹೇಳಿದರು.  

ಅವರು ಕೊಪ್ಪಳ ಜಿಲ್ಲೆಯ ತಾವರಗೇರಾ ಬುದ್ಧ ವಿವಾರ ತರಬೇತಿ ಕೇಂದ್ರದಲ್ಲಿ  ಕರ್ನಾಟಕ ಪ್ರತಿಭಾ ಆಕಾಡಮಿ (ರಿ) ಕೊಪ್ಪಳ ಜಿಲ್ಲಾ ಘಟಕ ದಿಂದ ನಡೆದ 2025 ನೇ ಸಾಲಿನ ಎಸ್‌. ಎಸ್‌. ಎಲ್‌. ಸಿ.ಹಾಗೂ ದ್ವಿತೀಯ ಪಿಯುಸಿ  ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ  ಅಭಿನಂದನಾ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ನಮ್ಮ ಕ್ರಿಯೆಗಳಿಗೆ ಪೂರಕವಾಗಿ ಪ್ರತಿಕ್ರಿಯೆ ಇರುತ್ತದೆ. ಅದೇ ರೀತಿ ನಾವು ಅಪೇಕ್ಷೆ ಪಟ್ಟಂತ ಫಲಿತಾಂಶವನ್ನು ಪಡೆಯಲು ಅತೀ ವೇಗವಾಗಿ ಸಾಧನೆಯ ಹಾದಿಯಲ್ಲಿ ಸಾಗಬೇಕಾಗಿದೆ. ಪ್ರತಿಭೆ ಎಲ್ಲರಲ್ಲೂ ಇದೆ. ಆದರೆ ಆಧುನಿಕ ಜಗತ್ತಿನಲ್ಲಿ ಸ್ಪರ್ಧೆ ಅನಿವಾರ್ಯ. ಇವೆರಡರ ನಡುವೆ ಸಾಮಾಜಿಕ ಜವಾಬ್ದಾರಿಯ ಜೊತೆಯಲ್ಲಿ ಉನ್ನತ ಶಿಕ್ಷಣಕ್ಕಾಗಿ ಹೋದರೆ ಮಾತ್ರ ಯಶಸ್ಸು ಸಾಧ್ಯವೆಂದು ಹೇಳಿದರು.ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡು ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಅವರು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಸಮ್ಮ ಮರಿಯಪ್ಪ ತಾಳಕೇರಿ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷರಾದ ಶುಕರಾಜ ತಾಳಕೇರಿರವರು ಮಾತನಾಡುತ್ತಾ ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ ಮತ್ತು ನೈತಿಕ ಮೌಲ್ಯ ಇರಬೇಕು. ಮರಳಿ ಯತ್ನವ ಮಾಡು ಎಂಬ ಮಾತಿನಂತೆ ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಬಲ್ಲದು. ಅದರ ಜೊತೆಗೆ ಜೀವನದ ಸವಾಲನ್ನು ಎದುರಿಸುವ ಶಕ್ತಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಸಾಧನೆಯ ಮೆಟ್ಟಿಲನ್ನು ಏರುವ ತುಡಿತ ನಮ್ಮಲ್ಲಿರಬೇಕು. ನಮ್ಮ ಸಾಧನೆ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಬೇಕು ಎಂದು ಹೇಳಿದರು.  

ಉದ್ಘಾಟಕರಾದ ರಾಮಣ್ಣ ಕಲ್ಲಣ್ಣವರ ಮಾತನಾಡಿ ಕೊಪ್ಪಳ ಜಿಲ್ಲೆಗೆ ಅತ್ಯುತ್ತಮ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.  

ಉಪನ್ಯಾಸಕರು, ಚಿಂತಕರು, ಲೇಖಕರು, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು. ಕೊಪ್ಪಳ ವಿಶ್ವವಿದ್ಯಾಲಯದ ಡಾ. ಡಾಣಿ, ಲೇಖಕರಾದ ಜಾಹಿರಾನ್ ಆರ್ ಕೊಳೂರು, ಸಾವಿತ್ರಿ ಮುಜುಮದಾರ್, ಲಿಂಗರಾಜ ನವಲಿ. ಡಾ.ಲಿಂಗರಾಜ ಜಂಗಮರಹಳ್ಳಿ. ಭೀಮಪ್ಪ ಹವಳಿ. ಪ್ರೇಮಾ ಮುದಗಲ್‌.ರತ್ನಮ್ಮ ರತ್ನಾಕರ್ ತಳವಾರ. ಮಲ್ಲಿಕಾರ್ಜುನ ಗೋನಾಳ. ಮೋನಾಕ್ಷಿ ಸಾಸ್ವಿಹಾಳ. ಬೆಟ್ಟಪ್ಪ ಯತ್ನಟ್ಟಿ. ಬಸವಂತಪ್ಪ ಚಹ್ವಾಣ್‌. ಈಶಪ್ಪ ದೊಡ್ಡಮನಿ. ರಣದಪ್ಪ ಸಂಕಣವರ್‌. ಹನಮಂತಪ್ಪ ಭಜಂತ್ರಿ. ಹನಮಂತಪ್ಪ ಐಹೊಳಿ, ರಾಮಣ್ಣ ಬೇರಗಿ ಸೇರಿದಂತೆ ಇತರರಿದ್ದರು. ಡಾ.ಯರಿಸ್ವಾಮಿ ಕಾರ್ಯಕ್ರಮಕ್ಕೆ ಸ್ವಾಗತಿಸಿ ನಿರೂಪಣೆ ಮಾಡಿದರು.