ಸಿದ್ದಾರೂಢರ ಸತ್ಸಂಗದಿಂದ ಜೀವನ ಮುಕ್ತಿಗೆ ದಾರಿ : ಸಹಜಾನಂದ ಸ್ವಾಮೀಜಿ
The path to liberation in life is through the satsang of the Siddhas: Sahajananda Swamiji
ಲೋಕದರ್ಶನ ವರದಿ
ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ 247 ನೇ ಸತ್ಸಂಗ
ಸಿದ್ದಾರೂಢರ ಸತ್ಸಂಗದಿಂದ ಜೀವನ ಮುಕ್ತಿಗೆ ದಾರಿ : ಸಹಜಾನಂದ ಸ್ವಾಮೀಜಿ
ಮಹಾಲಿಂಗಪುರ : ತಂದೆ ತಾಯಿ ಗುರುವಿಗೆ ಹೆಸರು ತರುವ ಕೆಲಸ ಮಾಡಿ ದಾನ ಧರ್ಮ ಮಾಡಿ ಸಮಾಜದ ಋಣ ತೀರಿಸಬಹುದು ಇದರಿಂದ ನಮಗೆ ಪುಣ್ಯ ಪ್ರಾಪ್ತಿಯಾಗಿ ಮೋಕ್ಷ ದೊರೆಯುತ್ತದೆ. ಈ ಎಲ್ಲ ಸಾಧನೆಗಾಗಿ ಸತ್ಸಂಗ ಉತ್ತಮ ಆಯ್ಕೆ ಸತ್ಸಂಗದಲ್ಲಿ ಭಾಗವಹಿಸುವದರಿಂದ ಉತ್ತಮ ಜೀವನಕ್ಕೆ ದಾರಿ ದೀಪವಾಗುತ್ತದೆ ಎಂದು ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದ ಪ ಪೂ ಶ್ರೀ ಸಹಜಾನಂದ ಮಹಾಸ್ವಾಮಿಗಳು ಹೇಳಿದರು.
ಅವರು ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ನಡೆದ ಸಿದ್ದಾರೂಢರ 247 ನೇ ಸತ್ಸಂಗದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಾದದ ಅಮೃತವಾಣಿ ಕರುಣಿಸಿ ಮಾತನಾಡಿ. ಸತ್ಯದ ಒಡನಾಟವೇ ಸತ್ಸಂಗ.ಇದು ಸಂಪೂರ್ಣ ಸತ್ಯವನ್ನು ಪ್ರತಿನಿಧಿಸುತ್ತದೆ. ನೇರವಾಗಿ ನಾವು ದೇವರೊಂದಿಗೆ ಸಂಪರ್ಕವನ್ನು ಹೊಂದುವುದು ಸಾಧ್ಯವಿಲ್ಲ ಹಾಗಾಗಿ ದೇವರ ರೂಪದಂತೆ ಭೂಮಿಯ ಮೇಲೆ ಇರುವ ಸದ್ಗುಣ ಸಾಧು ಸಂತರ ಸಹವಾಸ ಮಾಡುವುದು ಉತ್ತಮವಾದ ಸತ್ಸಂಗವಾಗಿದೆ. ಪ್ರತಿ ಮನುಷ್ಯ ಒಂದಲ್ಲ ಒಂದು ರೀತಿ ಉತ್ತಮ ನೆಮ್ಮದಿಯುಕ್ತ ಜೀವನಕ್ಕೆ ಸತ್ಸಂಗಗಳು ಬಹಳಷ್ಟು ಸಹಕಾರಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿದ್ದರಾಮ ಸ್ವಾಮೀಜಿ ಶರಣರ ಬದುಕು ಮನುಕುಲಕ್ಕೆ ದಾರಿ ದೀಪ ಅವರ ಉಪದೇಶದಂತೆ ನಡೆದರೆ ಸುಖ, ಶಾಂತಿ ನೆಮ್ಮದಿ ಸಾಧ್ಯ. ನೆಮ್ಮದಿ ಇಲ್ಲದ ಬದುಕು ನರಕಕ್ಕೆ ಸಮ ಸುಖಿ ಕುಟುಂಬ ಸ್ವರ್ಗಕ್ಕೆ ಸಮ ಅಧ್ಯಾತ್ಮ ಎನ್ನುವುದು ಮನುಷ್ಯನಿಗೆ ಜ್ಞಾನ ಮತ್ತು ನೆಮ್ಮದಿ ನೀಡುತ್ತದೆ.
ಮನುಷ್ಯ ಮಾನಸಿಕ ಜಂಜಾಟದಿಂದ ಮುಕ್ತನಾಗಿ ಸನ್ಮಾರ್ಗದಲ್ಲಿ ನಡೆಯಲು ಸಹಕರಿಯಾಗುತ್ತದೆ, ಸನ್ಮಾರ್ಗದಲ್ಲಿ ನಡೆದರೆ ಸ್ವರ್ಗ ಪ್ರಾಪ್ತಿಯಗುತ್ತದೆ ಸ್ವರ್ಗ ಎಲ್ಲಿಯೂ ಇಲ್ಲ ಅದು ಸುಖವಾದ ಸಂಸಾರದಲ್ಲಿದೆ, ಮನುಷ್ಯ ಉತ್ತಮ ಜೀವನಕ್ಕಾಗಿ ಒಂದ್ದಿಲ್ಲಾ ಒಂದು ರೀತಿ ಸತ್ಸಂಗದಲ್ಲಿ ಭಾಗವಹಿಸಬೇಕು.ಎಂದರು.
ನಂತರ ಮಾತನಾಡಿದ ಶರಣರಾದ ಕಂಕಣವಾಡಿಯ ಮಾರುತಿ ಶರಣರು ನಾವು ಮಾಡುವ ಕಾರ್ಯ ದೇವರಿಗೆ ಮೆಚ್ಚುಗೆಯಾದರೆ ಅದು ನಮ್ಮ ಗೆಲುವು ಯಾರನ್ನು ಮೆಚ್ಚುಸುವ ಅವಶ್ಯಕತೆ ಇಲ್ಲ ನಾವು ನಮ್ಮ ಮೇಲೆ ವಿಶ್ವಾಸ ಇಟ್ಟುಕೊಂಡರೆ ನೆಮ್ಮದಿ ಬದುಕು ಕಾಣಬಹುದು, ಇದು ಆಧ್ಯಾತ್ಮದ ಶಕ್ತಿ. ಮಾನಸಿಕ ನೆಮ್ಮದಿ ಹೊಂದಲು ಪ್ರತಿಯೊಬ್ಬರಿಗೆ ಸತ್ಸಂಗಗಳು ಪಾಲ್ಗೊಳಬೇಕು ಇದರಿಂದ ಸಂಸ್ಕಾರ, ಸಂಸ್ಕೃತಿ, ಬೆಳೆಯುತ್ತದೆ ಎಂದರು.
ಈ ಸಂಧರ್ಭದಲ್ಲಿ ಮಲ್ಲಪ್ಪ ಕಟಗಿ ಮಾತನಾಡಿದರು ಮುಖಂಡರಾದ ಲಕ್ಕಪ್ಪ ಚಮಕೇರಿ, ಕಲ್ಲಪ್ಪ ಚಿಂಚಲಿ, ಯಲ್ಲನಗೌಡ ಪಾಟೀಲ, ಮಹೇಶ ಇಟಕನವರ, ಗೌಡಪ್ಪಗೌಡ ಪಾಟೀಲ, ಶ್ರೀಶೈಲಪ್ಪ ಉಳ್ಳಾಗಡ್ಡಿ,ಮಹಾಲಿಂಗ ಹೊಸೂರ, ಮಹಾದೇವ ಮರೆಗುದ್ದಿ, ಬಸರಾಜ್ ಮೇಟಿ,ಮಹಾಲಿಂಗ ಕರೆಹೊನ್ನ, ಮಹೇಬೂಬ ಸನದಿ, ಶಂಕರ ನಿಲಾರಿ, ಭೀಮಪ್ಪ ಗಜಾಗೋಳ, ಎಸ್ ಕೆ ಗಿಂಡೆ,ಮಲ್ಲಪ್ಪ ಮುಗಳಖೋಡ, ಮಹಾಲಿಂಗ ಬಿಜ್ಜಲಭಾವಿ ಕಾರ್ಯಕ್ರಮವನ್ನು ಹುಮಾಯಿನ ಸುತಾರ ನಿರೂಪಿಸಿ ವಂದಿಸಿದರು.23 ನೇ ಅಧ್ಯಾಯವನ್ನು ಶ್ರೀಮತಿ ಜಯಶ್ರೀ ಸೋರಗಾಂವಿ ಪಾರಾಯಣ ಮಾಡಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 