ಧಾರವಾಡ 24: ಗ್ರಾಹಕರು ಬಳಸುವ ಪ್ರತಿ ವಸ್ತುವಿನಲ್ಲೂ ಮೋಸ, ವಂಚನೆ ಆಗದಂತೆ ಎಚ್ಚರ ವಹಿಸಲು ಅವರಲ್ಲಿ ಜಾಗೃತಿ ಮೂಡಿಸುವುದು ಒಂದೇ ಮಾರ್ಗೋ ಪಾಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಈಶಪ್ಪ ಕೆ. ಭೂತೆ ಹೇಳಿದರು.
ಅವರು ಇಂದು ಬೆಳಿಗ್ಗೆ ನಗರದ ವಿಶ್ವವಿದ್ಯಾಲಯದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಆಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕವಿವಿಯ ರಾಷ್ಟ್ರೀಯ ಸೇವಾ ಯೋಜನೆ ಕೋಶ, ವಿಶ್ವವಿದ್ಯಾಲಯದ ಶಿಕ್ಷಣ ಮಹಾವಿದ್ಯಾಲಯ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಮತ್ತು ಜನಾದೇಶ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಸ್ತುಗಳ ಗುಣಮಟ್ಟ, ಉತ್ಪಾದನೆ, ಮಾರಾಟ ವ್ಯವಸ್ಥೆ, ಆಹಾರ ಸುರಕ್ಷತೆ ಇತ್ಯಾದಿಗಳ ಕುರಿತು ಜನಸಾಮಾನ್ಯರಿಗೆ ತಿಳುವಳಿಕೆ ನೀಡಬೇಕು. ಬಳಕೆಗೆ ಯೋಗ್ಯವಲ್ಲದ, ಗುಣಮಟ್ಟ ಹೊಂದಿರದ ಅನೇಕ ವಸ್ತುಗಳು ಮಾರುಕಟ್ಟೆಗೆ ಬಂದಿರುತ್ತವೆ. ಇವುಗಳಿಂದ ಆರೋಗ್ಯದ ಮೆಲೆ ತೀವ್ರ ಪರಿಣಾಮ ಉಂಟಾಗಿ ಆಥರ್ಿಕ, ಆರೋಗ್ಯ ನಷ್ಟವಾಗುತ್ತದೆ ಎಂದರು.
ಯಾವುದೇ ವಸ್ತುಗಳ ಖರೀದಿ ಪೂರ್ವದಲ್ಲಿ ಗ್ರಾಹಕ ಯಾವ ರೀತಿ ಅವುಗಳ ಪರೀಕ್ಷೆ ಮಾಡಿ, ಗುಣಮಟ್ಟತೆಯನ್ನು ಖಾತ್ರಿ ಮಾಡಿಕೊಳ್ಳಬೇಕೆಂದು ಜನಸಾಮಾನ್ಯರಿಗೆ ತಿಳುವಳಿಕೆ ನೀಡಬೇಕು. ಆ ನಿಟ್ಟಿನಲ್ಲಿ ವಿವಿಧ ಹಂತದಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಅಯೋಜಿಸಬೇಕೆಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ ಈಶಪ್ಪ ಭೂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಗ್ರಾಹಕರ ಹಿತರಕ್ಷಣಾ ಕಾನೂನು ಜಾರಿಯಾಗಿ 30 ವರ್ಷ ಕಳೆದರೂ ಸಹ ಗ್ರಾಹಕ ಸಮರ್ಪಕವಾಗಿ ಕಾಯ್ದೆ ಲಾಭ ಪಡೆದುಕೊಳ್ಳುತ್ತಿಲ್ಲ. ಪ್ರತಿ ಹಂತದಲ್ಲೂ ಗ್ರಾಹಕ ವಸ್ತು ಖರೀದಿಯಲ್ಲಿ ಮೋಸ ಹೋಗುವ ಸಾಧ್ಯತೆ ಇರುತ್ತದೆ ಎಂದರು.
ಉತ್ಪನ್ನಗಳ ಬೆಲೆ, ಉತ್ಪಾದಿಸಿದ ವರ್ಷ, ಅದರಲ್ಲಿ ಬಳಸಿದ ಇತರ ಆಹರ ಉತ್ಪನ್ನ, ರಾಸಾಯನಿಕಗಳ ಬಗ್ಗೆ ಸರಿಯಾದ ಮಹಿತಿ ಗ್ರಾಹಕರಿಗೆ ಲಭ್ಯವಿರುವುದಿಲ್ಲ. ತೂಕ, ಅಳತೆಯಲ್ಲಿ ವಂಚಿಸುವ ಸಾಧ್ಯತೆ ಇರುತ್ತದೆ. ಆಹಾರ ಕಲಬೆರಕೆ ಗುರುತಿಸಿದರೂ ಗ್ರಾಹಕರು ಮುಂದೆ ಬಂದು ಯಾವುದೇ ದೂರು ನೀಡಲು ಹಿಂಜರಿಯುತ್ತಾರೆ. ಇದರಿಂದಾಗಿ ಗುಣಮಟ್ಟದ, ಸುರಕ್ಷಿತವಾದ ಉತ್ಪನ್ನಗಳು ಗ್ರಾಹಕರಿಗೆ ಸಿಗುವುದು ಕಷ್ಟವಾಗಿದೆ ಎಂದರು.
ಗ್ರಾಹಕ ಹಿತರಕ್ಷಣೆ ಕಾಪಾಡಲು ಜಿಲ್ಲಾ, ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಗ್ರಾಹಕ ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತವೆ. ಆಹಾರ ಕಲಬೆರಕೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ರಹಿತ ಉತ್ಪಾದನೆ ತಡೆಯಲು ಕಾಯ್ದೆ ಜಾರಿಯಾಗಿದೆ. ಇವುಗಳ ಸಮರ್ಪಕ ಬಳಕೆಯಿಂದ ಮಾತ್ರ ಗ್ರಾಹಕರ ಹಿತ ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಾಲಾ ಕಾಲೇಜು, ವ್ಯಾಪಾರಿಗಳ ಸಂಘ ಸದಸ್ಯರು, ಮಹಿಳಾ ಗುಂಪು, ಗ್ರಾಹಕ ಒಕ್ಕೂಟ, ಬಳಕೆದಾರರ ಸಂಘ ಸೇರಿದಂತೆ ವಿವಿಧ ಜನಸಮೂಹಗಳಿಗೆ ಮಾಹಿತಿ, ಪ್ರಾತ್ಯಕ್ಷಿಕೆ, ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಗ್ರಾಹಕರನ್ನು ಸಶಕ್ತಿಕರಣಗೊಳಿಸಬೇಕೆಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಚಿನ್ನಣ್ಣವರ ಆರ್.ಎಸ್. ಮಾತನಾಡಿ, ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿ ಮಾಡಿದಾಗ ಕಡ್ಡಾಯವಾಗಿ ರಶೀದಿ ಪಡೆದಾಗ ಮಾತ್ರ ಗ್ರಾಹಕ ರಕ್ಷಣಾ ಕಾಯಿದೆಗೆ ಒಳಪಡುತ್ತದೆ. ಹಾಗೂ ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಂಡು ಕಾಯಿದೆಯನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಜಿಲ್ಲಾ ಗ್ರಾಹಕ ದೂರುಗಳ ಪರಿಹಾರ ವೇದಿಕೆ ಸದಸ್ಯ ಬಿ.ಎಸ್. ಕೇರಿ ಮಾತನಾಡಿ, ನಾವು ದೇಶದ ಯಾವುದೇ ಸ್ಥಳದಲ್ಲಿ ಒಂದು ವಸ್ತುವನ್ನು ಖರೀದಿ ಮಾಡಿದರೆ, ಅದರ ಗುಣಮಟ್ಟ ಸರಿಯಿಲ್ಲವೆಂದು ಅಥವಾ ಮೋಸ ಹೋಗಿದ್ದರೆ ಗ್ರಾಹಕ ರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲನ್ನು ನಾವು ಇದ್ದ ಸ್ಥಳದಲ್ಲಿಯೇ ಮಾಡಬಹದು ಎಂದರು.
ಆಹಾರ ತಜ್ಞ ಬಸವರಾಜ ಬಿಳೇಯಂಗಡಿ ಆಹಾರ ಕಲಬೆರಕೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಬಸವಪ್ರಭು ಹೊಸಕೇರಿ, ಎಂ. ಆರ್. ಘೋಡಕೆ ಹಾಗೂ ಬಿ.ಎಡ್. ಕಾಲೇಜಿನ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ಧೆ ಶಕ ಸದಾಶಿವ ಮರ್ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಭಾ ಗುಡ್ಡದಾನ್ವೇರಿ ಸ್ವಾಗತಿಸಿದರು. ಡಾ. ಎಸ್.ಎಸ್. ಸಮಸಗಿ ನಿರೂಪಿಸಿದರು. ಕವಿವಿಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಡಾ. ಎಂ.ಬಿ. ದಳಪತಿ ವಂದಿಸಿದರು.
ಕಾರ್ಯಕ್ರಮ ಪೂರ್ವದಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ಈಶಪ್ಪ ಭೂತೆ ಹಾಗೂ ಜಿಲ್ಲಾಧಿಕಾರಿ ದೀಪಾ ಚೋಳನ್ ಆಹಾರ ಕಲಬೆರಕೆ ಕುರಿತು ಹಾಗೂ ಮಾಪನಗಳ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿದರು.