ದರ ನಿಗದಿ ಮಾಡಬೇಕೆಂದು ಮುಂದುವರೆದ ಧರಣಿ ಸತ್ಯಾಗ್ರಹ
The ongoing sit-in and satyagraha demanding price fixing
ಯರಗಟ್ಟಿ, 07 : ಪ್ರತಿ ಟನ್ ಕಬ್ಬಿಗೆ ?3500 ದರ ನಿಗದಿ ಮಾಡಬೇಕೆಂದು ಒತ್ತಾಯಿಸಿ, ನಾನಾ ರೈತ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಕಬ್ಬು ಬೆಳೆಗಾರರು ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತಿದಲ್ಲಿ 6ನೇ ದಿನದ ಧರಣಿ ಸತ್ಯಾಗ್ರಹ ಆರಂಭಿಸಿದರು. ಧರಣಿಯಲ್ಲಿ ರೈತರು ಭಜನೆ, ಡೊಳ್ಳು ನಾದ, ಪದಗೀತೆಗಳ ಮೂಲಕ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲೇ ಅಡುಗೆ ಮಾಡಿ ಊಟ ಮಾಡುವ ಮೂಲಕ ತಮ್ಮ ಹೋರಾಟವನ್ನು ಮುಂದುವರಿಸಿದರು.ಈ ವೇಳೆ ಮಹಾಂತೇಶ ತೋಟಗಿ, ಮಂಜುಳಾ ಅಕ್ಕಿ, ರಾಯಪ್ಪ ಕರಿಗಾರ, ರಂಗಪ್ಪ ಗಂಗರಡ್ಡಿ, ಯಮನಪ್ಪ ಮಾಳಗಿ, ಯಕ್ಕೇರೆಪ್ಪ ತಳವಾರ, ರಾಮಕೃಷ್ಣ ಎಳ್ಳಮ್ಮಿ, ಕೃಷ್ಣಾ ಚೌವರಡ್ಡಿ, ಗಿರೇಪ್ಪ ಗಂಗರೆಡ್ಡಿ, ಯಕ್ಕೇರೆಪ್ಪ ಮಾಳಗಿ, ಪುಟ್ಟು ಅರಳಿಕಟ್ಟಿ, ರಮೇಶ ಕಮಕೇರಿ, ಬಸಪ್ಪ ಅರಳಿಕಟ್ಟಿ, ರಮೇಶ ಬಾಲರೆಡ್ಡಿ ಸೇರಿದಂತೆ ಅನೇಕರು ರೈತ ಮುಖಂಡರು ಉಪಸ್ಥಿತರಿದ್ದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 