ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಪತ್ರಿಕೆಗಳ ಸಂಖ್ಯೆ ಹೆಚ್ಚಾಗಲಿ- ಬಸವಶಾಂತಲಿಂಗ ಸ್ವಾಮಿಜಿ
The number of newspapers should increase to maintain the health of society - Basavashantalinga Swami
ಲೋಕದರ್ಶನ ವರದಿ
ಹಾವೇರಿ 21: ಸಮಾಜದ ಸ್ವಾಸ್ಥ್ಯ ಕಾಪಾಡುವ ಹಾಗೂ ಜನರ ಪರವಾಗಿ ನಿರಂತರವಾಗಿ ಧ್ವನಿಯಾಗಿ ಕೆಲಸ ಮಾಡಲು ಪತ್ರಿಕೆಗಳ ಸಂಖ್ಯೆ ಹೆಚ್ಚಾಗಲಿ ಎಂದು ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮಿಗಳು ಹೇಳಿದರು. ಇಲ್ಲಿನ ಹೊಸಮಠದ ಆವರಣದಲ್ಲಿ ಹೋರಾಟಗಾರ ಎನ್.ಎನ್.ಗಾಳೆಮ್ಮನವರ ಅವರ ಸಂಪಾಕತ್ವದಲ್ಲಿನ ನ್ಯಾಯದಪರ ಪಾಕ್ಷಿಕ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಕೋರಿ ಶ್ರೀಗಳು ಆರ್ಶಿವದಿಸಿದರು.
ಪತ್ರಿಕೆಗಳು ಸಮಾಜದ ಪರ ಹಾಗೂ ಸ್ವರವಾಗಿ ಕೆಲಸ ಮಾಡಿದರೆ ಸಮೃದ್ಧ ಸಮಾಜ ಕಟ್ಟಲು ಸಾಧ್ಯವಾಗಲಿದೆ.ಯುಗಾದಿ ಸುದಿನ ಹೊಸ ಪ್ರಯತ್ನವಾಗಿ ಎನ್.ಎನ್ ಗಾಳೆಮ್ಮನವರ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಗುತ್ತಿದ್ದು,ಪತ್ರಿಕೆಗೆ ಎಲ್ಲಾ ರೀತಿಯ ಬೆಂಬಲ ಸಹಕಾರ ನೀಡುವಂತಾಗಲಿ.ನ್ಯಾಯದಪರ ಪತ್ರಿಕೆ ಹೆಸರೇ ಹೇಳುವಂತೆ ಎಲ್ಲರ ಧ್ವನಿಯಾಗಿ ಎಲ್ಲರ ಪರವಾಗಿ ಬೆಳೆಯಲಿ.ಪತ್ರಿಕೆ ಯಶಸ್ವಿಯಾಗಲು ಎಲ್ಲರೂ ಸಹಕಾರ ನೀಡಿರಿ ಎಂದು ಪತ್ರಿಕೆ ಶುಭ ಕೋರಿ ಶ್ರೀಗಳು ಆರ್ಶಿವಾದ ಮಾಡಿದರು.
ಹಿರಿಯ ಪತ್ರಕರ್ತರಾದ ನಿಂಗಪ್ಪ ಚಾವಡಿ ಮಾತನಾಡಿ ಪತ್ರಿಕೆ ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ.ತುಂಬಾ ಶ್ರಮದ ಜೊತೆಗೆ ಸುದ್ದಿ ಹಾಗೂ ವಿಷಯ ಸಂಗ್ರಹಣೆಯ ಪಾರದರ್ಶಕತೆಯು ಬೇಕಾಗುತ್ತಿದೆ.ಎನ್.ಎನ್ ಗಾಳೆಮ್ಮನವರ ಅವರು ನಮ್ಮೊಂದಿಗೆ ಒಡನಾಡಿಗಳಾಗಿದ್ದು,ಕಠಿಣ ಪರಿಶ್ರಮವಹಿಸಿ ಪತ್ರಿಕೆ ಹೆಚ್ಚು ಮನ್ನಣೆ ಪಡೆಯಲಿ ಎಂದು ಶುಭ ಹಾರೈಸಿದರು. ಜಿಲ್ಲೆಯ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ ಪತ್ರಿಕೆ ಹಾಗೂ ಸಾಹಿತ್ಯ ಎರಡು ಒಟ್ಟಾಗಿ ಸಮಾಜ ತಿದ್ದುವ ಕೆಲಸ ಮಾಡಬೇಕಿದೆ.ನ್ಯಾಯದಪರ ಪತ್ರಿಕೆ ಹೆಚ್ಚು ಮನ್ನಣೆ ಪಡೆಯಲಿ ಎಂದು ಶುಭ ಕೋರಿದರು.
ಶಿಕ್ಷಣ ಪ್ರೇಮಿಗಳು ಹಾಗೂ ಹಿರಿಯರಾದ ಹನಮಂತಗೌಡ ಗೊಲ್ಲರ ಮಾತನಾಡಿ ಜನರಪರ ಹಾಗೂ ನ್ಯಾಯದಪರವಾಗಿ ಸಮಾಜದ ಜನರಿಗೆ ಉತ್ತಮ ಸಂದೇಶ ನೀಡುವ ಪತ್ರಿಕೆ ಇದಾಗಲಿ.ಪಾಕ್ಷಿಕ ಪತ್ರಿಕೆ ನಮ್ಮ ಜಿಲ್ಲೆಗೆ ಅವಶ್ಯಕತೆ ಇತ್ತು.ನ್ಯಾಯದಪರ ಪತ್ರಿಕೆ ಯಶಸ್ವಿಯಾಗಿ ಮುನ್ನಡಿಯಲಿ ಎಂದು ಶುಭ ಕೋರಿದರು. ಬಂಕಾಪೂರ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ರಮೇಶ ತೆವರಿ ಮಾತನಾಡಿ ನ್ಯಾಯದಪರ ಪತ್ರಿಕೆ ಸಮಾಜದ ಜನರ ಪರವಾಗಿ ಕೆಲಸ ಮಾಡಲಿ.ಎನ್.ಎನ್ ಗಾಳೆಮ್ಮನವರ ಶ್ರಮದಿಂದ ಹಾಗೂ ಎಲ್ಲರ ಸಹಕಾರದಿಂದ ರಾಜ್ಯಮಟ್ಟದಲ್ಲಿಯೂ ಪತ್ರಿಕೆ ಪ್ರಭಾವ ಬೆಳಿಸಿಕೊಳ್ಳಲಿ ಎಂದು ಸಂಪಾದಕರಿಗೆ ಗೌರವಿಸಿ ಶುಭ ಕೋರಿದರು.
ಸಂಪಾದಕರು ಮಾತನಾಡಿ ಪತ್ರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ.ತಮ್ಮೆಲ್ಲರ ಸಹಕಾರ,ಸಲಹೆ ಪತ್ರಿಕೆಗೆ ಸದಾ ಇರಲಿ.ಪತ್ರಿಕೆ ಬೆಳೆಸಲು ತಮ್ಮೆಲ್ಲರ ಹಾಗೂ ಜನರ ಮಾರ್ಗದರ್ಶನ ನಿರಂತರವಾಗಿರಲಿ ಎಂದರು.ಇದೇ ಅವಧಿಯಲ್ಲಿ ನ್ಯಾಯದಪರ ಪತ್ರಿಕೆ ಸಂಪಾದಕರಿಂದ ಶ್ರೀ ಬಸವಶಾಂತಲಿಂಗ ಸ್ವಾಮಿಗಳಿಗೆ ಹಾಗೂ ಹಿರಿಯ ಸಾಹಿತಿಗಳಾದ ಸತೀಶ ಕುಲಕರ್ಣಿ ಅವರಿಗೆ ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಮುಖಂಡರಾದ ವೀರಣ್ಣ ಪಾಟೀಲ,ಯುವ ಉದ್ದಿಮೆಗಳಾದ ಪರಶುರಾಮ ಹರ್ಲಾಪುರ,ಅಂಜುಮನ್ ಸಮಿತಿ ಸದಸ್ಯರಾದ ಜಮೀರ ಜಿಗಿರಿ,ತೆವರಮೆಳ್ಳಿಹಳ್ಳಿ ಸಹಕಾರ ಸಂಘದ ನೂತನ ಸದಸ್ಯರಾದ ಜಿ ಎಸ್ ನದಾಫ,ಪತ್ರಕರ್ತರಾದ ನಿಂಗಪ್ಪ ಆರೇರ,ತಿರಕಪ್ಪ ಬಾತಿ ಸೇರಿದಂತೆ ಅನೇಕರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 