ಔರಂಗಾಬಾದ್‌ನಲ್ಲಿ ಸೋಂಕಿತರ ಸಂಖ್ಯೆ 3632ಕ್ಕೆ ಏರಿಕೆ

ಔರಂಗಾಬಾದ್, ಜೂ.22,ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಹೊಸದಾಗಿ 102 ಕೊರೊನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 3,632ಕ್ಕೆ ಏರಿಕೆಯಾಗಿದೆ.1968 ಸೋಂಕಿತರು ಗುಣಮುಖರಾಗಿದ್ದು, 191 ಮಂದಿ ಸಾವನ್ನಪ್ಪಿದ್ದಾರೆ.ಪ್ರಸ್ತುತ 1473 ಸಕ್ರಿಯ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 102 ಹೊಸ ಸೋಂಕಿತರಲ್ಲಿ 49 ಮಂದಿ ಮಹಿಳೆಯರು.ಜಿಲ್ಲೆಯಲ್ಲಿ ಭಾನುವಾರ ಅತಿ ಹೆಚ್ಚು 170 ಸೋಂಕು ಪ್ರಕರಣ ಪತ್ತೆಯಾಗಿದ್ದು, ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.