ಅಮೆರಿಕ ಲಕ್ಷದ ಸನಿಹಕ್ಕೆ ಸಾವಿನ ಸಂಖ್ಯೆ, ನ್ಯೂಯಾರ್ಕ್ ಟೈಮ್ಸ್ ನಲ್ಲಿ ಸತ್ತವರ ಹೆಸರು
ನ್ಯೂಯಾರ್ಕ್, ಮೇ 25, ಅಮೆರಿಕದಲ್ಲಿ ಕರೋನ ಸೋಂಕಿನಿಂದ ಮೃತಪಟ್ವರ ಸಂಖ್ಯೆ ಒಂದು ಲಕ್ಷದ ಸಮೀಪಕ್ಕೆ ಬಂದು ನಿಂತಿದೆ. ನ್ಯೂಯಾರ್ಕ್ ಟೈಮ್ಸ್ ನ ಮೊದಲ ಪುಟದಲ್ಲಿ ದೇಶದಲ್ಲಿ ಕರೋನ ದಿಂದ ಮೃತಪಟ್ಟ 1,000 ಜನರ ಹೆಸರನ್ನು ಪ್ರಕಟಿಸಿ ಇದನ್ನು ಲೆಕ್ಕಹಾಕಲಾಗದ ನಷ್ಟ ಎಂದೂ ಪತ್ರಿಕೆ ಬರೆದಿದೆ. "ಅವರು ಕೇವಲ ಪಟ್ಟಿಯಲ್ಲಿ ಹೆಸರುಗಳು ಮಾತ್ರವಲ್ಲ ಅವರು ನಮ್ಮವರು" ಎಂದು ಪತ್ರಿಕೆ ಬಹಳ ಅಭಿಮಾನದಿಂದ ಸತ್ತವರನ್ನು ಸ್ಮರಿಸಿಕೊಂಡಿದೆ. ಅಮೆರಿಕದಲ್ಲಿ ಕರೋನವೈರಸ್ನ ಪ್ರಭಾವವನ್ನು ಸಂಖ್ಯೆಗಳಿಂದ ಮಾತ್ರ ಅಳೆಯಲು ಸಾಧ್ಯವಿಲ್ಲ ಎಂದು ಹೇಳಿದೆ .
ಕೇವಲ ಮೂರು ತಿಂಗಳ ಅವಧಿಯಲ್ಲಿ ದೇಶದಲ್ಲಿ ಕರೋನ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 100,000 ಕ್ಕೆ ತಲುಪಿದೆ - ಬಹುತೇಕ ಎಲ್ಲರೂ ಮೂರು ತಿಂಗಳ ಅವಧಿಯಲ್ಲಿ. ದಿನಕ್ಕೆ ಸರಾಸರಿ 1,100 ಕ್ಕೂ ಹೆಚ್ಚು ಸಾವುಗಳು, ಎಂದು ಪತ್ರಿಕೆ ನಾಲ್ಕು ಪೂರ್ಣ ಪುಟಗಳಲ್ಲಿ ಮುದ್ರಿಸಿದೆ. ಅಮೆರಿಕದಲ್ಲಿ ಈವರೆಗೆ ಕರೋನ ಸೊಂಕಿನಿಂದ 96,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಇದು ವಿಶ್ವದಲ್ಲೆ ಅತಿ ಹೆಚ್ಚು ಸಾವಿನ ಸಂಖ್ಯೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಹೇಳಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 