ಥಾಯ್ಲೆಂಡ್ ನಲ್ಲಿ ಕೊರೋನವೈರಸ್ ಪ್ರಕರಣಗಳ ಸಂಖ್ಯೆ 32 ಕ್ಕೆ ಏರಿಕೆ

ಬ್ಯಾಂಕಾಕ್, ಫೆ 8 :  ಥಾಯ್ಲೆಂಡ್ ನಲ್ಲಿ ಕೊರೋನವೈರಸ್ ಸೋಂಕು ಇನ್ನೂ ಏಳು ಜನರಿಗೆ ತಗುಲಿರುವುದು ದೃಢಪಡುವುದರೊಂದಿಗೆ ದೇಶದಲ್ಲಿ ದೃಢಪಟ್ಟ  ಸೋಂಕು ಪ್ರಕರಣಗಳ ಸಂಖ್ಯೆ 32 ಕ್ಕೆ ಏರಿದೆ ಎಂದು ಸಾರ್ವಜನಿಕ ಆರೋಗ್ಯ ಉಪ ಖಾಯಂ ಕಾರ್ಯದರ್ಶಿ ನರೋಂಗ್ ಸೈವಾಂಗ್ ಶನಿವಾರ ತಿಳಿಸಿದ್ದಾರೆ.

‘ ಆರೋಗ್ಯ ಇಲಾಖೆಯು ದೇಶದಲ್ಲಿ ಇನ್ನೂ ಏಳು ಕೊರೋನವೈರಸ್ ಪ್ರಕರಣಗಳನ್ನು ದೃಢಪಡಿಸಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ 32ಕ್ಕೆ ಏರಿವೆ. ಈ ಪೈಕಿ ಒಂಬತ್ತು ಮಂದಿ ಈಗಾಗಲೇ ಚೇತರಿಸಿಕೊಂಡಿದ್ದು ಆಸ್ಪತ್ರೆಗಳಿಂದ ಮನೆಗಳಿಗೆ ವಾಪಸ್ಸಾಗಿದ್ದಾರೆ ಎಂದು ಸೈವಾಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಏಳು ಹೊಸ ರೋಗಿಗಳ ಪೈಕಿ ಮೂವರು ಥಾಯ್ಲೆಂಡ್ ಪ್ರಜೆಗಳಾಗಿದ್ದರೆ ಇತರ ನಾಲ್ವರು ಚೀನಾ ಪ್ರಜೆಗಳಾಗಿದ್ದಾರೆ.ಸೋಂಕಿತ ಥಾಯ್ಲೆಂಡ್ ಪ್ರಜೆಯೊಬ್ಬರು ಚೀನಾದ ವೈರಸ್ ಪೀಡಿತ ವುಹಾನ್‌ನಿಂದ ಸ್ಥಳಾಂತರಗೊಂಡಿದ್ದು, ಆತ ಮನೆಗೆ ಮರಳಿದ ನಂತರ ಪ್ರತ್ಯೇಕವಾಗಿ ಇರಿಸಲಾಗಿತ್ತು. ಇತರ ಇಬ್ಬರು ಪ್ರವಾಸೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.

ಕೊರೋನವೈರಸ್ ಪ್ರಕರಣಗಳನ್ನು ದೃಢಪಡಿಸಿದ ಏಕೈಕ ಪರ್ಷಿಯನ್ ಕೊಲ್ಲಿ ರಾಷ್ಟ್ರವಾಗಿರುವ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಮತ್ತೆ ಎರಡು ಜನರಿಗೆ ಸೋಂಕು ತಗುಲುವುದರೊಂದಿಗೆ ದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ ಏಳಕ್ಕೆ ಏರಿದೆ.