ರಾಜ್ಯದಲ್ಲಿ ಕೊರೊನವೈರಸ್‍ನ ದೃಢಪಟ್ಟ ಪ್ರಕರಣಗಳ ಸಂಖ್ಯೆ 247 ಕ್ಕೆ ಏರಿಕೆ

ಬೆಂಗಳೂರು, ಏಪ್ರಿಲ್ 13, ಹೊಸದಾಗಿ 15 ಕೊವಿದ್‍-19 ಪ್ರಕರಣಗಳು ವರದಿಯಾಗುವುದರೊಂದಿಗೆ ರಾಜ್ಯದಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ ಸೋಮವಾರ ಇಲ್ಲಿ 247 ಕ್ಕೆ ಏರಿದೆ.ಅಧಿಕೃತ ಮೂಲಗಳ ಪ್ರಕಾರ, ಧಾರವಾಡದ ನಾಲ್ಕು ಪ್ರಕರಣಗಳನ್ನು ಹೊರತುಪಡಿಸಿ, ಮಂಡ್ಯ ಜಿಲ್ಲೆಯ ಒಂದೇ ಕುಟುಂಬದಲ್ಲಿ ಮೂರು ಪ್ರಕರಣಗಳು, ಬೆಳಗಾವಿಯಲ್ಲಿ ಮೂರು, ಬೀದರ್‍ ನಲ್ಲಿ 2 ಹಾಗೂ ಬಾಗಲಕೋಟೆ, ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಯಿಂದ ತಲಾ ಒಂದು ಪ್ರಕರಣಗಳು ಹೊಸದಾಗಿ ವರದಿಯಾಗಿವೆ.15 ಹೊಸ ಪ್ರಕರಣಗಳಲ್ಲಿ ಬೀದರ್, ಮಂಡ್ಯ ಮತ್ತು ಧಾರವಾಡ ಜಿಲ್ಲೆಗಳ ಐದು ಮಹಿಳಾ ರೋಗಿಗಳು ಸೇರಿದ್ದಾರೆ. ಸೋಂಕಿತ ಎಲ್ಲ ರೋಗಿಗಳನ್ನು ನಿಗದಿಪಡಿಸಿದ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.ರಾಜ್ಯದಲ್ಲಿ ಮಾರಕ ಸೋಂಕಿನಿಂದ ಆರು ಮಂದಿ ಬಲಿಯಾಗಿದ್ದರೆ, ಇತರ 59 ರೋಗಿಗಳು ಇದುವರೆಗೆ ಸಂಪೂರ್ಣ ಗುಣಮುಖರಾಗಿದ್ದಾರೆ.