ವಿಶ್ವದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1.02 ಕೋಟಿ

ನವದೆಹಲಿ, ಜೂನ್ 30 :ಕೊರೊನಾ ವೈರಸ್ “ಕೋವಿಡ್ -19”  ವಿಶ್ವಾದ್ಯಂತ ಹೆಚ್ಚುತ್ತಲೇ ಇದೆ ಮತ್ತು ಈ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ 1.02 ಕೋಟಿಗೆ ಏರಿದ್ದು,  ಈ ಮಹಾಮಾರಿಯಿಂದ ಮೃತರ  ಸಂಖ್ಯೆ ಐದು ಲಕ್ಷ ದಾಟಿದೆ. ಅಮೆರಿಕದ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್ಎಸ್ಇ) ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ವಿಶ್ವಾದ್ಯಂತ ಕೊರೊನಾ ಸೋಂಕಿನ ಸಂಖ್ಯೆ 1,02,75,599 ಕ್ಕೆ ತಲುಪಿದ್ದರೆ, 5,04,830 ಜನರು ಪ್ರಾಣ ಕಳೆದುಕೊಂಡಿದ್ದಾರೆ.ಸೋಂಕಿತರ, ಮೃತರ ಸಂಖ್ಯೆಯಲ್ಲಿ ಅಮೆರಿಕ ಹಾಗೂ ಬ್ರೆಜಿಲ್ ಮೊದಲ ಹಾಗೂ ಎರಡನೇ ಸ್ಥಾನದಲ್ಲಿದೆ. ಸೊಂಕಿತರ ಲೆಕ್ಕಾಚಾರದಲ್ಲಿ ರಷ್ಯಾ ಮೂರನೇ ಸ್ಥಾನದಲ್ಲಿದ್ದರೆ, ಸಾವಿನ ಸಂಖ್ಯೆಯಲ್ಲಿ ಇಂಗ್ಲೆಂಡ್ ನಂತರದ ಸ್ಥಾನದಲ್ಲಿದೆ.

ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ, 18,522 ಹೊಸ ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 5,66,840 ಕ್ಕೆ ಏರಿದೆ. ಇದೇ ಅವಧಿಯಲ್ಲಿ ಕೊರೊನಾ ವೈರಸ್‌ನಿಂದಾಗಿ 16,893 ಜನ ಜೀವ ಕಳೆದುಕೊಂಡಿದ್ದಾರೆ. ಸೋಂಕಿನ ವಿಷಯದಲ್ಲಿ ವಿಶ್ವದ ಅತಿ ಹೆಚ್ಚು ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.ಅಮೆರಿಕದಲ್ಲಿ 25,87,154 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಮತ್ತು 1,26,127 ಜನರು ಸಾವನ್ನಪ್ಪಿದ್ದಾರೆ. ಬ್ರೆಜಿಲ್ ನಲ್ಲಿ ಇದುವರೆಗೆ 13,68,195 ಜನರು ಪೀಡಿತರಾಗಿದ್ದು, 58,314 ಜನರು ಸಾವನ್ನಪ್ಪಿದ್ದಾರೆ.ರಷ್ಯಾದಲ್ಲಿ ಪೀಡಿತರ ಸಂಖ್ಯೆ 6,41,156 ಜನರಿದ್ದು, 9152 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಂಗ್ಲೆಂಡ್ ನಲ್ಲಿ ಈವರೆಗೆ 3,11,965 ಜನರು ಸೋಂಕಿಗೆ ಒಳಗಾಗಿದ್ದು, 43,575 ಜನರು ಸಾವನ್ನಪ್ಪಿದ್ದಾರೆ.ಪೆರುವಿನಲ್ಲಿ, ಸೋಂಕಿತರ ಸಂಖ್ಯೆ 2,82,365 ಮತ್ತು ಸತ್ತವರ ಸಂಖ್ಯೆ 9504 ಆಗಿದೆ. ಚಿಲಿಯಲ್ಲಿ ಈವರೆಗೆ 2,75,999 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಸತ್ತವರ ಸಂಖ್ಯೆ 5575 ಆಗಿದೆ.

ಸ್ಪೇನ್‌ನಲ್ಲಿ 28,346, ಇಟಲಿಯಲ್ಲಿ 2,40,436 ಜನರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದು, 34,744 ಜನರು ಸಾವನ್ನಪ್ಪಿದ್ದಾರೆ. ಕೊಲ್ಲಿ ರಾಷ್ಟ್ರ ಇರಾನ್‌ನಲ್ಲಿ ಸೋಂಕಿತರ ಸಂಖ್ಯೆ 225,205 ಕ್ಕೆ ಏರಿಕೆಯಾಗಿದ್ದು, 10,670 ಜನರು ಸಾವನ್ನಪ್ಪಿದ್ದಾರೆ.ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಎರಡು ಲಕ್ಷ ಮೀರಿದೆ. ಇಲ್ಲಿಯವರೆಗೆ 2,06,512 ಜನರು ಸೋಂಕಿಗೆ ಒಳಗಾಗಿದ್ದು, 4167 ಜನರು ಸಾವನ್ನಪ್ಪಿದ್ದಾರೆ. ಫ್ರಾನ್ಸ್‌ನಲ್ಲಿ 29,816, ಟರ್ಕಿಯಲ್ಲಿ 5115, ಜರ್ಮನಿಯಲ್ಲಿ 8,961, ಬೆಲ್ಜಿಯಂನಲ್ಲಿ 9732, ಕೆನಡಾದಲ್ಲಿ 8566, ನೆದರ್ ಲ್ಯಾಂಡ್ ನಲ್ಲಿ 6107, ಸ್ವೀಡನ್ನಲ್ಲಿ 5310, ಈಕ್ವೆಡಾರ್ ನಲ್ಲಿ 4502, ಸ್ವಿಟ್ಜರ್ ಲ್ಯಾಂಡ್ ನಲ್ಲಿ 1956, ಐರ್ಲೆಂಡ್ ನಲ್ಲಿ 1735 ಮತ್ತು ಪೋರ್ಚುಗಲ್ ನಲ್ಲಿ 1568 ಜನ ಸಾವನ್ನಪ್ಪಿದ್ದಾರೆ.