ಲೋಕದರ್ಶನ ವರದಿ
ಬ್ಯಾಡಗಿ10: ಸಕರ್ಾರದ ನೂತನ ಆಥರ್ಿಕ ನೀತಿಯಿಂದ ಬ್ಯಾಂಕ್ಗಳ ಮೇಲೆ ಜವಾಬ್ದಾರಿ ಹೆಚ್ಚಾಗಿದ್ದು ಅದರಲ್ಲೂ ನೋಟು ಅಮಾನ್ಯ ನಿಧರ್ಾರದ ಬಳಿಕ ಬ್ಯಾಂಕಿನ ಸಿಬ್ಬಂದಿ ಕಾರ್ಯವೈಖರಿಯನ್ನು ಭಾರತ ಸೇರಿದಂತೆ ಇಡೀ ವಿಶ್ವವೇ ಮೆಚ್ಚಿಕೊಂಡಿದೆ ಎಂದು ಕನರ್ಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿ) ಅಧ್ಯಕ್ಷ ಎಸ್.ರವೀಂದ್ರನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದಲ್ಲಿನ ಕನರ್ಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿ) ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ನೂತನ ಶಾಖಾ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಬಹು ಹಿಂದಿನಿಂದ ಲೂ ಬಹುತೇಕ ಬ್ಯಾಂಕ್ಗಳು ಗ್ರಾಹಕರಿಗೆ ಆಥರ್ಿಕ ಸೌಲಭ್ಯಗಳನ್ನು ನೀಡುವ ಮೂಲಕ ಆಥರ್ಿಕ ಭದ್ರತೆಯನ್ನು ಒದಗಿಸಿವೆ, ಹೀಗಿದ್ದರೂ ಶೇ.46 ರಷ್ಟು ಜನರು ಬ್ಯಾಂಕ್ ಖಾತೆಯನ್ನು ಹೊಂದದೇ ಇರುವುದು ವಿಷಾದಕರ ಸಂಗತಿ ಎಂದರು.
ಸಾರ್ವತ್ರಿಕ ಸತ್ಯ ಒಪ್ಪಿಕೊಳ್ಳಬೇಕು: ತಾಲೂಕ ಪಂಚಾಯತ ಅಧ್ಯಕ್ಷೆ ಸವಿತಾ ಸುತ್ತಕೋಟಿ ಮಾತನಾಡಿ, ದೇಶದ ಆಥರ್ಿಕ ಅಭ್ಯುದಯಕ್ಕೆ ಬ್ಯಾಂಕಿಂಗ್ ವ್ಯವಸ್ಥೆ ಕಾರಣವೆಂಬುದು ಸಾರ್ವತ್ರಿಕ ಸತ್ಯ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಆಥರ್ಿಕವಾಗಿ ಸ್ವಾವಲಂಬಿಯಾಗುವಲ್ಲಿ ಬ್ಯಾಂಕಿನ ಸೌಲಭ್ಯಗಳ ಸದ್ಭಳಕೆ ಮಾಡಿಕೊಳ್ಳಬೇಕಾಗುತ್ತದೆ, ಆಥರ್ಿಕ ಭದ್ರತೆಯ ದೃಷ್ಟಿಯಿಂದ ಮತ್ತು ಉಜ್ವಲ ಭವಿಷ್ಯಕ್ಕಾಗಿ ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ತಿಳಿದಕೊಳ್ಳುವುದರಲ್ಲಿ ತಪ್ಪೇನಿಲ್ಲ ಅದಾಗ್ಯೂ ಬ್ಯಾಂಕನ್ನೇ ಕಾಣದ ಕುಗ್ರಾಮಗಳು ದೇಶದಲ್ಲಿ ಬೇಕಾದಷ್ಟಿವೆ ಎಂದರು.
ಬದಲಾವಣೆ ಅನಿವಾರ್ಯ: ತಹಶೀಲ್ದಾರ ಶಿವಶಂಕರ ನಾಯಕ್ ಮಾತನಾಡಿ,ಬ್ಯಾಂಕ್ಗಳು ನೂತನ ತಂತ್ರಜ್ಞಾನದೊಂದಿಗೆ ಗ್ರಾಹಕರಿಗೆ ತ್ವರಿತ ಮತ್ತು ಪಾರದರ್ಶಕ ಸೇವೆ ಪೂರೈಸುವಲ್ಲಿ ಬದ್ಧವಾಗಿವೆ, ಆದರೆ ತಂತ್ರಜ್ಞಾನ ಮಾಹಿತಿ ಕೊರತೆಯಿಂದ ಸಾರ್ವನಿಕರ ಸಹಕಾರ ಕೊರತೆ ಎದ್ದು ಕಾಣುತ್ತಿದೆ, ಹೀಗಾಗಿ ಬಹುತೇಕ ಗ್ರಾಹಕರು ಸೌಲಭ್ಯಗಳನ್ನು ಪಡೆಯಲು ಅಷ್ಟೊಂ ದು ಉತ್ಸಾಹ ತೋರುತ್ತಿಲ್ಲ, ಬದಲಾವಣೆ ಜಗದ ನಿಯಮ ಗ್ರಾಹಕರು ಅನಿವಾರ್ಯವಾಗಿ ಒಂದೊಂದಾಗಿ ಮಾಹಿತಿ ಪಡೆದುಕೊಂಡು ಸಿಬ್ಬಂದಿಯೊಂದಿಗೆ ಸಹಕರಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಪಿ.ಆರ್.ಮಠದ, ದೇವರಾಜ ಬುಡ್ಡನಗೌಡ್ರ, ಗುಡ್ಡಪ್ಪ ಆಡಿನವರ, ಮಲ್ಲೇಶಪ್ಪ ಬಾಗೋಜಿ, ಬಿ.ಬಿ.ಕೊಪ್ಪದ ಹಾಗೂ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಾವೇರಿಯ ವಿಭಾಗೀಯ ಪ್ರಭಂದಕ ಬಿ.ವಾಸುದೇವ ಸ್ವಾಗತಿಸಿದರು, ಸಂಪಕರ್ಾಧಿಕಾರಿ ಉಲ್ಲಾಸ್ ಗುನಗಾ ನಿರೂಪಿಸಿದರು, ಶಾಖಾಧಿಕಾರಿ ವಿ.ವಿ.ಯಾಜಿ ವಂದಿಸಿದರು.